ಶಾಂತಿ ಮಂತ್ರದ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಜೀವನವನ್ನೇ ತ್ಯಾಗ ಮಾಡಿದರು: ಪವನ್‌ಕುಮಾರ್

 ಶಾಂತಿ ಮಂತ್ರದ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಜೀವನವನ್ನೇ ತ್ಯಾಗ ಮಾಡಿದರು: ಪವನ್‌ಕುಮಾರ್

ಕಲಬುರ್ಗಿ : ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸೆ ಹಾಗೂ ಶಾಂತಿಯ ಮಂತ್ರದ ಮೂಲಕ ಹೋರಾಡಿ, ದೇಶವನ್ನು ಸ್ವಾತಂತ್ರ್ಯಗೊಳಿಸಲು ತಮ್ಮ ಸಂಪೂರ್ಣ ಜೀವನವನ್ನೇ ತ್ಯಾಗ ಮಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿಯನ್ನು ಇಂದು ಅರ್ಥಪೂರ್ಣವಾಗಿ ಆಚರಿಸಲಾಯಿತು ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪವನ್‌ಕುಮಾರ್ ಹೊಳಕೇರಿ ಹೇಳಿದರು.

ತೆಲ್ಕರ್ ನಗರ, ನಂದಿಕೂರ ಬಡಾವಣೆಯಲ್ಲಿರುವ ಶ್ರೀ ವೆಂಕಟಗಿರಿ ಗ್ರಾಮೀಣಾಭಿವೃದ್ಧಿ ಸೌಹಾರ್ದ ಸಹಕಾರಿ ನಿಯಮಿತದ ಆವರಣದಲ್ಲಿ ಮಹಾತ್ಮ ಗಾಂಧೀಜಿಯವರ ಜಯಂತಿ ಅಂಗವಾಗಿ ಸಸ್ಯಗಳಿಗೆ ನೀರು ಉಣಿಸಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.

  ಗಾಂಧೀಜಿಯವರ ಸರಳತೆ, ಅಹಿಂಸೆ, ಸತ್ಯ ಮತ್ತು ಶಾಂತಿಯ ತತ್ವಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಲ್ಲಣ್ಣಗೌಡ ನಂದಿಕೂರ, ರವೀಂದ್ರ ವಿಭೂತಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಅನಿತಾ ಪವನ್‌ಕುಮಾರ್ ವಳಕೇರಿ, ರೋಷಬಿ ಹಮಿರಾಸಾಬ ಊತನಾಲ್, ಪವನ್‌ಕುಮಾರ್ ಬಿ. ವಳಕೇರಿ, ವಿಠ್ಠಬಾಯಿ ಪಾಟೀಲ, ವಿಜಯಕುಮಾರ್ ಮಾಣಿಕರಾವ್, ಹೂವಣ್ಣಗೌಡ, ರಾಹುಲ್, ರಮೇಶ್, ಸೋನು, ತೇಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.