ಡಾ: ಡಿ.ವೀರೇಂದ್ರ ಹೆಗ್ಗಡೆ ಯವರ ಹುಟ್ಟುಹಬ್ಬ ವೃದ್ಧಾಶ್ರಮದಲ್ಲಿ ಆಚರಣೆ
ಡಾ: ಡಿ.ವೀರೇಂದ್ರ ಹೆಗ್ಗಡೆ ಯವರ ಹುಟ್ಟುಹಬ್ಬ ವೃದ್ಧಾಶ್ರಮದಲ್ಲಿ ಆಚರಣೆ.
ಶಹಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ: ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಪ್ರಯುಕ್ತ ವೃದ್ಧಾಶ್ರಮದಲ್ಲಿರುವ ಹಿರಿಯರಿಗೆ ಗೌರವ ಸಲ್ಲಿಸುವುದರ ಜೊತೆಗೆ ಅನ್ನ ಸಂತರ್ಪಣೆ ಮಾಡಿ,ಹಣ್ಣು ಹಂಪಲುಗಳನ್ನು ವಿತರಿಸುವುದರ ಮೂಲಕ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಬಿ.ಸಿ.ಟ್ರಸ್ಟ್ ಯೋಜನೆಯ ಶಹಪುರ ಘಟಕದ
ವತಿಯಿಂದ ನಗರದ ಫಿಲ್ಟರ್ ಬೆಡ್ ನಲ್ಲಿರುವ ರಿಚ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ನಡೆಸುವ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಹಾಗೂ ಅತ್ಯಂತ ಸರಳವಾಗಿ ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮಿಸಲಾಯಿತು .
ಅನ್ನದಾನ,ವಿದ್ಯಾದಾನ, ಆರೋಗ್ಯ ಸೇವೆ ಹಾಗೂ ಗ್ರಾಮೀಣ ಅಭಿವೃದ್ಧಿ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿರುವ ಪೂಜ್ಯಶ್ರೀ ಡಾ: ಡಿ. ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖಿ ಸೇವೆಗಳು ಅವರ ಆದರ್ಶ,ತತ್ವಗಳು ನಾವೆಲ್ಲರೂ ಸ್ಮರಿಸಲೇಬೇಕು, ಮತ್ತು ಅವರ ಹಾಕಿಕೊಟ್ಟ ದಾರಿಯಲ್ಲಿ ನಾವು ನೀವೆಲ್ಲರೂ ಸಾಗಬೇಕು ಎಂದು ತಾಲೂಕು ಯೋಜನಾಧಿಕಾರಿಗಳಾದ ಕುಮಾರ ಬಣಕಾರ್ ಹೇಳಿದರು.
ಧಾರ್ಮಿಕ ಪರಂಪರೆ,ಸಾಮಾಜಿಕ ಕಳಕಳಿ ಮತ್ತು ಗ್ರಾಮೀಣ ಅಭಿವೃದ್ಧಿಯ ಜೊತೆಗೆ ಮಾನವೀಯ ಸೇವೆಗಳ ಮೂಲಕ ನಾಡಿನ ಜನಮಾನಸದಲ್ಲಿ ನೆಲೆಯೂರಿರುವ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕಾರ್ಯ ನಿಜಕ್ಕೂ ಶ್ಲಾಘಗನೀಯವಾದುದ್ದು ಎಂದು ಸಾಹಿತಿ ಬಸವರಾಜ ಸಿನ್ನೂರ ಬಣ್ಣಿಸಿದರು
ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆಯ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯರಾದ ಮೊಹಮ್ಮದ್ ಬಬ್ಲು,ಮಹಾಲಿಂಗ,ಪೂಜಾ,ಶಂಕ ರಗೌಡ ಹಾಗೂ ವೃದ್ಧಾಶ್ರಮದ ಮುಖ್ಯಸ್ಥರಾದ ಸಾಯಿನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

