28 ರಂದು ಸಗರ ನಾಗಠಾಣ ಹಿರೇಮಠದಲ್ಲಿ ಪುರಾಣ ಪ್ರಾರಂಭ

28 ರಂದು ಸಗರ ನಾಗಠಾಣ ಹಿರೇಮಠದಲ್ಲಿ ಪುರಾಣ ಪ್ರಾರಂಭ

28 ರಂದು ಸಗರ ನಾಗಠಾಣ ಹಿರೇಮಠದಲ್ಲಿ ಪುರಾಣ ಪ್ರಾರಂಭ. 

ಶಹಪುರ : ತಾಲೂಕಿನ ಸಗರ ಗ್ರಾಮದ ನಾಗಠಾಣ ಹಿರೇಮಠದಲ್ಲಿ ಶ್ರೀ ಗುರು ಉದಯ ಮಹಾಂತೇಶ್ವರ ಜಾತ್ರಾ ಮಹೋತ್ಸವ ಹಾಗೂ ಕಾರ್ತಿಕೋತ್ಸವದ ಅಂಗವಾಗಿ ಇದೇ ತಿಂಗಳು 28 ರಿಂದ ಡಿಸೆಂಬರ್ 8 ರವರೆಗೆ ಘತ್ತರಗಿ ಭಾಗ್ಯವಂತಿ ದೇವಿಯ ಮಹಾ ಪುರಾಣ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪೂಜ್ಯರಾದ ಶ್ರೀ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಕಟಣೆಗೆ ತಿಳಿಸಿದ್ದಾರೆ.

ಪ್ರತಿದಿನ ಸಾಯಂಕಾಲ 7 ಗಂಟೆಗೆ ಶ್ರೀ ಗುರು ಉದಯ ಮಹಾಂತೇಶ್ವರ ಮುಖ್ಯ ವೇದಿಕೆಯಲ್ಲಿ ಪುರಾಣ ಪ್ರಾರಂಭವಾಗಲಿದ್ದು,ಜೇರಟಗಿಯ ಗದ್ದಿಗಿಮಠದ ವೇದಮೂರ್ತಿ ಸಿದ್ದೇಶ್ವರ ಶಾಸ್ತ್ರಿಗಳಿಂದ ಪುರಾಣ ಪ್ರವಚನ ಜರುಗುವುದು,ಪಡದಳ್ಳಿಯ ಕಲ್ಲಯ್ಯ ಸ್ವಾಮಿ ಹಾಗೂ ಆಕಾಶ್ ಹೈದ್ರಾ ಅವರಿಂದ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು ಆದ್ದರಿಂದ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮಠದ ಆಡಳಿತ ಮಂಡಳಿಯವರು ಮನವಿ ಮಾಡಿಕೊಂಡಿದ್ದಾರೆ.