ಸಿಗೆ ಹುಣ್ಣಿಮೆ: ಆನಂದಿ ಅಂಬಾಬಾಯಿ ದೇವಸ್ಥಾನದಲ್ಲಿ ಮಹಾಪೂಜೆ, ಮಹಾಪ್ರಸಾದ
ಸಿಗೆ ಹುಣ್ಣಿಮೆ: ಆನಂದಿ ಅಂಬಾಬಾಯಿ ದೇವಸ್ಥಾನದಲ್ಲಿ ಮಹಾಪೂಜೆ, ಮಹಾಪ್ರಸಾದ
ಸಾವಿರಾರು ಭಕ್ತರಿಂದ ದೇವಿಯ ದರ್ಶನ; ಶ್ರದ್ಧಾಭಕ್ತಿಯಿಂದ ನಡೆದ ಧಾರ್ಮಿಕ ಕಾರ್ಯಕ್ರಮ
ಕಲಬುರಗಿ: ನಗರದ ಸರಾಫ್ ಬಜಾರ್ನ ಹಳೆ ಭೋವಿ ಗಲ್ಲಿಯಲ್ಲಿರುವ ಶ್ರೀ ಆನಂದಿ ಅಂಬಾಬಾಯಿ ದೇವಸ್ಥಾನದಲ್ಲಿ ಸಿಗೆ ಹುಣ್ಣಿಮೆಯ ಪ್ರಯುಕ್ತ ಭೋವಿ ಸಮಾಜ ಕಲಬುರಗಿ ವತಿಯಿಂದ ಮಹಾಪೂಜೆ ಹಾಗೂ ಮಹಾಪ್ರಸಾದ ವಿತರಣಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿತು.
ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಕುಟುಂಬ ಸಮೇತರಾಗಿ ಪಾಲ್ಗೊಂಡು ಶ್ರೀ ಆನಂದಿ ಅಂಬಾಬಾಯಿ ದೇವಿಯ ವಿಶೇಷ ಪೂಜೆಯಲ್ಲಿ ಭಾಗವಹಿಸಿ ದರ್ಶನ ಪಡೆದರು. ಬಳಿಕ ಮಹಾಪ್ರಸಾದ ಸ್ವೀಕರಿಸಿದರು.
ಭೋವಿ ಸಮಾಜ ಕಲಬುರಗಿಯ ಅಧ್ಯಕ್ಷ ಶಂಕರರಾವ್ ಆರ್. ಪುರಾಣಿಕರ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜಕೀಯ ಮುಖಂಡರು, ವಿವಿಧ ಸಮಾಜಗಳ ಮುಖಂಡರು, ಸಮಾಜದ ಬಂಧುಗಳು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಧಾರ್ಮಿಕ ಕಾರ್ಯಕ್ರಮವು ಭಕ್ತಿಭಾವ ಮತ್ತು ಸಮಾಜದ ಒಗ್ಗಟ್ಟಿನ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಶಂಕರರಾವ್ ಆರ್. ಪುರಾಣಿಕರ್, ಬಾಬುರಾವ್ ಬಿ. ಯೇರಸ್ಕರ್, ಲಕ್ಷ್ಮೀಕಾಂತ ಎನ್. ಮನೋಕರ್, ದಯಾನಂದ ಪಿ. ಮನೋಕರ್, ಅಂಬರೀಶ್ ಕುಮಾರ್ ಎ. ನೈದ್ರಕರ್, ಕಿರಣ್ ಕುಮಾರ್ ಎ. ನೈದ್ರಕರ್, ವಿಠಲ ಎನ್. ದಾಳಿಂಬಕರ್, ಅಂಬಾದಾಸ ಬಿ. ನೈದ್ರಕರ್, ಪ್ರಾಣೇಶ್ ಎನ್. ತಾಂಡೂರ್ಕರ್, ದತ್ತಾತ್ರೇಯ ಎಸ್. ಮನೋಕರ್, ಅಂಬರೀಶ್ ಎಸ್. ತುಮಕೂರು, ಲಕ್ಷ್ಮೀನಾರಾಯಣ ಎ. ಮನೋಕರ್, ಅಂಬಾದಾಸ ಆರ್. ಸಾಗರಕರ್, ಶ್ರೀನಿವಾಸ್ ಆರ್. ಪುರಂಕರ, ತುಕಾರಾಂ ಎಸ್. ನೈದ್ರಕರ್ ಹಾಗೂ ನಾಗರಾಜ್ ಎಂ. ತಾಂಡೂರ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

