ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಯಡ್ರಾಮಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಯಡ್ರಾಮಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ಕಲಬುರಗಿ: ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ, ಕಲ್ಯಾಣ ಕರ್ನಾಟಕ ಅಧ್ಯಕ್ಷ ಮಲ್ಲಿಕಾರ್ಜುನ ನಾಯ್ಕೋಡಿ ಅವರ ಆದೇಶದ ಮೇರೆಗೆ ಯಡ್ರಾಮಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕಲ್ಯಾಣ ಕರ್ನಾಟಕ ಅಧ್ಯಕ್ಷ ಮಲ್ಲಿಕಾರ್ಜುನ ನಾಯ್ಕೋಡಿ ಹಾಗೂ ಜಿಲ್ಲಾಧ್ಯಕ್ಷ ಚಂದ್ರಕಾಂತ ಓಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆರವೇರಿತು.
ಯಡ್ರಾಮಿ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ವೀರೇಶ್ ಎಸ್. ಕವಲ್ದಾರ್ ಹಾಗೂ ತಾಲೂಕು ಅಧ್ಯಕ್ಷರಾಗಿ ಲಾಳೇಸಾಬ್ ಎಸ್. ಮನಿಯಾರ್ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರೈತ ಸಂಘದ ಸದಸ್ಯರಾದ ರಮೇಶ್ ದೇವರಮುನಿ, ಮೋಹನ್ ಕುಮಾರ್, ಗುರಣ್ಣ ಸಾಹು, ಅಡ್ಗಿ ಜೋಳ, ಪರಶುರಾಮ್ ಗುತ್ತೇದಾರ್, ಬಸಯ್ಯಸ್ವಾಮಿ ಹಿರೇಮಠ, ದೇವೇಂದ್ರಪ್ಪ ಗೌಡ ಮಾಲಿ ಪಾಟೀಲ್, ಮಲ್ಲಿಕಾರ್ಜುನ ಜಾನೆ ಹಾಗೂ ಶರಣಬಸಪ್ಪ ವೈಜಾಪುರ ಉಪಸ್ಥಿತರಿದ್ದರು.

