ಸಂವಿಧಾನ ದಿನ ಆಚರಣೆ ನಾಳೆ ಸಂವಿಧಾನ ಪೂರ್ವ ಸಿದ್ಧತೆ ಸಭೆಗೆ ಅಧಿಕಾರಿಗಳ ಗೈರು : ಸಂಘಟಗಳ

ಸಂವಿಧಾನ ದಿನ ಆಚರಣೆ ನಾಳೆ  ಸಂವಿಧಾನ ಪೂರ್ವ ಸಿದ್ಧತೆ ಸಭೆಗೆ ಅಧಿಕಾರಿಗಳ ಗೈರು :  ಸಂಘಟಗಳ

ಸಂವಿಧಾನ ದಿನ ಆಚರಣೆ ನಾಳೆ 

ಸಂವಿಧಾನ ಪೂರ್ವ ಸಿದ್ಧತೆ ಸಭೆಗೆ ಅಧಿಕಾರಿಗಳ ಗೈರು : ಸಂಘಟಗಳ ಮುಖಂಡರುಗಳಿಂದ ಇಲಾಖೆಯ ಅಧಿಕಾರಿಗಳಿಗೆ ತರಾಟೆ 

ಚಿಂಚೋಳಿ : 

ಸರಕಾರ ನವೆಂಬರ್ 26 ರಂದು ಸಂವಿಧಾನ ಸಮರ್ಪಣೆ ದಿನ ಆಚರಣೆ ಮಾಡಲು ಆದೇಶ ನೀಡಲಾಗಿದ್ದು, ಅದರಂತೆ ಎಲ್ಲಾ ಇಲಾಖೆಗಳಲ್ಲಿ ಸಂವಿಧಾನದ ಪೀಠಕೆ ಓದುವ ಮೂಲಕ ರಾಷ್ಟ್ರೀಯ ಹಬ್ಬದಂತೆ ಸಂವಿಧಾನ ದಿನ ಆಚರಣೆ ಮಾಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಶೃತಿ ಅವರು ಹೇಳಿದರು. 

ಬುಧವಾರ ಪಟ್ಟಣದ ತಾಲೂಕ ಆಡಳಿತ ಪ್ರಜಾಸೌಧ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ವಸತಿ ನಿಲಯ ಮತ್ತು ಶಾಲಾ - ಕಾಲೇಜು, ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಎಲ್ಲಾ ಸರಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಸಂವಿಧಾನ ಪೀಠಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ ಮಾಡಬೇಕು. ಅವಳಿ ಪಟ್ಟಣ ಚಂದಾಪೂರದ ಮಹಾತ್ಮಗಾಂಧಿ ವೃತ್ತದಿಂದ ತಹಸೀಲ್ ಕಾರ್ಯಾಲಯದ ವರೆಗೆ ಜರುಗುವ ಸಂವಿಧಾನ ಪೀಠಕೆ ಜಾಥ ಕಾರ್ಯಕ್ರಮದಲ್ಲಿ ಶಾಲಾ -ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ವಸತಿ ನಿಲಯಗಳ ಮಕ್ಕಳು ಮತ್ತು ವಿವಿಧ ಸರಕಾರಿ ಇಲಾಖೆಗಳ ಸಿಬ್ಬಂದಿಗಳು ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಕರ್ತವ್ಯದ ಉಡುಪಿನಲ್ಲಿ ಕಡ್ಡಾಯವಾಗಿ ಜಾಥ ಕಾರ್ಯಕ್ರಮದಲ್ಲಿ ಪಾಲ್ಗೊಳುವಂತೆ ನೋಡಿಕೊಳ್ಳುವ ಜವಾಬ್ದಾರಿ ಇಲಾಖೆಯ ಹೊಣೆಯಾಗಿದೆ. ಸಂವಿಧಾನ ಸಮರ್ಪಣೆ ದಿನದ ಜಾಥ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಜರುಗುವಂತೆ ನೋಡಿಕೊಳ್ಳಬೇಕೆಂದು ವಿವಿಧ ಸಮಾಜದ ಸಂಘಟನೆಗಳ ಮುಖಂಡರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಶೃತಿ ಅವರಿಗೆ ಒತ್ತಾಯಿಸಿದರು. 

ಅಧಿಕಾರಿಗಳಿಗೆ ತರಾಟೆ : 

ಸಂವಿಧಾನ ದಿನ ನವೆಂಬರ್ 26 ರಂದು ಆಚರಿಸುವ ನಿರ್ಧಾರ ಮಾಡಲಾಗಿದೆ. ಆದರೆ ಆಚರಣೆ ಮಾಡುವ ಕೇವಲ ಒಂದು ದಿನ ಬಾಕಿರುವಾಗಲೇ ಇಲಾಖೆ ಹಮ್ಮಿಕೊಂಡಿರುವ ಪೂರ್ವಭಾವಿ ಸಭೆ ಕಾಟಚಾರದ ಸಭೆ ನಡೆಸಲಾಗುತ್ತಿದೆ. ಸಂವಿಧಾನದ ಅಡಿ ಲಾಭ ಸೌಲಭ್ಯದ ಲಾಭ ಪಡೆಯುತ್ತಿರುವ ಸರಕಾರಿ ಕರ್ತವ್ಯದಲ್ಲಿರುವ ಬಹುತೇಕ ಇಲಾಖೆಗಳ ಅಧಿಕಾರಿಗಳು ಸಂವಿಧಾನ ದಿನ ಸಿದ್ಧತೆ ಸಭೆ ಗೈರು ಹಾಜರಾಗಿದ್ದಾರೆ. ಇಲಾಖೆ ಕಾಟಚಾರದ ಸಭೆ ನಡೆಸಿ ಸಂವಿಧಾನಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಇಲಾಖೆಯ ಅಧಿಕಾರಿಗಳಿಗೆ ಸಮಾಜದ ಸಂಘಟನೆಗಳ ಮುಖಂಡರು ತರಾಟೆ ತಗೆದುಕೊಂಡಿರುವ ಘಟನೆ ಜರುಗಿತು.

ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸಭೆಯ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದಾರೆಂಬ ಕಾರಣ ನೀಡಿದ್ದಾರೆ. ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ಸಭೆಯ ಮೂಲಕ ಸೂಕ್ತ ಕಾರಣ ಕೇಳಿ ನೋಟೀಸ್ ಕೊಡಲಾಗುತ್ತದೆ ಎಂದು ಅಧಿಕಾರಿ ಡಾ. ಶೃತಿ ತಿಳಿಸಿದರು. ಆದರೆ ಜಿಲ್ಲಾಧಿಕಾರಿಗಳ ಯಾವುದೇ ಸಭೆಗಳು ಆಯೋಜನೆ ಮಾಡಿಲ್ಲ ಎಂದು ಮಾಹಿತಿ ಪಡೆದುಕೊಂಡ ಸಂಘಟನೆಗಳು ಅಧಿಕಾರಿಗಳಿಗೆ ತರಾಟೆ ನೋಟಿಸ್ ಜಾರಿ ಮಾಡುವಂತೆ ಸಭೆಯಲ್ಲಿ ಆಗ್ರಹಿಸಿ, ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಾಜದ ವಿವಿಧ ಸಂಘಟನೆಗಳ ಮುಖಂಡರಾದ ಅಮರ ಲೋಡನೂರ್, ಚೇತನ ನಿರಾಳ್ಕರ್, ಮಾರುತಿ ಅಪ್ಪಣನೋರ್, ವೈಜಿನಾಥ ಮಿತ್ರ, ವಿವೇಕ್ ದೇಗಲ್ಮಡಿ, ರಾಜು ಕಳಸ್ಕರ್,ಅಧಿಕಾರಿಗಳಾದ ರೇಣುಕಾ ಪೋಲಕಪಳ್ಳಿ, ಮತ್ತಾಜ್ ಬೇಗಂ, ಮಲ್ಲಿಕಾರ್ಜುನ ಗುತ್ತೇದಾರ, ಸಂತೋಷಕುಮಾರ, ಶಾಮರಾವ ಮೋಘ, ಸುರೇಶ ತೇಗಲತಿಪ್ಪಿ, ಹಸನ್ ಅವರು ಇದ್ದರು.