ಸಾಧಕರಿಗೆ 'ಹೆಮ್ಮೆಯ ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ
ಸಾಧಕರಿಗೆ 'ಹೆಮ್ಮೆಯ ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ
ಬೆಳಗಾವಿಯ ಅನ್ನಪೂರ್ಣೇಶ್ವರಿ ಹ್ಯುಮ್ಯಾನಿಟಿ ಫೌಂಡೇಶನ್ ವತಿಯಿಂದ ೭೦ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಹಾಗೂ ರಾಜ್ಯಮಟ್ಟದ "ಹೆಮ್ಮೆಯ ಕರ್ನಾಟಕ ರತ್ನ" ಪ್ರಶಸ್ತಿ ಪ್ರದಾನ ಸಮಾರಂಭ – ೨೦೨೬ ನಗರದ ಜೆ. ಸಿ. ರಸ್ತೆಯ ನಯನ ರಂಗಮಂದಿರದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಂಜನಾದ್ರಿ ಸಿದ್ದಿಪೀಠಮ್ ನ ಚರಣ್ ಭಾರದ್ವಾಜ್ ಶರ್ಮ ಗುರೂಜಿ ,ಗೋಕಾಕ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಸುಭಾಷ್ ಗೌಡಪ್ಪ ಬಿರಾದಾರ ಪಾಟೀಲರವರು ಬೆಂಗಳೂರಿನ ಜನನಿ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಪದ್ಮಾವತಿ ಕೆ.ವಿ. ರವರ ಶೈಕ್ಷಣಿಕ ಸಾಧನೆಗೆ ಡಾ .ಸರ್ವೆಪಲ್ಲಿ ರಾಧಾಕೃಷ್ಣನ್ ಸದ್ಭಾವನಾ ಪ್ರಶಸ್ತಿ , ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ 'ಶ್ರೀಕೃಷ್ಣದೇವರಾಯ ಸದ್ಭಾವನಾ ಪ್ರಶಸ್ತಿ'ನೀಡಿ ಸನ್ಮಾನಿಸಲಾಯ್ತು .
ಸಮಾಜಮುಖಿ ಚಿಂತನೆಗಳೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿ ಸಾಧನೆಗೈದ ಗಣ್ಯರನ್ನು "ಹೆಮ್ಮೆಯ ಕರ್ನಾಟಕ ರತ್ನ" ಪ್ರಶಸ್ತಿ ನೀಡಿ ಗೌರವಿಸಲಾಯಿತು.ಯುವ ಪ್ರತಿಭೆಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು , ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ನಿತ್ಯಾ ಎಂ ಆಚಾರ್ , ಗೀತಾ ಆನಂದ ಜಾಧವ್ ,ಅನ್ನಪೂರ್ಣೇಶ್ವರಿ ಹ್ಯುಮ್ಯಾನಿಟಿ ಫೌಂಡೇಶನ್‌ನ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಮಹಾಂತೇಶ ಎಸ್. ಕಡಲಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು . ರಮೇಶ ವಿ ಕಾಂಬಳೆ ಕಾರ್ಯಕ್ರಮವನ್ನು ನಿರೂಪಿಸಿದರು.

