ಓಂ ನಗರದಲ್ಲಿ ಶ್ರೀ ಆಂಜನೇಯ ದೇವಸ್ಥಾನದ ಕಟ್ಟಡಕ್ಕೆ ಭೂಮಿಪೂಜೆ ಹಾಗೂ ಹಕ್ಕುಪತ್ರವನ್ನು ಶ್ರೀ ಆಂಜನೇಯ ಸೇವಾ ಸಮಿತಿಗೆ ಹಸ್ತಾಂತರ

ಕಲಬುರಗಿ: ನಗರದ ಸೇಡಂ ರಸ್ತೆಯ ಓಂ ನಗರ ಬಡಾವಣೆಯಲ್ಲಿ ಶ್ರೀ ಆಂಜನೇಯ ಸೇವಾ ಸಮಿತಿ (ರಿ) ವತಿಯಿಂದ ಶ್ರೀ ಆಂಜನೇಯ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ನಿರ್ಮಾಣಕ್ಕೆ ಸಂಬಂಧಿಸಿದ ಹಕ್ಕುಪತ್ರವನ್ನು ಶ್ರೀ ಆಂಜನೇಯ ಸೇವಾ ಸಮಿತಿಗೆ ಹಸ್ತಾಂತರಿಸಲಾಯಿತು.

ಬೆಳಗುಂಪಾ ಬ್ರಹ್ಮಮಠದ ಶ್ರೀ ಷ.ಬ್ರ. ಅಭಿನವ ಪರ್ವತಲಿಂಗೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಖ್ಯಾತ ಉದ್ಯಮಿಗಳಾದ ಚಿದಂಬರಾವ ಪಾಟೀಲ ಅವರು ಗೌರವಾಧ್ಯಕ್ಷತೆ ವಹಿಸಿದ್ದರು.

ಮಾಜಿ ಪಾಲಿಕೆ ಸದಸ್ಯರಾದ ಉಮೇಶ ಶೆಟ್ಟಿ ಹಾಗೂ ಆರ್.ಎಸ್. ಪಾಟೀಲ, ಶ್ರೀ ಆಂಜನೇಯ ಸೇವಾ ಸಮಿತಿ, ಕಲಬುರಗಿ ಅಧ್ಯಕ್ಷ ವೀರಕುಮಾರ ಎಸ್. ಪಾಟೀಲ, ಯು ವಿ ಚೌಹಾಣ್, ಬಂಡೆಪ್ಪ ರಾಜೇಶ್ವರ್, ಶಿವರಾಜ್ ಪಾಟೀಲ್, ಮಮತಾ ಪಾಟೀಲ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.