ಸೇವೆಯ ಬಾಳು ಮನುಷ್ಯನ ಬದುಕಿನ ಸಾರ್ಥಕತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನಾಚರಣೆ ಡಾ. ಸದಾನಂದ ಪೆರ್ಲ ಅಭಿಮತ

ಸೇವೆಯ ಬಾಳು ಮನುಷ್ಯನ ಬದುಕಿನ ಸಾರ್ಥಕತೆ  ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನಾಚರಣೆ ಡಾ. ಸದಾನಂದ ಪೆರ್ಲ ಅಭಿಮತ

ಸೇವೆಯ ಬಾಳು ಮನುಷ್ಯನ ಬದುಕಿನ ಸಾರ್ಥಕತೆ

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನಾಚರಣೆ ಡಾ. ಸದಾನಂದ ಪೆರ್ಲ ಅಭಿಮತ

 ಕಲಬುರಗಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನವನ್ನು ನವೆಂಬರ್ 24 ರಂದು ಎಲ್ಲೆಡೆ, "ಸೇವಾ ದಿನ"ವನ್ನಾಗಿ ಆಚರಿಸುವ ಮೂಲಕ ಮೌಲ್ಯ ತಂದುಕೊಡಲಾಗಿದೆ. ಮನುಷ್ಯನ ಬದುಕಿನ ಸಾರ್ಥಕತೆಯು ಸೇವೆಯ ಬಾಳಿನಲ್ಲಿ ನೆಲೆಗೊಂಡಿದೆ ಎಂದು ಆಕಾಶವಾಣಿ ನಿವೃತ್ತ ಕಾರ್ಯಕ್ರಮಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಅಭಿಪ್ರಾಯಪಟ್ಟರು.

    ಕಲಬುರಗಿಯ ಕೋಟನೂರ ಡಿ ಗ್ರಾಮದ ಯಲ್ಲಾಲಿಂಗ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಲ್ಲಾ ಲಿಂಗ ನಿರ್ಗತಿಕ ಮಕ್ಕಳ ಕುಟೀರದಲ್ಲಿ ನವೆಂಬರ್ 24ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರ ಜನ್ಮದಿನವನ್ನು ಸೇವಾ ದಿನವನ್ನಾಗಿ ಆಚರಿಸಿ ಶಾಲಾ ಮಕ್ಕಳಿಗೆ ಹಣ್ಣು ಹಂಪಲು ಆಹಾರ ಸಾಮಗ್ರಿ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬದುಕನ್ನು ಸೇವೆಗಾಗಿ ಮೀಸಲಿಟ್ಟು ಪ್ರಧಾನ ಮಂತ್ರಿ ಕಚೇರಿಯದು ಸೇವಾ ತೀರ್ಥ ಎಂದು ಕರೆದಿದ್ದಾರೆ ರಾಷ್ಟ್ರಕ್ಕಾಗಿ 20 ಗಂಟೆಗಳಷ್ಟು ಸೇವೆ ಸಲ್ಲಿಸುತ್ತಿದ್ದು ದೇಶಕ್ಕೆ ಮಾದರಿಯಾಗಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನೇಕ ಸೇವಾ ಪ್ರಕಲ್ಪಗಳನ್ನು ಆರಂಭಿಸಿ ಇಡೀ ರಾಜ್ಯದಲ್ಲಿ ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಶೋಷಿತರ ದೀನದಲಿತರ ಬಡವರ ನೊಂದವರ ಕಣ್ಣೀರು ಒರೆಸುವ ಹಾಗೂ ನೆರವು ನೀಡುವ ಮೂಲಕ ಸೇವಾ ಕಾರ್ಯಗಳನ್ನು ನಡೆಸಿ ಜನಾನುರಾಗಿದ್ದಾರೆ ಅವರ ಜನ್ಮದಿನವನ್ನು ಸೇವಾ ದಿನವಾಗಿ ಘೋಷಿಸಿ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದು ಡಾ.ಪೆರ್ಲ ಹೇಳಿದರು.

     ಕಾರ್ಯಕ್ರಮದಲ್ಲಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ದಿನೇಶ ಪೂಜಾರಿ ಜನಜಾಗೃತಿಯ ಜಿಲ್ಲಾಧ್ಯಕ್ಷರಾದ, ಜನಜಾಗೃತಿ ಅಧ್ಯಕ್ಷರಾದ ಸಿ.ಎನ್ ಬಾಬಳಗಾoವ, ಯೋಜನೆ ಜಿಲ್ಲಾ ನಿರ್ದೇಶಕರಾದ ಗಣಪತಿ ಮಳಿಂಜೆ, ಯೋಜನಾಧಿಕಾರಿ ಸಂಗಪ್ಪ ಸಂಗಳದ ಮಹಿಳಾ ಒಕ್ಕೂಟದ ಅಧ್ಯಕ್ಷ ಸರೋಜಾ ಶಂಕರಯ್ಯ ಹಿರೇಮಠ ಶಾಲೆಯ ಅಧ್ಯಕ್ಷ ಶರಣಪ್ಪ ಕೆ ಗೋಟೂರ ಶಿಕ್ಷಕರಾದ ಭಾಗ್ಯಶ್ರೀ ಅಶ್ವಿನಿ ಪದ್ಮಾವತಿ ಸ್ವಾತಿ ಶರಣಪ್ಪ ಉಪಸ್ಥಿತರಿದ್ದರು ಸೇವಾ ದಿನದ ಅಂಗವಾಗಿ ಕಲಬುರಗಿ ನಗರದ ವಿವಿಧ ಕಡೆಗಳ ವೃದ್ಧಾಶ್ರಮ ನಿರ್ಗತಿಕರ ಕೇಂದ್ರಗಳಲ್ಲಿ ಹಣ್ಣು ಹಂಪಲು ಹಾಗೂ ಆಹಾರ ಸಾಮಗ್ರಿ ವಿತರಿಸಲಾಯಿತು.