ಗ್ರಾಮೀಣ ಪ್ರತಿಭೆಗೆ ಒಲಿದ ವೈದ್ಯ ಸೀಟು ಅಭಿನಂದನೆ

ಗ್ರಾಮೀಣ ಪ್ರತಿಭೆಗೆ ಒಲಿದ ವೈದ್ಯ ಸೀಟು ಅಭಿನಂದನೆ

ಗ್ರಾಮೀಣ ಪ್ರತಿಭೆಗೆ ಒಲಿದ ವೈದ್ಯ ಸೀಟು ಅಭಿನಂದನೆ

 ಕಲಬುರಗಿ : ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಪ್ರತಿಭಾವಂತೆಯೊಬ್ಬಳು ಸರಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆದು ಮಾದರಿಯಾಗಿದ್ದಾಳೆ !.

    ಕಲಬುರಗಿಯ ಸಯ್ಯದ್ ಚಿಂಚೋಳಿ ಗ್ರಾಮದ ಮಾಜಿ ಪಂಚಾಯತ್ ಅಧ್ಯಕ್ಷರಾದ ಅನಿಲ್ ಕುಮಾರ್ ಡಾಂಗೆ ಮತ್ತು ಸುನಿತಾ ಡಾoಗೆ ಅವರ ಸುಪುತ್ರಿ ರುಚಿತಾ ಡಾoಗೆ ತಮ್ಮ ಪರಿಶ್ರಮದ ಓದಿನಿಂದ ಇದೀಗ ಕಲಬುರಗಿಯ ಶೆಟ್ಟಿ ಹೊಮಿಯೋಪತಿ ಕಾಲೇಜಿನಲ್ಲಿ ಬಿ ಎಚ್ ಎಂ ಎಸ್ ಗೆ ( ಹೋಮಿಯೋ ಪತಿ) ಸೀಟು ಪಡೆದು ಮಾದರಿಯಾಗಿದ್ದಾಳೆ.

     ಕಲಬುರಗಿ ಸಮೀಪದ ಸಯ್ಯದ್ ಚಿಂಚೋಳಿಯ ಚಂದ್ರಶೇಖರ್ ಪಾಟೀಲ್ ರೇವೂರು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಒಂದರಿಂದ 10ನೇ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ನಂತರ ಕಲಬುರಗಿಯ ಶಾಂತಿ ಚೇತನ ಪಿಯು ಕಾಲೇಜಿನಲ್ಲಿ ಅಧ್ಯಯನ ಮಾಡಿ ಇದೀಗ ವೈದ್ಯಕೀಯ ವ್ಯಾಸಂಗಕ್ಕೆ ಸೀಟು ಗಿಟ್ಟಿಸಿಕೊಂಡಿದ್ದಾಳೆ.

    ಪ್ರತಿಭಾವಂತ ವಿದ್ಯಾರ್ಥಿನಿಯನ್ನು ಇತ್ತೀಚೆಗೆ ನಡೆದ ಸಮಾರಂಭದಲ್ಲಿ ವಿಶೇಷವಾಗಿ ಸನ್ಮಾನಿಸಿದ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಮಾತನಾಡಿ ಪ್ರತಿಭೆ ಅರಳಲು ನಗರ ಗ್ರಾಮೀಣ ಎಂಬ ಭೇದಭಾವವಿಲ್ಲ. ಆದರೆ ಶ್ರದ್ಧೆ , ಸ್ಪಷ್ಟ ಗುರಿ ಮತ್ತು ಕಠಿಣ ಪರಿಶ್ರಮವೇ ಯಶಸ್ಸಿಗೆ ಮೂಲ ಕಾರಣ ಎಂದು ಹೇಳಿ ರುಚಿತಾ ಡಾoಗೆ ಅವರು ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದರು. ಸಾಧನೆ ತೋರಿದ ವಿದ್ಯಾರ್ಥಿನಿಗೆ ಕಲಿತ ಶಾಖೆಯಲ್ಲಿ ಶಾಲು ಹೂಗುಚ್ಛ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಪಿಎಸ್ಐ ಯಶೋಧಾ ಕಟಕೆ, ಕಥೆಗಾರ್ತಿ ಸಂಧ್ಯಾ ಹೊನಗುಂಟಿಕರ್, ಮಹೇಶ್ ಕಡೇಚೂರ್ ಶುಭ ಕೋರಿದರು. ವಿದ್ಯಾರ್ಥಿನಿಯ ಹೆತ್ತವರಾದ ಅನಿಲ್ ಕುಮಾರ್ ಡಾಂಗೆ, ಸುನೀತಾ ಡಾoಗೆ ಮತ್ತು ಸುಚೇತ್ ಡಾoಗೆ ಉಪಸ್ಥಿತರಿದ್ದರು

.