ಪ್ರಬುದ್ಧ ಮತದಾರರಿಂದ ಕೈ ಔಟ್ - ಸರ್ಕಾರ ವಿರುದ್ಧ ಜನಾದೇಶ : ಡಾ. ಉಮೇಶ್ ಜಾಧವ್

ಪ್ರಬುದ್ಧ ಮತದಾರರಿಂದ ಕೈ ಔಟ್ -  ಸರ್ಕಾರ ವಿರುದ್ಧ ಜನಾದೇಶ : ಡಾ. ಉಮೇಶ್ ಜಾಧವ್

ಪ್ರಬುದ್ಧ ಮತದಾರರಿಂದ ಕೈ ಔಟ್ - ಸರ್ಕಾರ ವಿರುದ್ಧ ಜನಾದೇಶ : ಡಾ. ಉಮೇಶ್ ಜಾಧವ್

 ಕಲಬುರಗಿ : ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕ ಮತಕ್ಷೇತ್ರ ಗಳಿಗೆ ರಾಜ್ಯದಲ್ಲಿ ನಡೆದ ಚುನಾವಣಾ ಫಲಿತಾಂಶದಲ್ಲಿ ಪ್ರಬುದ್ಧ ಶಿಕ್ಷಕ ಮತದಾರರು ಕೈ ಯನ್ನು ಔಟ್ ಮಾಡಿರುವುದು ಸರಕಾರದ ಆಡಳಿತದ ವಿರುದ್ಧದ ಜನಾದೇಶದ ಸೂಚನೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹೇಳಿದರು.

   ಕರ್ನಾಟಕದ ಎರಡು ಪದವೀಧರ ಮತ್ತು ಎರಡು ಶಿಕ್ಷಕ ಮತಕ್ಷೇತ್ರಗಳ ಚುನಾವಣೆಯಲ್ಲಿ ಪ್ರಬುದ್ಧ ಶಿಕ್ಷಕ ಮತದಾರರು ಕಾಂಗ್ರೆಸ್ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಿ ಬಿಜೆಪಿ ಜೆಡಿಎಸ್ ಮೈತ್ರಿಯ ಏನ್ ಡಿ ಎ ಅಭ್ಯರ್ಥಿಗಳನ್ನು ಗೆಲ್ಲಿಸಿ ಸರಕಾರದ ವಿರುದ್ಧ ಸ್ಪಷ್ಟವಾದ ಜನಾದೇಶ ನೀಡಿದ್ದಾರೆ. ಕಾಂಗ್ರೆಸ್ ಸರಕಾರದ ನಾಲ್ಕು ವರ್ಷದ ಆಡಳಿತ ಸಂಪೂರ್ಣ ವಿಫಲವಾಗಿದ್ದು ಅಭಿವೃದ್ಧಿ ಶೂನ್ಯವಾಗಿದೆ. ಪದವೀಧರ ಮತ್ತು ಶಿಕ್ಷಕರ ಸಮಸ್ಯೆಗೆ ಸ್ಪಂದಿಸದೆ ಕೇವಲ ಬುರುಡೆ ಮಾತುಗಳಿಂದ ಮಂಕುಬೂದಿ ಎರಚಿ ಜನರನ್ನು ಮೋಸ ಮಾಡಿದ ಸರಕಾರಕ್ಕೆ ತಕ್ಕ ಪಾಠ ಕಲಿಸಿದಂತಾಗಿದೆ . ರಾಜ್ಯದ ರಾಜಕಾರಣಕ್ಕೆ ಸ್ಟಿಂಗ್ ಅಪರೇಷನ್ ನಂತಹ ಲಜ್ಜೆ ಕೆಟ್ಟ ಸಂಪ್ರದಾಯ ಹಾಕಿದ ಕಾಂಗ್ರೆಸ್ ನ ಬಗ್ಗೆ ಜನರಿಗೆ ಅಸಹ್ಯ ಹಾಗೂ ಭ್ರಮನಿರಸನವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವುದೇ ಅಭಿವೃದ್ಧಿಯನ್ನು ಮಾಡದೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಅಕ್ಷರ ಆವಿಷ್ಕಾರದಂತಹ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿ ಸಾವಿರಾರು ಕೋಟಿ ರೂಪಾಯಿ ಪೋಲು ಮಾಡಿದ ಸರಕಾರವು ಎಸ್ ಎಸ್ ಎಲ್ ಸಿ, ಪಿಯುಸಿ ಫಲಿತಾಂಶದಲ್ಲಿ ಒಂದಿಸ್ಟೂ ಪ್ರಗತಿಯನ್ನು ಕಾಣಲು ಸಾಧ್ಯವಾಗಲಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಗುಣಾತ್ಮಕ ಬದಲಾವಣೆಯ ನೀತಿ ಅನುಸರಿಸದೆ ಹಾಗೂ ಶಿಕ್ಷಕರ ನೇಮಕಾತಿ ಮಾಡದೆ ಪೂರ್ಣವಾಗಿ ಶಿಕ್ಷಣ ರಂಗವನ್ನು ಕಡೆಗಣಿಸಿ ಅಯೋಮಯ ಸೃಷ್ಟಿಸಿದ ಪರಿಣಾಮವಾಗಿ ಶಿಕ್ಷಕರು ಎನ್ ಡಿ ಎ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಖರ್ಗೆಯವರ ತವರಲ್ಲಿ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಭರ್ಜರಿ ಯಶಸ್ಸು ಸಾಧಿಸಿ ಕಮಲವನ್ನು ಅರಳಿಸಿ ಕಾಂಗ್ರೆಸ್ ಸರಕಾರಕ್ಕೆ ತೀವ್ರ ಮುಖ ಭಂಗವಾಗಿದೆ. 2028ರ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಮತ್ತು ಜೆಡಿಎಸ್ ಮೈತ್ರಿಕೂಟದ ಎನ್ ಡಿ ಎ ಅದ್ಭುತ ಯಶಸ್ಸು ಸಾಧಿಸುವ ಮುನ್ಸೂಚನೆಯನ್ನು ಈ ಚುನಾವಣೆ ನೀಡಿದೆ. ಐದನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸುವ ಜನಪ್ರಿಯ ನಾಯಕ, ಶಿಕ್ಷಣ ರಂಗದ ದೂರದೃಷ್ಟಿಯ ನಾಯಕ ಶಶಿಲ್ ಜಿ ನಮೋಶಿ ಅವರಿಗೆ ಅಭಿನಂದನೆಗಳು ಮತ್ತು ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಶಿಕ್ಷಕರ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಿ ಶಿಕ್ಷಣ ರಂಗದ ಪ್ರಗತಿಗೆ ಸಾರಥ್ಯವಹಿಸಲಿ ಎಂದು ಪತ್ರಿಕಾ ಹೇಳಿಕೆ ನೀಡಿ ಶುಭ ಕೋರಿದ್ದಾರೆ.