ಅ. 13ರಂದು ಶ್ರೀನಿಧಿ ಆಚಾರ್ಯರಿಂದ ಉಂಜಲ್ ಸಂಗೀತ ಕಾರ್ಯಕ್ರಮ

ಅ. 13ರಂದು ಶ್ರೀನಿಧಿ ಆಚಾರ್ಯರಿಂದ ಉಂಜಲ್ ಸಂಗೀತ ಕಾರ್ಯಕ್ರಮ

ಅ. 13ರಂದು ಶ್ರೀನಿಧಿ ಆಚಾರ್ಯರಿಂದ ಉಂಜಲ್ ಸಂಗೀತ ಕಾರ್ಯಕ್ರಮ

ಬೆಂಗಳೂರು: ನವರಾತ್ರಿ ಉತ್ಸವದ ಅಂಗವಾಗಿ ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿರುವ ತಿರುಮಲ ತಿರುಪತಿ ದೇವಸ್ಥಾನದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಅಕ್ಟೋಬರ್ 13ರಂದು ಮಂಗಳವಾರ ಸಂಜೆ 6 ಗಂಟೆಗೆ ಉಂಜಲ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಕುಮಾರಿ ಶ್ರೀನಿಧಿ ಆಚಾರ್ಯ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಶ್ರೀನಿವಾಸ ಕಾಖಂಡಕಿ ತಬಲಾ ಹಾಗೂ ಪ್ರಕಾಶ್ ಕೀಬೋರ್ಡ್‌ನಲ್ಲಿ ಸಹಕರಿಸಲಿದ್ದಾರೆ ಎಂದು ಹಿಂದೂ ಧರ್ಮ ಪ್ರಚಾರ ಪರಿಷತ್‌ನ ಸಂಚಾಲಕ ಡಾ .ಪಿ. ಭುಜಂಗ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.