ವಾಡಿ - ಗದಗ ರೈಲ್ವೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿ : ಶರಣು ಹೊಸೂರ.
ವಾಡಿ - ಗದಗ ರೈಲ್ವೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿ : ಶರಣು ಹೊಸೂರ.
ಶಹಪುರ : ವಾಡಿ-ಗದಗ ನೂತನ ರೈಲು ಮಾರ್ಗ ಕಾಮಗಾರಿಯು ಕಲ್ಯಾಣ ಕರ್ನಾಟಕ ಭಾಗದ ಜನರ ಶತಮಾನದ ಕನಸಾಗಿದ್ದು ಈ ಯೋಜನೆ ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಯುವ ಮುಖಂಡ ಶರಣು ಹೊಸೂರ ಆಗ್ರಹಿಸಿದ್ದಾರೆ.
ಪ್ರಸ್ತುತ ಈ ಬೃಹತ್ ಕಾಮಗಾರಿ ಪ್ರಗತಿಯಲ್ಲಿದ್ದು,ಪ್ರತಿಶತ 80% ರಷ್ಟು ಕಾಮಗಾರಿ ಪೂರ್ಣಗೊಂಡಿದೆ,ಆದಷ್ಟು ಬೇಗನೆ ರೈಲು ಸಂಚಾರಕ್ಕೆ ಅನುಕೂಲ ಮಾಡಿಕೊಡುವುದರೊಂದಿಗೆ ಈ ಭಾಗದ ಕೊಪ್ಪಳ,ರಾಯಚೂರು, ಯಾದಗಿರಿ ಹಾಗೂ ಕಲಬುರಗಿ, ಲಿಂಗಸೂರು,ಮುದ್ಗಲ್, ಸುರಪುರ,ಶಹಪುರ ಮುಂತಾದ ಪ್ರಮುಖ ನಗರಗಳಿಗೆ ರೈಲ್ವೆ ಸಂಪರ್ಕ ಸಿಗಲಿದ್ದು ಈ ಭಾಗದ ವ್ಯಾಪಾರ ವಹಿವಾಟಿನ ಜೊತೆಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಮತ್ತಷ್ಟು ಅನುಕೂಲವಾಗುತ್ತದೆ ಎಂದು ಹೇಳಿದರು.
ಶಹಪುರ ಮತ್ತು ವಾಡಿ ನಡುವಿನ ಸುಮಾರು 47 ಕಿಲೋಮೀಟರ್ ಮಾರ್ಗದ ಸಿವಿಲ್ ಕಾಮಗಾರಿಗಳು ಪ್ರಗತಿಯಲ್ಲಿದ್ದು,ಮಾರ್ಗ ಮಧ್ಯ ಕೆಲವು ಸಣ್ಣಪುಟ್ಟ ಸಮಸ್ಯೆಗಳು ಉದ್ಭವಿಸಿದ್ದು,ಕೂಡಲೇ ಮುಂದಿನ 2027 ಜನವರಿಯಲ್ಲಿ ರೈಲು ಸಂಚರಿಸಬೇಕೆಂಬುದು ಈ ಭಾಗದ ಜನರ ಆಶಯವಾಗಿದೆ ಎಂದು ನುಡಿದರು.

