ರವಿ ಹಂಜಿಯನ್ನು ಮುಲಾಜಿಲ್ಲದೆ ಬಂಧಿಸಿ

ರವಿ ಹಂಜಿಯನ್ನು ಮುಲಾಜಿಲ್ಲದೆ ಬಂಧಿಸಿ

ರವಿ ಹಂಜಿಯನ್ನು ಮುಲಾಜಿಲ್ಲದೆ ಬಂಧಿಸಿ.

ಶಹಪುರ : ಇಡೀ ಮಾನವ ಕುಲಕ್ಕೆ ವಚನ ಸಾಹಿತ್ಯದ ಮೂಲಕ ಬೆಳಕು ಚೆಲ್ಲಿ ಕಾಯಕ,ನಿಷ್ಠೆ,ತೋರಿದ ಮಹಾ ಮಾನವತವಾಗಿ ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ರವಿ ಹಂಜಿಯನ್ನು ಮುಲಾಜಿ ಇಲ್ಲದೆ ಬಂಧಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಶಹಪುರ ಘಟಕದ ವತಿಯಿಂದ ಮಾನ್ಯ ತಹಶೀಲ್ದಾರರ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ವಿಶ್ವಕ್ಕೆ ಸೂಕ್ತ ಸಂದೇಶವನ್ನು ಕೊಟ್ಟು ಅನುಭವ ಮಂಟಪವನ್ನು ಸ್ಥಾಪಿಸಿ,ಜಾತಿ, ಮತ,ಪಂಥ,ಭೇದವಿಲ್ಲದೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊಟ್ಟ ಮೊದಲ ಬಾರಿಗೆ ಪರಿಚಯಿಸಿಕೊಟ್ಟ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ,ಇಂತಹ ಮಹಾನ್ ವ್ಯಕ್ತಿಯ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ,ಬಸವ ಮಂಟಪ ಕೃತಿಯಲ್ಲಿ ಶರಣರ ವಾಸ್ತವಿಕ ಸಂದೇಶಗಳನ್ನು ತಿರಿಸಲಾಗಿದೆ ಈ ಕೃತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು,ಯಾವುದೇ ಕಾರಣಕ್ಕೂ ಬಿಡುಗಡೆಗೊಳಿಸಬಾರದು ಎಂದು ಶರಣ ಸಾಹಿತ್ಯ ಪರಿಷತ್ತು ಒತ್ತಾಯಿಸಿತು.

ಸುಳ್ಳು ವಿಚಾರಗಳ ಮೂಲಕ,ಶರಣ ಸಂಸ್ಕೃತಿಯ ಪರಂಪರೆಗೆ ಹಾಗೂ ಬಸವ ಅನುಯಾಯಿಗಳಿಗೆ ಮತ್ತು ಲಿಂಗಾಯತರ ಭಾವನೆಗಳಿಗೆ ಧಕ್ಕೆ ತರುವ ಕೆಲಸಕ್ಕೆ ಮುಂದಾಗಿರುವವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು,ಅಲ್ಲದೆ ಇಂತಹ ದುರ್ವರ್ತನೆ ಕೆಲಸಕ್ಕೆ ಕೈ ಹಾಕಿದವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಶಹಾಪೂರು ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲಿಂಗಣ್ಣ ಪಡಶೆಟ್ಟಿ,ಪದಾಧಿಕಾರಿಗಳಾದ ಚಂದ್ರಶೇಖರ ಸಾಹು,ಆರಬೋಳ ಸಿದ್ದಲಿಂಗಪ್ಪ ಆನೆಗುಂದಿ,ಬಸನಗೌಡ ಮಾಲಿ ಪಾಟೀಲ್,ಡಾ.ದೇವೇಂದ್ರಪ್ಪ ಹಡಪದ,ಸಾಹಿತಿ ಬಸವರಾಜ ಸಿನ್ನೂರ,ಶೇಖರಪ್ಪ ಅರಕೇರಿ,ಲಕ್ಷ್ಮಣ ಹನುಮಂತ,ಶ್ರೀನಿವಾಸ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.