ಲಾರಿ ಹರಿದು ಕಲ್ಲೂರ ಗ್ರಾಮದ ಮೂರು ವರ್ಷದ ಮಗು ಸಾವು : 10 ಲಕ್ಷ ರೂ. ಪರಿಹಾರ ಧನಕ್ಕೆ ಆಗ್ರಹಸಿ ಅಧಿಕಾರಿಗಳಿಗೆ ಮನವಿ ಸಲ್ಲಿಕೆ
ಲಾರಿ ಹರಿದು ಕಲ್ಲೂರ ಗ್ರಾಮದ ಮೂರು ವರ್ಷದ ಮಗು ಸಾವು : 10 ಲಕ್ಷ ರೂ. ಪರಿಹಾರ ಧನಕ್ಕೆ ಆಗ್ರಹಸಿ ಅಧಿಕಾರಿಗಳಿಗೆ ಮನವಿ ಸಲ್ಲಿಕೆ
ಸಾವಿನ ಘಟನೆ ಸಂಭವಿಸಲು ಆರ್.ಡಿ.ಪಿ.ಆರ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯತನವೆ ಪ್ರಮುಖ ಕಾರಣ : ಆರೋಪ
ಚಿಂಚೋಳಿ :ಮೂರು ವರ್ಷದ ಮಗುವಿನ ಮೇಲೆ ಸಿಮೇಂಟ ಲಾರಿ ಹರಿದು ಸಾವುನಪ್ಪಿರುವ ಘಟನೆ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಸಂಭವಿಸಲು ತಾಲೂಕ ಪಂಚಾಯತಿಯ ಅಧೀನದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನವೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮಗುವಿನ ಕುಟುಂಬಸ್ಥರು ಹಾಗೂ ಕಲ್ಲೂರು ಗ್ರಾಮದ ಗ್ರಾಮಸ್ಥರು ಆರೋಪಿಸಿದ್ದಾರೆ.
ಮೀರಿಯಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಮುಖ್ಯ ರಸ್ತೆಯ ಪಕ್ಕದಲ್ಲಿ ಗುಂಡಿ ತೋಡಿ ಹಾಗೆಯೇ ಬಿಟ್ಟು ತೆರಳಿದ್ದರ ಹಿನ್ನಲೆಯಲ್ಲಿ ಬೆಳೆದು ಬದುಕಬೇಕಾದ 3 ವರ್ಷದ ಕಂದ ಓಂಕಾರ ತಂದೆ ಪ್ರಕಾಶ ಸಾವಿನಪ್ಪಿದ್ದಾನೆ. ಹೆದ್ದಾರಿ 167ರ ಮುಖ್ಯ ರಸ್ತೆಯ ಪಕ್ಕದಲ್ಲಿ ಪೈಪಲೈನ್ ಕೆಲಸಕ್ಕಾಗಿ ಗುಂಡಿತೋಡಲಾಗಿತ್ತು. ಆದರೆ ಗುಂಡಿ ಮುಚ್ಚದೆ ಅಧಿಕಾರಿಗಳು ಕರ್ತವ್ಯ ಲೋಪ ಮತ್ತು ದಿವ್ಯ ನಿರ್ಲಕ್ಷ್ಯತನ ತೊರದೆ ಇದ್ದರೆ ಮಗು ಜೀವಂತವಾಗಿ ಕುಟುಂಬದ ಜೊತೆಗೆ ಉಳಿಯುತ್ತಿತ್ತು. ತಾ.ಪಂ. ಅಧೀನ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನದ ಕಾರಣಕ್ಕೆ ಬೆಳೆದು ಭವಿಷ್ಯ ರೂಪಿಸಿಕೊಳ್ಳಬೇಕಾದ ಚಿಕ್ಕ ಕಂದ ಸಾವಿನ ದವಡೆಗೆ ಬಿಂದು ಮರಣಿಸಿದ್ದಾನೆ ಎಂದು ಗ್ರಾಮದ ಹಿರಿಯ ಮುಖಂಡ ಸುಧಾಕರ ಪಾಟೀಲ ಹಾಗೂ ಕುರುಬ ಸಮಾಜದ ಮುಖಂಡ ರೇವಣಸಿದ್ದ ಅಣಕಲ್ , ಗೋಪಾಲ ಗಾರಂಪಳ್ಳಿ ಮತ್ತು ಹಣಮಂತ ಪೂಜಾರಿ ಅವರು ಆರೋಪಿಸಿದ್ದಾರೆ.
ಕುಟುಂಬಕ್ಕೆ ಇದ್ದ ಏಕೈಕ ಗಂಡು ಮಗುವನ್ನು ಕಳೆದುಕೊಂಡ ಕುರುಬ ಸಮಾಜದ ಕುಟುಂಬ ಆಘಾತಕ್ಕೆ ಉಂಟಾಗಿದೆ. ಘಟನೆಯ ಸಂಪೂರ್ಣ ಜವಬ್ದಾರಿಯನ್ನು ಹೋತ್ತು ತಾಲೂಕ ಪಂಚಾಯತ ಇಲಾಖೆ ಕಾರ್ಯಾಲಯ ಅಧಿಕಾರಿಗಳು ಮೃತ ಮಗುವಿನ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ಧನ ನೀಡಬೇಕೆಂದು ಕಲ್ಲೂರ ಗ್ರಾಮದ ಗ್ರಾಮಸ್ಥರು ಹಾಗೂ ಕುರುಬ ಸಮಾಜದ ಮುಖಂಡರುಗಳು ಆಗ್ರಹಿಸಿ, ಅಧಿಕಾರಿ ಸಂತೋಷಕುಮಾರ ಚವ್ಹಾಣ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೇ ಕರ್ತವ್ಯದಲ್ಲಿ ದಿವ್ಯ ನಿರ್ಲಕ್ಷ್ಯತನ ತೊರಿರುವ ಪಂಚಾಯತ್ ಅಧಿಕಾರಿಗಳಿಗೆ ತಕ್ಷಣಕ್ಕೆ ಅಮಾನತು ಮಾಡಿ, ವರ್ಗಾಯಿಸಬೇಕೆಂದು ಇಲಾಖೆಯ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ಮನವಿ ಸಲ್ಲಿಸಿ ಅವರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕಲ್ಲೂರ ಗ್ರಾಮದ ಹಿರಿಯ ಮುಖಂಡ ಸುಧಾಕರ ಪಾಟೀಲ್ ಕಲ್ಲೂರ, ಸಂತೋಷ ಸಿರ್ಸಿ, ಅಂಜಪ್ಪ ಪೂಜಾರಿ, ನರಸಪ್ಪ ಹಿರೆಕುರುಬ, ಗೋಪಾಲ ಎಂ.ಪಿ, ರೇವಣಸಿದ್ದ ಅಣಕಲ್, ಹಣಮಂತ ಪೂಜಾರಿ,ಮಹೇಶ ನಾಟಿಕಾರ್, ರವಿಕುಮಾರ ಸಿರ್ಸಿ, ಮಲ್ಲಪ್ಪ ಹಿರೆಕುರುಬ, ರಾಘು ಪೂಜಾರಿ, ನಾಗೇಶ ಪೂಜಾರಿ, ರಾಕೇಶ ನಾಟಿಕಾರ, ಗುರುನಾಥ ನಾಟೀಕಾರ, ಮಾಳಪ್ಪ ಪೂಜಾರಿ, ಸನ್ನಿ ನಾಟಿಕರ್ ಅವರು ಇದ್ದರು.

