ಸಂವಿಧಾನ ದಿನಾಚರಣೆಯಲ್ಲಿ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಅಭಿಮತ ಪ್ರಜೆಗಳ ಭರವಸೆಯ ಬದುಕಿಗೆ ಸಂವಿಧಾನವೇ ಬೆಳಕು
ಸಂವಿಧಾನ ದಿನಾಚರಣೆಯಲ್ಲಿ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಅಭಿಮತ
ಪ್ರಜೆಗಳ ಭರವಸೆಯ ಬದುಕಿಗೆ ಸಂವಿಧಾನವೇ ಬೆಳಕು
ಕಲಬುರಗಿ: ಭವ್ಯ ಭಾರತದ ಪ್ರಜೆಗಳ ಭರವಸೆಯ ಬದುಕಿಗೆ ಸಂವಿಧಾನ ಬೆಳಕು ನೀಡಿದೆ. ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯದಿಂದ ಸೌಖ್ಯ ವಾತಾವರಣದಲ್ಲಿ ನೆಮ್ಮದಿ ಬದುಕನ್ನು ಕಾಣಲು ಸಾಧ್ಯವಾಗುತ್ತಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಮಹಾತ್ಮಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ 'ಸಂವಿಧಾನ ದಿನಾಚರಣೆ'ಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರ ಮತ್ತು ಸಂವಿಧಾನ ಪೀಠಿಕೆಗೆ ಪುಷ್ಪ ಸಮರ್ಪಿಸಿ ಮಾತನಾಡಿದರು.
ದೇಶದ ಆಡಳಿತಕ್ಕೆ ಅಗತ್ಯ ಸಂವಿಧಾನ ಬೇಕೆಂದು ವಿದೇಶಗಳ ಸಂವಿಧಾನ ಅಧ್ಯಯನ, ಸಮಾಜದ ಬಾದ್ಯತೆಗಳ ಬಗ್ಗೆ ಚಿಂತನೆ ನಡೆಸಿ ಸರ್ವಶ್ರೇಷ್ಠ ಸಂವಿಧಾನವನ್ನು ಬರೆದಿದ್ದಾರೆ. ಸಂವಿಧಾನದ ಆಶೋತ್ತರಗಳಿಗೆ ತಕ್ಕಂತೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ, ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿಗೆ ಸಂವಿಧಾನದ ಆಶಯದಿಂದ ಸಾಧ್ಯವಾಗಿದೆ. ಯುವಜನತೆ ಸಂವಿಧಾನ ಸ್ವಾತಂತ್ರö್ಯ, ಸಮಾನತೆ, ಸಾಮಾಜಿಕ ನ್ಯಾಯ, ಸಹೋದರತೆಯ ಅಂಶಗಳನ್ನು ಅಳವಡಿಸಿಕೊಂಡು ಜಾತಿ, ಧರ್ಮ, ಬೇದವಿಲ್ಲದೆ ಬಯಸಿದಂತೆ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಸ್. ಎ. ಪಾಳೇಕರ ಮುಖ್ಯ ಅತಿಥಿಯಾಗಿ ಮಾತನಾಡಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟçವಾಗಿದ್ದು, ನ. ೨೬, ೧೯೪೯ ರಂದು ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಸಂವಿಧಾನ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ. ಭಾರತೀಯರಿಗೆ ಇದೊಂದು ಪವಿತ್ರ ದಿನ. ಸಂವಿಧಾನದ ಆಶಯ, ಮೌಲ್ಯಗಳು, ಪ್ರಜಾಪ್ರಭುತ್ವದ ಮಹತ್ವಗಳನ್ನು ಕುರಿತು ಯುವಜನತೆಗೆ ಅರಿವು ಮೂಡಿಸುವ ಉದ್ದೇಶದಿಂದ ೨೦೧೫ರಿಂದ ಸಂವಿಧಾನ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ಅಪ್ರತಿಮ ಮೇಧಾಶಕ್ತಿ, ಬೌದ್ದಿಕ ತಪಸ್ಸು, ಪ್ರಜಾಪ್ರಭುತ್ವದ ಚಿಂತನೆಯ ಅಪಾರ ಜ್ಞಾನದಿಂದ ಬೃಹತ್ ಸಂವಿಧಾನ ಸಾಧ್ಯವಾಗಿದೆ. ಸುಮಾರು ೩೨ ಪದವಿ ಪಡೆದಿರುವ ಡಾ. ಬಿ. ಆರ್. ಅಂಬೇಡ್ಕರ್ ಅವರು ಪ್ರಾನ್ಸ್, ಅಮೇರಿಕಾ, ಇಂಗ್ಲೆAಡ್, ರ್ಲೆಂಡ್ ಮುಂತಾದ ದೇಶಗಳ ಸಂವಿಧಾನಗಳನ್ನು ಅಧ್ಯಯನ ನಡೆಸಿದರು. ಸುಮಾರು ೨ ವರ್ಷ, ೧೧ ತಿಂಗಳು, ೧೮ ದಿನಗಳ ನಿರಂತರ ಪರಿಶ್ರಮದಿಂದ ರೂಪಿಸಿದ ಲಿಖಿತ ಸಂವಿಧಾನವನ್ನು ನ. ೨೬, ೧೯೪೯ ರಂದು ಸಮರ್ಪಿಸಿದರು. ಸಂಸದೀಯ ಆಡಳಿತ ವ್ಯವಸ್ಥೆಗೆ ಅನುಗುಣವಾದ ಅಂಶಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಮೂಲಭೂತ ಹಕ್ಕುಗಳು, ಕರ್ತವ್ಯಗಳು, ನಿರ್ದೇಶಕ ತತ್ವಗಳು, ತಿದ್ದುಪಡಿ ಅವಕಾಶ, ಹಿಂದು ಕೋಡ್ ಬಿಲ್, ಕಾರ್ಮಿಕರು ಮತ್ತು ಮಹಿಳೆ ಶೋಷಣೆ ಮುಂತಾದ ಅಂಶಗಳ ಬಗ್ಗೆ ವಿವರಿಸಿದರು.
ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ. ಹೂವಿನಭಾವಿ ಬಾಬಣ್ಣ ಸಂವಿಧಾನ ಪೀಠಿಕೆ ಬೋಧಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಅಪಾರ ಜ್ಞಾನ ಪಾಂಡಿತ್ಯದಿಂದ ಇಡೀ ಜಗತ್ತು ಅವರನ್ನು ‘ಜ್ಞಾನದ ಸಂಕೇತ’ ಎಂದು ಕರೆಯುತ್ತಿದೆ. ವಿದೇಶದಲ್ಲಿ ಓದಿ ದೇಶದ ಅನೇಕ ಸಮಸ್ಯೆ ಮತ್ತು ಸವಾಲುಗಳಿಗೆ ಸ್ಪಂದಿಸಿ ಪರಿಹಾರ ದೊರಕಿಸಿದ್ದಾರೆ. ಒಬ್ಬ ಶ್ರೇಷ್ಠ ಸಮಾಜಶಾಸ್ತçಜ್ಞ, ನ್ಯಾಯಶಾಸ್ತçಜ್ಞ, ಆರ್ಥಿಕ ತಜ್ಞ, ದಾರ್ಶನಿಕ, ದೇಶಪ್ರೇಮಿಯಾಗಿ ವೈವಿದ್ಯಯ ಸಮಾಜದ ಶಾಸ್ವತ ಸುಧಾರಣೆಗೆ ಶ್ರಮಿಸಿದ್ದಾರೆ. ಸಂವಿಧಾನ ರಚನೆ, ರಚನಾ ಸಭೆಯಲ್ಲಿನ ಚರ್ಚೆಯ ಬಗ್ಗೆ ವಿವರಿಸಿದರು.
ಸಿಂಡಿಕೇಟ್ ಸದಸ್ಯ ಎಸ್. ಪಿ. ಸುಳ್ಳದ್ ಮಾತನಾಡಿ ಇಡೀ ದೇಶದ ಜನರಿಗೆ ಒಂದೇ ಸಂವಿಧಾನವಿದೆ. ವಿವಿಧ ಸಂಸ್ಕೃತಿ, ಬಾಷೆ, ವೈವಿಧ್ಯತೆಯಿದೆ. ಸರ್ವರನ್ನು ಒಳಗೊಳ್ಳುವ ಮೌಲ್ಯಗಳನ್ನು ಅಂಬೇಡ್ಕರ್ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಪಟದಟಭದ್ರ ಹಿತಾಸಕ್ತಿಗಳಿಂದ ಸಂವಿಧಾನ ಬದಲಾವಣೆ ಹುನ್ನಾರ ನಡೆದಿದೆ. ಯುವಕರು, ನಾಗರೀಕರು ಎಚ್ಚರದಿಂದಿರಬೇಕು. ಸಮಾಜದಲ್ಲಿ ಜಾತಿ, ಧರ್ಮ ಸಂಘರ್ಷವನ್ನು ಮುನ್ನೆಲೆಗೆ ತಂದು ಕಲುಷಿತಗೊಳಿಸಲಾಗುತ್ತಿದೆ. ಸಂವಿಧಾನ ಆಶಯವನ್ನು ಅರಿಕೊಳ್ಳಬೇಕು ಎಂದರು.
ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ. ದೇವಿದಾಸ್ ಜಿ. ಮಾಲೆ, ಮೌಲ್ಯಮಾಪನ ಕುಲಸಚಿವೆ ಪ್ರೊ. ಅಶ್ವಿನಿ ಬಿ. ಜಾನೆ, ಹಣಕಾಸು ಅಧಿಕಾರಿ ಶ್ರೀಮತಿ ಜಯಾಂಬಿಕ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ಪ್ರಾಧ್ಯಾಪಕರು, ಅತಿಥಿ ಅಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಗೀತ ವಿಭಾಗದ ಅತಿಥಿ ಅಧ್ಯಾಪಕರಾದ ಸಿದ್ದಾರ್ಥ್ ಚಿನ್ಮಯಿ ಇದ್ಲಾಯಿ ಹಾಗೂ ಸಂಗಡಿಗರು ನಾಡಗೀತೆ, ರಾಷ್ಟçಗೀತೆ ಪ್ರಸ್ತುತಪಡಿಸಿದರು. ಆಡಳಿತ ವಿಶೇಷಾಧಿಕಾರಿ ಪ್ರೊ. ರಮೇಶ್ ರಾಥೋಡ್ ಅತಿಥಿ ಪರಿಚಯಿಸಿದರು. ಪ್ರೊ. ಬಸವರಾಜ್ ಸಣ್ಣಕ್ಕಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಹೆಚ್. ಜಂಗೆ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಡಾ. ಎನ್. ಜಿ. ಕಣ್ಣೂರು ವಂದಿಸಿದರು.
.

