ಡೊಂಗರಗಾಂವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ

ಡೊಂಗರಗಾಂವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ

ಡೊಂಗರಗಾಂವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ

ಡೊಂಗರಗಾಂವ: ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಡೊಂಗರಗಾಂವದ ಆಡಳಿತ ಮಂಡಳಿಯ ಸದಸ್ಯರ ಆಯ್ಕೆ ಅವಿರೋಧವಾಗಿ ನಡೆದಿದ್ದು, ಗ್ರಾಮದ ಮುಖಂಡರ ಸಮ್ಮುಖದಲ್ಲಿ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಚಂದ್ರಶೇಖರ ಎನ್. ಗೋಳದೆ, ಶಾಂತು ಬಿ. ಪಾಟೀಲ, ಶರಣಬಸಪ್ಪ ಭೀಮನಳ್ಳಿ, ಪ್ರವೀಣ್ ರಾಮಪುರ, ಗುರು ಉಳ್ಳಾಗಡ್ಡಿ, ಸಂಗೀತಾ ಎಂ. ವಡ್ಡಣಕೇರಿ, ಕಾವೇರಿ ಆರ್. ಕಾರಂಗಿ, ಲಲಿತಾ ಎಸ್. ಬೇಡರ, ಪಾರ್ವತಿ ಕೆ. ವಡ್ಡಣಕೇರಿ ಹಾಗೂ ಲಕ್ಷ್ಮಿ ಎಸ್. ಮುಖಿ . ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಗಳಾದ ರೇವಣಸಿದ್ದಯ್ಯ ಹಿರೇಮಠ ಹಾಗೂ ಚಂದ ಪಾಸ್ಯ ಅವರು ಸದಸ್ಯರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬ್ರಹ್ಮಾನಂದ ನೊರೂಣಿ, ಬಸವರಾಜ ನಿಂಬುರೆ, ಮಾಣಿಕಪ್ಪ ಜಾಣಕಟ್ಟೆ, ಶಿವರಾಜ ಮುಖಿ ಹಾಗೂ ದಶರಥ ಸೀತಾಳಗೇರಿ, ವೀರಣ್ಣ ಬೇಡಿರ್. ಶ್ರೀಕಾಂತ್ ಕಾಂಬ್ಳೆ. ಪಂಚ ಗ್ಯಾರಂಟಿ ಯೋಜನೆ ತಾಲೂಕು ಸದ್ಯಸರು ಮುರುಗೇಶ್ ಕೆ. ಇಟಾಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಸ್ತುತ ಬರಗಾಲದ ಪರಿಸ್ಥಿತಿಯಲ್ಲಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಚುನಾವಣೆಗೆ ಅನಗತ್ಯವಾಗಿ ವೆಚ್ಚ ಮಾಡುವ ಬದಲು, ಗ್ರಾಮದ ಮುಖಂಡರ ಮಾರ್ಗದರ್ಶನದಲ್ಲಿ ಎಲ್ಲರೂ ಒಮ್ಮತದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಈ ನಿರ್ಧಾರವು ಸಹಕಾರ ಕ್ಷೇತ್ರದ ಇತರ ಸಂಘಗಳಿಗೂ ಮಾದರಿಯಾಗಲಿ ಎಂದು ಹಿರಿಯರು ಅಭಿಪ್ರಾಯಪಟ್ಟರು.