ಹರಿನಾಥ ಮಹಾರಾಜರ ಚರಿತ್ರೆ

ಹರಿನಾಥ ಮಹಾರಾಜರ ಚರಿತ್ರೆ

ಪವಾಡ ಪುರುಷರಾಗಿ ಮೆರೆದ ಹರಿನಾಥ ಮಹಾರಾಜರು* /

*ಭಾವೈಕ್ಯತೆಯ ಪ್ರತೀಕ ಹರಿನಾಥ ದೇವಾಲಯ*

ಆಧ್ಯಾತ್ಮ ಪ್ರಪಂಚದಲ್ಲಿ ವಿಶ್ವದಲ್ಲಿಯೇ ಭಾರತ ಮುಂಚೂಣಿಯಲ್ಲಿದೆ. ಇಲ್ಲಿ ಸಾಧು ಸಂತರು ಋಷಿಮುನಿಗಳು ಹಾಕಿ ಕೊಟ್ಟಭವ್ಯಪರಂಪರೆಯನ್ನು ಇಂದಿಗೂ ಸಮಾಜ ಅನುಕರಣೆ ಮಾಡಿಕೊಂಡು ಬಂದಿದೆ.

ಒಂದು ಸಂವತ್ಸರದಲ್ಲಿ(ವರ್ಷದಲ್ಲಿ) 12 ಹುಣ್ಣಿಮೆಗಳು ಬರುತ್ತವೆ. ಒಂದೊಂದು ಹುಣ್ಣಿಮೆಗೂ ಒಂದೊಂದು ವಿಶೇಷತೆ ಇದೆ ಅದರಲ್ಲಿ ಕಾರ್ತಿಕ ಹುಣ್ಣಿಮೆಯು ಒಂದು.

ಕಲ್ಯಾಣ ನಾಡಿನ ಗಡಿಭಾಗದಲ್ಲಿ ಸೇರಿರುವ ಕಮಲನಗರ ತಾಲ್ಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧವಾಗಿರುವ ಹಾಗೂ ಸರ್ವ ಧರ್ಮ ಸಮನ್ವಯ ತತ್ವವನ್ನು ಸಾರುತ್ತಿರುವ ಶ್ರೀ ಸದ್ಗುರು ಹರಿನಾಥ ಮಹಾರಾಜ ಮಂದಿರವು ತನ್ನದೇ ಆದ ಐತಿಹ್ಯ ಹೊಂದಿದೆ.

*ಕ್ಷೇತ್ರದ ಇತಿಹಾಸ*

ಮಧ್ಯ ಕಾಲದಲ್ಲಿ ನಾಥ ಪಂಥವು ಪ್ರಸಿದ್ಧಿಗೆ ಪಾತ್ರವಾಗಿತ್ತು. ನಾಥ ಪಂಥರಲ್ಲಿ ನವನಾಥರು ಹೆಸರುವಾಸಿಯಾಗಿದ್ದರು. ಶಿವ ವಿಷ್ಣು ಬ್ರಹ್ಮ ಮೂರು ತತ್ವಗಳಲ್ಲಿಯೂ ಅಪಾರವಾದ ಭಕ್ತಿ ಉಳ್ಳವರಾಗಿದ್ದು ಕಾಯಕ ಮತ್ತು ಸೇವೆಯ ಮಾರ್ಗವನ್ನು ತೋರಿಸಿ ಸುಂದರ ಬದುಕು ಕಟ್ಟಿಕೊಳ್ಳಲು ನೆರವಾದವರು. ಅಂಥಹವರಲ್ಲಿ ಸಿದ್ಧಿ ಪುರುಷರಾದ ಮಹಾನ್ ಸಾಧಕರಾದ ಶ್ರೀ ಹರಿನಾಥ ಮಹಾರಾಜರು ಒಬ್ಬರು.

ಉತ್ತರ ಭಾರತದ ಉಜ್ಜಯನಿಯಿಂದ ಗುರು ಗಣೇಶನಾಥರ ವರದಿಂದ ದೇಶಮುಖನ ಮನೆಯಲ್ಲಿ ಹುಟ್ಟಿದ ಹರಿಬಾ, ಮದುವೆಯ ಮೊದಲ ರಾತ್ರಿಯೇ ಕನಸಿನಲ್ಲಿ ಗುರುವಿನ ಕರೆ ಕೇಳಿ ಅರಮನೆಯ ವೈಭವ ತೊರೆದ ವೈರಾಗ್ಯ, ಕಲ್ಲುಮಳೆಯನ್ನೂ ಲೆಕ್ಕಿಸದೆ ಪತಿಯ ಹಿಂದೆ ನಡೆದ ಸಖುಬಾಯಿಯ ನಿಷ್ಠೆ, ಅಚವಲ ಬೆಟ್ಟ ಮತ್ತು ಹೊಳಸಮುದ್ರದ ಕಾಡಿನ ಮಧ್ಯೆ ಕಠಿಣ ತಪಸ್ಸು ಮಾಡಿದರು. ಶರಣ ದಂಪತಿಗಳು ಈ ನೆಲದಲ್ಲಿ (ಹೊಳೆಸಮುದ್ರ ಗ್ರಾಮಕ್ಕೆ) ಕುಟುಂಬ ಸಮೇತ ಬಂದು ಉಳಿದುಕೊಂಡರು. ಈ ನೆಲದಲ್ಲಿ ನಡೆದಾಡಿದರು. ಇಲ್ಲಿರುವ ಆಲದ ಮರದ ಕೆಳಗೆ ಕುಳಿತು 12 ವರ್ಷ ಪೂಜೆ ಮತ್ತು ಧ್ಯಾನ ಮಾಡಿ ಕಠಿಣ ತಪಸ್ಸು ಕೈಗೊಂಡರು. ಶ್ರೀ ಮಣ್ಣಿನಲ್ಲಿ ಜೀವಂತ ಸಮಾಧಿಯಾದರೂ ಆ ತಪದ ಬಿಸಿ ಇಂದಿಗೂ ಈ ಊರಿನ ಗಾಳಿಯಲ್ಲಿದೆ

ಇಂತಹ ಸದ್ಗುಣದ ಗಣಿಯಾದ ಶ್ರೀ ಹರಿನಾಥ ಮಹಾರಾಜರ ಧರ್ಮ ಪತ್ನಿ ಮಾತೆ ಸಖುಬಾಯಿ ಇವರು ತಮ್ಮ ಗುರುಗಳಾದ ಗಣೇಶನಾಥರ ಆಣತಿಯಂತೆ ಹೀಗೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗಗಳಲ್ಲಿ 36 ವರ್ಷಗಳವರೆಗೆ ತಪಸ್ಸನು ಆಚರಿಸಿ ಕೊಂಡುಕೊಂಡ ದಂಪತಿಗಳು, ಅಂದು ಜನರಲ್ಲಿ ಸದ್ಗುಣಗಳನ್ನು ಬಿತ್ತಿ ಎಲ್ಲರ ಅಂಧಕಾರವನ್ನು ಕಳೆಯಲು ಪ್ರಯತ್ನ ಪಟ್ಟವರು. ಇವರು ಜಾತಿ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದರು. ಭಕ್ತರಿಗೆ ಸನ್ಮಾರ್ಗ ತೋರಿದ ಸಿದ್ದಿ ಪುರುಷರು. ಅಂದು ಕುಟುಂಬ ಸಮೇತ ಜೀವಂತವಾಗಿರುವಾಗಲೇ ಜೀವಿತ ಸಮಾಧಿ ತೆಗೆದುಕೊಂಡರು. ಅದು ಅಂದಿನ ಕಾಲದಲ್ಲಿ ಐದು ಜೀವಿಗಳ ಜೀವಂತ ಸಮಾಧಿಯೇ ಸಂಜೀವಿನಿ ಸಮಾಧಿ ಇದಾಗಿದೆ. ಹರಿನಾಥರು, ಸಖುಬಾಯಿ, ಮಗ, ಎರಡು ನಾಯಿಗಳು ಸೇರಿ ಒಟ್ಟು ಐದು ಜೀವಿಗಳು ಈ ಸ್ಥಾನಗಳಲ್ಲಿ ಜೀವಂತ ಸಮಾಧಿಯಾಗಿದುಂಟು. ಮುಂದಿನ ಪ್ರೀತಿಯ ಶಿಷ್ಯರಾಗಿರುವ ಮಲ್ಲನಾಥಬಾಬಾ ಮಹಾರಾಜರು ಸಮಾಧಿಕಟ್ಟಿಸಿದರು. ಈ ಸಮಾಧಿ ಪೂರ್ವಾಭಿಮುಖವಾಗಿದ್ದು ಆಯಾತಾಕಾರದಲ್ಲಿದೆ.

ಕಳೆದುಹೋದ ಎಮ್ಮೆಯನ್ನು ಹುಡುಕುತ್ತ ಕಾಡಿಗೆ ಬಂದ ಅಕ್ಕಸಾಲಿಗ ನರಹರಿಯ ಮೂಲಕ ಸಂತನ ಮಹಿಮೆ ಪಸರಿಸಿತ್ತು. ಸಣ್ಣದನ್ನು ಹುಡುಕಿ ಹೋದವನಿಗೆ ದೊಡ್ಡದು ಸಿಕ್ಕಿತು. ಎಮ್ಮೆ ಕಳೆದುಹೋದ ಕಾರಣ ನರಹರಿಯು ತಾನೊಮ್ಮೆ ಕಾಡಿಗೆ ನಡೆದು ಗುರುವನು ಸಮ್ಮುಖದಿ ಕಂಡವನು. ಶ್ರಾವಣ ಶುದ್ಧ ತ್ರಯೋದಶಿಯ ಜೀವಂತ ಸಮಾಧಿಯ ನಂತರ ಶಿಷ್ಯ ಮಲ್ಲನಾಥರು ಕಟ್ಟಿಸಿದ ಭವ್ಯ ಸಮಾಧಿಯ ಶಿಲ್ಪಕಲೆ, ಗಂಡಭೇರುಂಡ ಲಾಂಛನ, ಆನೆ-ಸಿಂಹ-ಕಮಲಗಳ ಕೆತ್ತನೆ, ಮಲ್ಲನಾಥರು ಶಿಲೆಯಲ್ಲಿ ಮಾಡಿದ ಗುರುಸೇವೆ ಅದಾಗಿತ್ತು.

ಸಮಾಧಿ ಗೋಡೆ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಸೂರ್ಯದೇವ ಅಶ್ವಾರೋಹಿ ಸವಾರಿ ಮಾಡುತ್ತಿರುವ ಕುದುರೆಯ ರಥದ ಮೇಲೆ* "ಸನ್ 1201 ಕಾರ್ತಿಕ ಪದ ಪ್ರತಿಪದಾ ಸಮಾಧಿಯ ತಳ ಪ್ರಾರಂಭದಲ್ಲಿ ಹರಿನಾಥರಶಿಷ್ಯಮಲ್ಲನಾಥಬಾಬಾ ಕಟ್ಟಿರುವ ಶಕೆ 1713 ವಿರೋಧಿ ನಾಮ ಸಂವಸ್ತರ ಶನಿವಾರ .ಪ್ರಾರಂಭ ಮಾಡಲಾಗಿದೆ"*ಎಂದು ಉಲ್ಲೇಖವಿದೆ.

ದಕ್ಷಿಣ ಮತ್ತು ಉತ್ತರ ಗೋಡೆ ಇನ್ನೊಂದು ಪಟ್ಟಿಯಲ್ಲಿ ಗಂಡ ಬೇರುಂಡ ಕರ್ನಾಟಕ ಸರ್ಕಾರ ಪ್ರಸ್ತುತ ಬಳಸುತ್ತಿರುವ ಗಂಡಬೇರುಂಡ ಮುದ್ರೆಯನ್ನು ಹೋಲುವಂಥ ಶಿಲ್ಪವಿದ್ದು, ಈ ಶೀಲ್ಪದಲ್ಲಿ ಗಂಡ ಬೇರುಂಡ ಪಕ್ಷಿಯು ತನ್ನ ಕೊಕ್ಕು ಮತ್ತು ಕಾಲುಗಳಲ್ಲಿ ಸಿಂಹ ಮತ್ತು ಆನೆಗಳನ್ನು ಹಿಡಿದು ಹಾರುತಿದೆ ಎನ್ನುವಂತೆ ಗೋಚರವಾಗುತ್ತದೆ. ಇದಲ್ಲದೆ ಸೂರ್ಯ ಚಂದ್ರನಕ್ಷತ್ರ ಹಲವಾರು ರೀತಿಯ ವೀರ ಚಿತ್ರಗಳು ಕಾಣಸಿಗುತ್ತವೆ. ಈ ಚಿತ್ರಗಳು ಹೇಳುವ ಕಥೆಗಳು ಅಸಂಖ್ಯ. ಇಂತಹ ಅದ್ಭುತ ಸುಕ್ಷೇತ್ರ ಹೊಳೆಸಮುದ್ರದ ಶ್ರೀ ಹರಿನಾಥಮಹಾರಾಜರ ಕ್ಷೇತ್ರವಾಗಿದೆ. ಅಂತೆಯೇ ಇಂದಿಗೂ ಪಕ್ಕಾ ಕನ್ನಡ ಪ್ರದೇಶವಾಗಿರುವುದು ಸತ್ಯಕ್ಕೆ ದೂರಿಲ್ಲ! ಇಲ್ಲಿಯೂ ಕನ್ನಡ ಡಿಂಡಿಮವಬಾರಿಸಿರುವುದು ಎಂದುಹೇಳುವಲ್ಲಿ ಎರಡು ಮಾತಿಲ್ಲ.

ಕೆಳದಿ ಸಂಸ್ಥಾನ, ಮೈಸೂರು ಸಂಸ್ಥಾನ ಹಾಗೂ ಕರ್ನಾಟಕ ಸರ್ಕಾರ, ಕರ್ನಾಟಕ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಬಳಸುತ್ತಿರುವ ಗಂಡಬೇರುಂಡ ಮುದ್ರೆಯನ್ನು ಹಲವು ಶತಮಾನಗಳ ಹಿಂದೆಯೇ ಶ್ರೀ ಹರಿನಾಥ ಮಹಾರಾಜರ ಕ್ಷೇತ್ರದಲ್ಲಿ ಬಳಸಲಾಗುತ್ತಿದೆ ಎಂಬುದನ್ನು ನಾವು ಸ್ಪಷ್ಟವಾಗಿ ಕಂಡು ಕೊಳ್ಳಬಹುದು.

ಕುದುರೆ ಒಂಟೆ ಅಶ್ವಾರೋಹಿ ಸೈನಿಕರು ಹೆಡೆಯುಳನಾಗದೇವತೆ ಚಿತ್ರಗಳಿವೆ.ಸಮಾಧಿಮೇಲ್ಬಾಗದಲ್ಲಿ ಮಹೆಬೂಬ್ ಸುಭಾನಿ ಸಂಕೇತ ಹೊಂದಿರುವ ಕರಿ ಶಿಲೆಯಲ್ಲಿ ನಿರ್ಮಿಸಿದ ಚಪ್ಪಟೆ ಗಾತ್ರದ ಕಲ್ಲು ಇದೆ. ಈ ಸ್ಮಾರಕದ ಮೇಲೆ ಹಿಂದೂ-ಮುಸ್ಲಿಂ ಭಕ್ತರು ಹಸಿರು ಬಣ್ಣದ ಹೊದಿಕೆ (ಗಲಫ್ ) ಹಾಕಿ ಭಕ್ತಿ ಸಮರ್ಪಿಸುವುದು ವಿಶೇಷ. ಇದನ್ನು ಅಂದಿನ ಕಾಲದಲ್ಲಿ ಬೀದರ ಕೋಟಿಯ ಪುರುಷ ಕಟ್ಟೆಯ ಶಿಲೆ ತಂದಿರುವುದು ಶಿಲೆಯಾಗಿದೆ.

ಹರಿನಾಥ ಮಹಾರಾಜರ ಶಿಷ್ಯನಾಗಿರುವ ಮಲ್ಲನಾಥ ಬಾಬಾ ತಮ್ಮ ಗುರುಗಳ ಸವಿ ನೆನಪಿಗಾಗಿ ಇಂತಹ ಒಂದು ಎತ್ತರದ ಆಕಾರದಲ್ಲಿ ಸಮಾಧಿ ಕಟ್ಟಿದ್ದು ನಾಥ ಪಂಥದ ಸಮಾಧಿ ರೂಪ ಹೊಂದಿದೆ. ಒಟ್ಟಾರೆ ಈ ಸಂಜೀವಿನಿ ಸಮಾಧಿಯು ಭವ್ಯವಾಗಿದ್ದು, ಈ ಕ್ಷೇತ್ರವು ಪೂಜ್ಯ ಸ್ಥಾನ ಪಡೆದಿದೆಲ್ಲವೇ ಈ ಗ್ರಾಮದ ಗ್ರಾಮದೇವತೆ ಆರಾಧ್ಯದೇವತೆಯಾಗಿ ಈ ದೇವಸ್ಥಾನವಾಗಿದ್ದು ನಿತ್ಯ ತನ್ನ ಭಕ್ತ ಸಮೂಹ ಜೋಗುನಗೊಳಿಸುತ್ತಿರುವ ಯೋಗಶಕ್ತಿ ಈ ನೆಲಕ್ಕೆ ಇದೆ.

ಅರ್ನಾದ ಮಹಾರಾಜ ಮತ್ತು ಮಾತೆ ಸಖುಬಾಯಿ ಅವರ ಪುಣ್ಯ ಕ್ಷೇತ್ರದಲ್ಲಿ ಗೌರಿ ಹುಣ್ಣಿಮೆ ಮತ್ತು ಆ ಷಾಡಗಳಲ್ಲಿ ವರ್ಷದಲ್ಲಿ ಎರಡು ಬಾರಿ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ. ವರ್ಷದ ಪ್ರತಿ ಗುರುವಾರ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ವಿಶೇಷಪೂಜೆ ಜರುಗುತ್ತವೆ. ಪ್ರತೀ ಏಕಾದಶಿ ದಿನದಂದು ವಿಶೇಷವಾಗಿ ಸಂತರು ಶರಣರಿಂದ ಪ್ರವಚನ ಮತ್ತು ಕೀರ್ತನೆ ಕಾರ್ಯಕ್ರಮಗಳು ನೆರವೇರುತ್ತವೆ.ವಿವಾಹ ಅಭಿಷೇಕ ಜವಳ ನೈವೇದ್ಯ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು ಕರ್ನಾಟಕದ ವಿವಿಧ ಜಿಲ್ಲೆಗಳಿಂದಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮೂಲಗಳಿಂದ ಎಲ್ಲಾ ಸಮುದಾಯ ಭಕ್ತರು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ.

*ಇಷ್ಟಾರ್ಥ ಈಡೇರಿಕೆ*

ಸದ್ಗುರುಹರಿನಾಥ್‌ ಮಹಾರಾಜರು ಬೇಡಿದವರನ್ನು ನೀಡುತ್ತಾರೆ.ಎಲ್ಲಾ ಕಷ್ಟಕಾರ್ಪಣ್ಯಗಳನ್ನು ಬಗೆಹರಿಸುತ್ತಾರೆ. ಎಂಬ ನಂಬಿಕೆ ಇದೆ ಹೀಗಾಗಿ ನಾನಾ ಕಷ್ಟಗಳನ್ನು ಹೊತ್ತಭಕ್ತರ ಸನ್ಮಾರ್ಗ ದೊರೆಯುತಿದೆ. ಈ ಹಿನ್ನೆಲೆಯಲ್ಲಿ ಮಠಕ್ಕೆ ಭಕ್ತರು ನಾನಾ ಕಡೆಗಳಿಂದ ಹರಕೆ ಹೊತ್ತು ಜಾತ್ರೆ ದಿನ ಇಂದು ಈಡೇರಿಸಿ ಭಕ್ತಿ ಸಮರ್ಪಿಸುತ್ತಾರೆ. ಇಲ್ಲಿನ ಅನೇಕ ಅಂಗಡಿಗಳಿಗೆ ತಮ್ಮ ಮಕ್ಕಳಿಗೆ ಹರಿನಾಥ ಎಂದು ಹೆಸರಿಡುವುದು ಉಂಟು.

*ನೈವೇದ್ಯ ಪ್ರಿಯ:*

 ಹರಿನಾಥ ಮಹಾರಾಜ ದೇವರಿಗೆ ಮಲೋದಿ ಪ್ರಿಯವಾದ ನೈವೇದ್ಯ. ಹೀಗಾಗಿ ಗ್ರಾಮದಲ್ಲಿ ಜಾತಿ ಭೇದ ಭಾವ ಇಲ್ಲದೆ ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಗೋಧಿ ಹಿಟ್ಟಿನಿಂದ (ರೊಟ್ಟಿ) ಮಲೋದಿ ನೈವೇದ್ಯ ಸಿದ್ಧಪಡಿಸಿ ಕಾಯಿ ಕರ್ಪೂರ ಊದುಬತ್ತಿಯೊಂದಿಗೆ ಸಕ್ಕರೆ ಸೇರಿಸಿಕೊಂಡು ದೇವರನ್ನು ಪೂಜಿಸಿ ಹರಿಕೆ ತೀರಿಸಿ ಭಕ್ತಿಭಾವ ಮೆರೆಯುತ್ತಾರೆ.

ಒಂದು ಜಾತಿಗೆ ಸೀಮಿತವಾಗದೆ ಸರ್ವ ರೀತಿಯಲ್ಲಿ ವಿಶೇಷತೆ ಕಾರ್ಯಕ್ರಮಗಳು ನಿರಂತರವಾಗಿ ಈ ಮಠಗಳಲ್ಲಿ ನಡೆಯುತ್ತವೆ. 

*ಮಠ ನಡೆದು ಬಂದ ದಾರಿ*

ಈ ಪ್ರದೇಶವು ದಟ್ಟವಾದ ಗಿಡ ಮರಗಳಿಂದ ಹಸಿರು ಬಣ್ಣಗಳಿಂದ ತುಂಬಿಕೊಂಡಿತ್ತು. ಕಾಲಕ್ರಮೇಣ ಗ್ರಾಮಸ್ಥರು ಆರಾಧ್ಯ ದೇವರಾದ ಹರಿನಾಥ ಮಹಾರಾಜರು ನೆಲೆಸಿದ ಮೇಲೆ ಗ್ರಾಮದ ಜನರ ಭಕ್ತಿ ನಂಬಿಕೆ ಮತ್ತು ಸಂಪ್ರದಾಯಗಳ ಕೇಂದ್ರ ಬಿಂದುವಾಗಿ ಪರಿವರ್ತನೆಯಾಗಿತ್ತು. ಪೂಜಾ ಕಾರ್ಯಕ್ರಮಗಳು ಶ್ರಧ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ತಲೆಮಾರಿನಿಂದ ತಲೆಮಾರಿಗೆ ಈ ಸಂಪ್ರದಾಯ ಬೆಳೆದು ಬಂದಿದೆ. ಈ ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ.ಜಾತಿ ಮತ ಮಿರಿ ಎಲ್ಲರೂ ಒಂದೇ ಕುಟುಂಬದವರಂತೆ ಸೇರಿ ಜಾತ್ರೆಯೆ ಆಯೋಜನೆ ಮಾಡುವುದು ಈ ಉತ್ಸವದ ಅತ್ಯಂತ ದೊಡ್ಡ ವೈಶಿಷ್ಟವಾಗಿದೆ.

 ಪ್ರತಿ ವರ್ಷ ನಡೆಯುವ ಜಾತ್ರೆಯು ನಸ್ಕಿನಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದರು. ಸೂರ್ಯೋದಯಕ್ಕೂ ಮೊದಲೇ ಸಮಾಧಿಗೆ ಹೂವುಗಳಿಂದ ಅಲಂಕರಿಸುವುದು ಹಾಲು, ತುಪ್ಪ ಜೇನು ಬೆಣ್ಣೆ ಪಂಚಾಮೃತದಿಂದ ರುದ್ರಾಭಿಷೇಕ ವಿಶೇಷವಾಗಿ ಮಾಡಲಾಗುತ್ತದೆ. ಜಾತ್ರೆಯು ಆರಂಭವು ಹರಿನಾಥರ ಅಭಿಷೇಕದಿಂದ ಮೊದಲ ಗೊಂಡು ನಂತರ ವಿಶೇಷ ಪೂಜೆಗಳು ಮತ್ತು ಸಂಜೆ 6 ಗಂಟೆಗೆ ಮಹಾ ಮಂಗಳಾರತಿ ನೆರವೇರುತ್ತದೆ.ದೇವರಿಗೆ ರಾತ್ರಿ ಬಿಡಿ ವಿಶೇಷ ಜಾಗರಣೆ ನೆಡೆಯುತ್ತದೆ.

ಮರುದಿನ ಮುಂಜಾನೆ ಹರಿನಾಥ ಭಾವಚಿತ್ರವನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಇರಿಸಿ ಪೂಜೆ ಸಲ್ಲಿಸಿ ವಿಧಿ ವಿಧಾನಗಳಿಂದ ಮೆರವಣಿಗೆ ಮಠದಿಂದ ಹೊರಟು ಲಕ್ಷ್ಮಿಮಂದಿರ ಹನುಮಾನ ಮಂದಿರ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಮಮಂದಿರ ಬಂದು ತಲುಪುತ್ತದೆ. ಡೋಲು ಕುಣಿತ ಮಕ್ಕಳಿಂದ ಕುಣಿತ ನಡೆಯುತ್ತವೆ ಹಾಗೂ ಸುತ್ತಲಿನ ಗ್ರಾಮದ ಭಕ್ತಾದಿಗಳು ಪಾಲ್ಗೊಳ್ಳುವರು. ಭವ್ಯ ಮೆರವಣಿಗೆ ಜನರನ್ನು ಆಕರಿಸುತ್ತದೆ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ ಈ ಕಾರ್ಯಕ್ರಮವು ನಿಶ್ಚಿಂತೆಯಿಂದ ಆರಂಭಿಸಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರಲ್ಲಿ ಒಂದಾಗಿ ದುಡಿಯುತ್ತಾರೆ. ಭಕ್ತರಲ್ಲಿ ಭಾವೈಕ್ಯತೆಯ ಸಂದೇಶವನ್ನು ಸಾರುತ್ತದೆ ಹೀಗಾಗಿ ಗ್ರಾಮದ ಅಧ್ಯಾತ್ಮಿಕ ಪರಂಪರೆ ಮತ್ತಷ್ಟು ಮೆರಗು ನೀಡುತ್ತದೆ ಜಾತ್ರೆ ದಿನ ಹಿಂದಿನ ದಿನ ಮತ್ತು ಮರುದಿನ ಗ್ರಾಮಸ್ಥರಲ್ಲಿ ಸೇರಿ ಅನ್ನವ್ಯವಸ್ಥೆ ನಡೆಸುತ್ತಾರೆ ಅನ್ನಪ್ರಸಾದ ಮಹಾದಾಸೋ ಮಾಡುತ್ತಾರೆ ಸಾವಿರಾರು ಭಕ್ತರು ಒಂದೇ ಸಾಲಿನಲ್ಲಿ ಕುಳಿತು ಪ್ರಸಾದ ಸ್ವೀಕರಿಸುವರು ಇಲ್ಲಿ ಜಾತಿ ಮೇಲುಕಿಳು ಎಂಬ ತಾರತಮ್ಯ ಮೊದಲೇ ಇಲ್ಲ ,

ಹೊಳಸಮುದ್ರ ಶ್ರೀ ಹರಿನಾಥ ಮಹರಾಜರ ಮಂದಿರವು ಈ ಭಾಗದ ಅತ್ಯಂತ ಶ್ರದ್ಧಾ ಕೇಂದ್ರವಾಗಿದೆ ಈ ಮಂದಿರದ ಸುತ್ತಲೂ ಕೆತ್ತಲಾಗಿರುವ ಕಲೆಯು ಈ ಮಂದಿರಕ್ಕೆ ಬರುವ ಭಕ್ತರನ್ನು ಆಧ್ಯಾತ್ಮಿಕ ಜಾಗೃತ ಸಂಪ್ರದಾಯ ಕಲೆ ಅತ್ಯುತ್ತಮವಾಗಿದೆ.

 ಸದಾ ಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ ಮಹಾಪೂಜೆ ಮಹಾಮಂಗಳಾರತಿ ಭಜನೆ ಮತ್ತು ಕೀರ್ತನೆಗಳು ನಿರಂತರವಾಗಿ ಮಠಗಳಲ್ಲಿ ನಡೆಯುತ್ತದೆ ಈ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಕ್ತರು ಅತಿ ಉತ್ಸಾಹದಿಂದ ಪಾಲ್ಗೊಂಡು ಇಡೀ ಕ್ಷೇತ್ರದಲ್ಲಿ ಭಕ್ತಿ ಭಾವ ಆಧ್ಯಾತ್ಮಿಕ ವಾತಾವರಣವನ್ನು ನಿರ್ಮಾಣವಾಗುತ್ತದೆ ಇದರಿಂದ ಧಾರ್ಮಿಕ ಆಚರಣೆಗಳಿಂದ ಮನಸ್ಸಿಗೆ ಶಾಂತಿ ಸಿಗುವರ ಜೊತೆಗೆ ಈ ಕ್ಷೇತ್ರವು ಭಕ್ತರ ಅಪಾರ ಶ್ರದ್ಧೆ ಮತ್ತು ನಂಬಿಕೆಯ ಕೇಂದ್ರವಾಗಿದೆ. 

ಭಕ್ತರ ದಂಡು ಪ್ರತಿ ವರ್ಷದಂತೆ ವರ್ಷಗಳಲ್ಲಿ ಎರಡು ಸರ್ತಿ ಜಾತ್ರೆ ಉತ್ಸವಗಳು ಅತ್ಯಂತ ವಿಜ್ರಂಭಣೆಯಿಂದ ಆಚರಿಸುತ್ತಾರೆ ಈ ಸಂಭ್ರಮ ಕಣ್ಣು ತುಂಬಿಕೊಳ್ಳಲು ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆಯ ತೆಲಂಗಾಣ ಮತ್ತು ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಅಭಿಷೇಕ ನೈವೇದ್ಯ ಮಹಾಮಂಗಳಾರತಿ ನೆರವೇರಿಸುವ ಮೂಲಕ ಭಕ್ತರು ತಮ್ಮ ಇಷ್ಟಾರ್ಥ ಹರಕೆ ನೆರವೇರಿಸಿಕೊಳ್ಳುತ್ತಾರೆ ಜಾತ್ರೆ ದಿನಗಳಲ್ಲಿ ಭಕ್ತಿ ಸಾಗರವೇ ಹರಿದು ಬರುತ್ತದೆ ಗ್ರಾಮದ ಸುತ್ತಮುತ್ತಲಿನ ಭಕ್ತರು ಆಗಮಿಸಿದ ಶ್ರೀ ಸದ್ಗುರು ಹರಿನಾಥ ಮಹಾರಾಜರ ದರ್ಶನ ಪಡೆದುಕೊಂಡು ಪುನಿತರಾಗುತ್ತಾರೆ.ಪ್ರಸಾದ ವ್ಯವಸ್ಥೆ ಪ್ರತಿನಿತ್ಯನಡೆಯುತ್ತದೆ ಇಲ್ಲಿ ಪ್ರಸಾದ ಸೇವಿಸಿದವರಿಗೆ ಯಾವುದೇ ರೋಗಗಳು ಬರುವುದಿಲ್ಲ 10 15 20 ಮದುವೆಗಳು ಶ್ರೀ ಕ್ಷೇತ್ರದಲ್ಲಿ ಜರುಗುತ್ತದೆ ಕಲ್ಯಾಣ ಮಂಟಪದ ಅವಶ್ಯಕತೆ ಇತ್ತು. ಜನರ ಸಾಮಾನ್ಯರ ಪ್ರಯತ್ನದಿಂದ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಿದರು ಇಲ್ಲಿ ಮದುವೆಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಇರುವುದರಿಂದ ಆ ಭಕ್ತಾದಿಗಳಿಗೆ ತಮ್ಮನ ಭಕ್ತಿ ಸೇವೆಯಿಂದ ಹಣವನ್ನು ಕಾಣಿಕೆಯ ರೂಪದಲ್ಲಿ ಪಡೆಯುತ್ತಾರೆ. ಪ್ರತಿ ವರ್ಷ ಯಾವುದಿಲ್ಲ ಯಾವುದು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ ಪ್ರಸಾದ ನೆಲೆಯ ಅತಿಥಿಗೃಹ ಕಲ್ಯಾಣ ಮಂಟಪ ಸಭಾಮಂಟಪ ಕ್ಷೇತ್ರದ ಪ್ರಗತಿಯನ್ನು ಕಾಣ್ತಾ ಇದ್ದೇವೆ.