ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಅಗತ್ಯ : ಬಸನಗೌಡ ಸುಬೇದಾರ
ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಅಗತ್ಯ : ಬಸನಗೌಡ ಸುಬೇದಾರ
ಶಹಾಪುರ : ಹೋರಾಟಗಾರರ ತ್ಯಾಗ ಬಲಿದಾನಗಳಿಂದ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು, ಆದ್ದರಿಂದ ಅಂತಹ ಮಹಾತ್ಮರನ್ನ ಸ್ಮರಿಸುವುದು ಅತ್ಯಗತ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಸನಗೌಡ ಮಾಲಿ ಪಾಟೀಲ್ ಹೇಳಿದರು.
ಪಟ್ಟಣದ ಸುಬೇದಾರ ವಿದ್ಯಾಲಯದಲ್ಲಿ ಆಯೋಜಿಸಿದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಮತ್ತು ತತ್ವಗಳನ್ನು ನಮ್ಮ ಬದುಕಿನ ದುದ್ದಕ್ಕೂ ಅಳವಡಿಸಿಕೊಂಡಾಗ ಮಾತ್ರ ನಾವು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ನುಡಿದರು.
ಸುಬೇದಾರ್ ವಿದ್ಯಾಲಯದ ವ್ಯವಸ್ಥಾಪಕ ನಿರ್ದೇಶಕರಾದ ಕರಣ ಸುಬೇದಾರ ಮಾತನಾಡಿ ಮಹಾತ್ಮ ಗಾಂಧಿ,ಭಗತ್ ಸಿಂಗ್,ಸುಭಾಷ್ ಚಂದ್ರ ಬೋಸ್,ಬಾಲಗಂಗಾಧರ್ ತಿಲಕ್,ಸರದಾರ ವಲ್ಲಭಾಯಿ ಪಟೇಲ್,ಲೋಕಮಾನ್ಯ ತಿಲಕ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.ದೇಶದ ಪ್ರತಿಯೊಬ್ಬ ನಾಗರಿಕರು ದೇಶಭಕ್ತಿ,ಏಕತೆ,ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಭಾರತದ ತುಂಬೆಲ್ಲಾ ಅತ್ಯಂತ ವಿಜ್ರಂಭಣೆಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ ಎಂದು ಇದರ ಮಹತ್ವವನ್ನು ತಿಳಿಪಡಿಸಿದ್ದರು.
ಶಾಲೆಯ ಪ್ರಾಚಾರ್ಯರಾದ ದತ್ತರಾಜ್ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಗ್ರಾಮದ ಯುವ ಮುಖಂಡ ಲಿಂಗನಗೌಡ ಮಾಲಿ ಪಾಟೀಲ,ವಿನೋದ್ ಗೌಡ,ಪ್ರೀತಮ್ ಆಸ್ಪಲ್ಲಿ, ಸೇರಿದಂತೆ ಇತರರು ಉಪಸ್ಥಿತರಿದ್ದರು ನಂತರ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

