ನಂಬಿಕೆ ಮತ್ತು ವಿಶ್ವಾಸದ ಸೇವೆಯೇ ಅಂಚೆ: ಶಿವರಾಜ ಅಂಡಗಿ
ನಂಬಿಕೆ ಮತ್ತು ವಿಶ್ವಾಸದ ಸೇವೆಯೇ ಅಂಚೆ: ಶಿವರಾಜ ಅಂಡಗಿ
ಕಲಬುರಗಿ: ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತಾ, ಪತ್ರಗಳು, ಹಣ, ವಸ್ತುಗಳು ಹಾಗೂ ದಾಖಲೆಗಳನ್ನು ಸುರಕ್ಷಿತವಾಗಿ, ಕಡಿಮೆ ವೆಚ್ಚದಲ್ಲಿ ಮನೆ ಬಾಗಿಲಿಗೆ ತಲುಪಿಸುವ ವಿಶ್ವಾಸದ ಸೇವೆಯೇ ಅಂಚೆ ಎಂದು ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಹೇಳಿದರು.
ಅಕ್ಟೋಬರ್ 9ರ ವಿಶ್ವ ಅಂಚೆ ದಿನದ ನಿಮಿತ್ತ ನಗರದ ಕೋಟನೂರಿನ ಕಾಕಾ ಲೇಔಟ್‌ನಲ್ಲಿ ನಿವೃತ್ತ ಅಂಚೆದಾರ ಶಿವಶರಣಪ್ಪ ಪರಪ್ಪಗೋಳ ತಾಡತೆಗನೂರ ಅವರನ್ನು ಅಂಡಗಿ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು. ಅಧಿಕೃತ ಹಾಗೂ ಭಾವನಾತ್ಮಕ ಸಂವಹನದಲ್ಲಿ ಅಂಚೆ ಸೇವೆ ನಂಬಿಕೆ ಮತ್ತು ವಿಶ್ವಾಸಕ್ಕೆ ಮತ್ತೊಂದು ಹೆಸರಾಗಿದೆ. ತಂತ್ರಜ್ಞಾನ ಬೆಳೆದಿದ್ದರೂ ಅಂಚೆ ಸೇವೆಯ ಮಹತ್ವ ಕಡಿಮೆಯಾಗಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲ ವಿನೋದಕುಮಾರ ಜನೇವರಿ, ಡಾ. ವಿವೇಕಾನಂದ ಬುಳ್ಳಾ, ಜನಪದ ಕಲಾವಿದ ವಿಶ್ವನಾಥ ತೋಟ್ನಳ್ಳಿ, ಬಿ.ಎಂ. ಪಾಟೀಲ ಕಲ್ಲೂರ, ಕೋಟನೂರ ಬಸವರಾಜ ಹೂಗಾರ, ಪ್ರಶಾಂತ ನಂದಿಕೂರ, ನಿವೃತ್ತ ಎ.ಎಸ್.ಐ. ಮಲ್ಲಿಕಾರ್ಜುನ ಪೂಜಾರಿ, ದಿನೇಶ ದೊಡ್ಡಮನಿ, ಶಿವಶರಣಪ್ಪ ಅಮೃತ ಪೂಜಾರಿ, ಬಸವರಾಜ ಕುಂಬಾರ, ನಿವೃತ್ತ ಪಿ.ಎಸ್.ಐ. ಚೌಡಪ್ಪ, ಶಿವಾಜಿ ಕುಂಬಾರ, ಓಂ ಪ್ರಕಾಶ ನಾಸಿ, ಮಲ್ಲಿಕಾರ್ಜುನ ಕೋಟೆ ನೀಲಹಳ್ಳಿ ಹಾಗೂ ವಿಶ್ವನಾಥ ಬಂಗಾರಿ ಉಪಸ್ಥಿತರಿದ್ದರು.

