ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ : ಐನೋಳಿ ಶಶಿಧರ್ ನಾಗಶೆಟ್ಟಿ ಪುಣ್ಯಶೆಟ್ಟಿ ಟ್ರಸ್ಟ್ ವತಿಯಿಂದ ಅತಿ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ 10 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಣೆ
ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ : ಐನೋಳಿ ಶಶಿಧರ್ ನಾಗಶೆಟ್ಟಿ ಪುಣ್ಯಶೆಟ್ಟಿ ಟ್ರಸ್ಟ್ ವತಿಯಿಂದ ಅತಿ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ 10 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಣೆ
ಕಲ್ಯಾಣ ಕರ್ನಾಟಕದ ಅಹಿಂದ ನಾಯಕ ಸಚಿವ ಪ್ರಿಯಾಂಕ್ ಖರ್ಗೆ : ಜಿ. ಪಂ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ
ಚಿಂಚೋಳಿ : ಕಲ್ಯಾಣ ಕರ್ನಾಟಕ ಭಾಗದ ಅಹಿಂದ ನಾಯಕರಾಗಿ ಬಡವರ, ಯುವಕರ ಪರ ಅನೇಕ ಒಳ್ಳೆಯ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ಉತ್ತಮ ಆಡಳಿತವನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡುತ್ತಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದೀಪಾಕನಾಗ ಪುಣ್ಯಶೆಟ್ಟಿ ಅವರು ತಿಳಿಸಿದರು.
ತಾಲೂಕಿನ ಐನೋಳಿ ಗ್ರಾಮದ ಶಶಿಧರ ನಾಗಶೆಟ್ಟಿ ಪುಣ್ಯಶೆಟ್ಟಿ ಸರಕಾರಿ ಪ್ರೌಢ ಶಾಲೆಯಲ್ಲಿ ಗೃಹ ಮತ್ತು ಐಟಿಬಿಟಿ ಹಾಗೂ ಇ ಆಡಳಿತ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ತಾಲೂಕಿನ ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳಲ್ಲಿನ 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 10 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ ವಿತರಣೆ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಪ್ರಿಯಾಂಕ್ ಖರ್ಗೆ ಅವರು ತೋರಿಕೆ ವ್ಯಕ್ತಪಡಿಸುವ ಹಾರ, ಶಾಲು, ಬೋಕ್ಕೆ, ಕೇಕ್ ಗಳಂತಹ ವೈಭವಿಕರಣದ ಆಡಂಬರ ಖರ್ಚು ಮಾಡುವ ವ್ಯವಸ್ಥೆ ಮಾಡಿಕೊಳ್ಳದೆ ನಾಲ್ಕು ಜನರಿಗೆ ಉಪಯೋಗ ಆಗುವಂತಹ ಜನ್ಮದಿನ ಆಚರಣೆ ಮಾಡದರೆ ಅದು ಉಯುಕ್ತ ಆಗುತ್ತದೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಂಡಿದ್ದರು. ಅದರಂತೆ ಅವರ ಜನ್ಮ ದಿನದ ಅಂಗವಾಗಿ ತಾಲೂಕಿನ ಸರಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಗಳಲ್ಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 10 ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ ವಿತರಣೆ ಹಾಗೂ ಸನ್ಮಾನ ಸಮಾರಂಭ ಶಶಿಧರ ನಾಗಶೆಟ್ಟಿ ಪುಣ್ಯಶೆಟ್ಟಿ ಚಾರಿಟಿ ಟ್ರಸ್ಟ್ ಹಮ್ಮಿಕೊಂಡಿದೆ.
ಸಚಿವ ಪ್ರಿಯಾಂಕ್ ಅವರು ಬಡವರ, ಯುವಕರ ಕಲ್ಯಾಣಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡುತ್ತಿದ್ದು, ಅವರು ಈ ಭಾಗದ ಅಂಹಿದ ನಾಯಕರಾಗಿದ್ದಾರೆ ಎಂದರು.
ಐನೋಳಿ ಗ್ರಾಮದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತಗೋಳಬಾರದದೆಂದು ಐನೋಳಿ ಪ್ರೌಢಶಾಲೆ ಕಟ್ಟಡಕ್ಕೆ ಎರಡು ಎಕರೆ ಜಮೀನು ನಮ್ಮ ತಂದೆ ಶಶಿಧರ ನಾಗಶೆಟ್ಟಿ ಪುಣ್ಯಶೆಟ್ಟಿ ನೀಡಿದರು ಎಂದು ನೆನಪಿಸಿದರು.
ಬಿಇಒ ಧೂಳಪ್ಪ ಅವರು ಮಾತನಾಡಿ,
ಶಿಕ್ಷಣ ಕ್ಷೇತ್ರವು ಪವಿತ್ರ ಕ್ಷೇತ್ರ ಆಗಿದೆ. ವಿಶ್ವದಲ್ಲಿ ಅತ್ಯಂತ ಶ್ರೇಷ್ಠದಾನ ಅಂದರೆ ಶಿಕ್ಷಣ. ಶಶಿಧರ ನಾಗಶೆಟ್ಟಿ ಪುಣ್ಯಶೆಟ್ಟಿ ಚಾರಿಟಿ ಟ್ರಸ್ಟ್ ಶೈಕ್ಷಣಿಕ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ನೇರವು ನೀಡಲು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನಿಯ. ಶಿಕ್ಷಣದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಟ್ರಸ್ಟ್ ಗಳ ಮತ್ತು ಸಮಾಜದ ಸಹಭಾಗಿತ್ವ ಅವಶ್ಯಕವಾಗಿ ಇದ್ದಾಗಲೇ ಶೈಕ್ಷಣಿಕ ಬೆಳೆವಣಿಗೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ಗ್ಯಾರೆಂಟಿ ಸಮಿತಿ ಉಪಾಧ್ಯಕ್ಷ ನರಸಿಂಹಲು ಕುಂಬಾರ, ಚಿಂಚೋಳಿ ಪುರಸಭೆ ಮಾಜಿ ಅಧ್ಯಕ್ಷ ಆನಂದಕುಮಾರ ಟೈಗರ್, ಶಿಕ್ಷಣ ಇಲಾಖೆ ಸಮನ್ವಯ ಅಧಿಕಾರಿ ಎನ್ ಭದ್ರಶೆಟ್ಟಿ, ನಿವೃತ್ತ ಸೈನಿಕ ದೇವೀಂದ್ರಪ್ಪ ಕಟೋಳ್ಳಿ ಅವರು ಮಾತನಾಡಿದರು.
• ಪ್ರಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಣೆ :
ಪೋಲಕಪಳ್ಳಿ ಆದರ್ಶ ವಿದ್ಯಾಲಯದ ಪ್ರೀತಿ ಶಿವಶಂಕುಮಾರ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸೌಮ್ಯಾ ಶರಣಪ್ಪ, ಪೋಲಕಪಳ್ಳಿ ಆರ್. ಎಂ. ಎಸ್. ಎ ಶಾಲೆಯ ಅರುಣದತಿ ಗುಣಶೀಲ್, ಕುಂಚಾವರಂ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯ ಗಣೇಶ ಜಿತೇಂದ್ರ, ಸೇವಾಲಾಲ್ ಹೀರಾಸಿಂಗ್, ಆರ್. ಎಂ. ಎಸ್. ಎ ಪೋಲಕಪಳ್ಳಿ ವಿಶ್ವವಾಣಿ ತುಕರಾಮ್ ಹಾಗೂ ಆಯನ್ ಯುಸೂಫ್ ಪಟೇಲ್, ಕೊಡ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮಾಯವತಿ ಚಿನ್ನ ರಾಠೋಡ್ ಹಾಗೂ ಪ್ರಜ್ಞೆ ಪರಮೇಶ್ವರ್, ಕುಂಚಾವರಂ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯ ವಿರಾಜ್ ಶಂಕರ ವಿದ್ಯಾರ್ಥಿಗಳಿಗೆ ಶಶಿಧರ ನಾಗಶೆಟ್ಟಿ ಪುಣ್ಯಶೆಟ್ಟಿ ಟ್ರಸ್ಟ್ ವತಿಯಿಂದ ಪ್ರಥಮ ಸ್ಥಾನಕ್ಕೆ 25 ಸಾವಿರ ರು ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
• ಸಚಿವರ ಜನ್ಮದಿನ ಕೇಕ್ ಕತ್ತರಿಸಿದ ವಿದ್ಯಾರ್ಥಿಗಳು :
ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ನಿಮಿತ್ಯವಾಗಿ ಐನೋಳಿ ಶಶಿಧರ ನಾಗಶೆಟ್ಟಿ ಪುಣ್ಯಶೆಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದ ಅತಿಥಿ ಮುಖಂಡರೂಗಳೊಂದಿಗೆ ಕೇಕ್ ಕತ್ತರಿಸಿ ಹಂಚಿ ಸಚಿವರ ಜನ್ಮ ದಿನ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಜನಾರ್ಧನ್ ಪಾಟೀಲ್, ಪಿಡಿಓ ಸಂತೋಷ ಪಾಟೀಲ್, ಶಾಲೆಯ ಮುಖ್ಯಗುರು ಶಶಿಧರ್ ಧನಶ್ರೀ ಗ್ರಾ. ಪಂ. ಮಾಜಿ ಅಧ್ಯಕ್ಷ ಅಶೋಕ ಭಜಂತ್ರಿ, ದೈಹಿಕ ಶಿಕ್ಷಣ ಶಿಕ್ಷಕ ಶಶಿಧರ್, ಕೆಜಿಬಿ ಬ್ಯಾಂಕ್ ವ್ಯವಸ್ಥಾಪಕ ಆಸ್ಮಿತ ಚಿಂತಕುಂಟ, ಶರಣು ಪಪ್ಪಾ ಅವರು ಹಾಗೂ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದ್ದರು.

