ಶ್ರೀ ಶಿವಶರಣಾನಂದ ಅವಧೂತರ ಮೂರ್ತಿ
ಶ್ರೀ ಶಿವಶರಣಾನಂದ ಅವಧೂತರ ಮೂರ್ತಿ ಪ್ರತಿಷ್ಠಾಪನೆ: ಆ.25ರಂದು 108 ಕುಂಭೋತ್ಸವ, ಭವ್ಯ ಮೆರವಣಿಗೆ
ಕಲಬುರಗಿ: ತಾಲೂಕಿನ ಕೋಟನೂರ (ಡಿ) ಗ್ರಾಮದ ಕೆಸರಟಗಿ ರಸ್ತೆಯಲ್ಲಿರುವ ಶ್ರೀ ಶಿವಶರಣಾನಂದ ಅವಧೂತ ಆಶ್ರಮದ ವತಿಯಿಂದ ಆ.25ರಂದು ಶ್ರೀ ಶಿವಶರಣಾನಂದ ಅವಧೂತರ ಮೂರ್ತಿ ಪ್ರತಿಷ್ಠಾಪನೆ ಹಾಗೂ 108 ಕುಂಭೋತ್ಸವ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಗಿದೆ.
ಆ.25ರಂದು ಬೆಳಗ್ಗೆ 10 ಗಂಟೆಗೆ ಕೋಟನೂರ (ಡಿ) ಗ್ರಾಮದ ಶ್ರೀ ಸಿದ್ಧಾರೂಢ ಮಠದಿಂದ ಶ್ರೀ ಶಿವಶರಣಾನಂದ ಅವಧೂತರ ದೇವಸ್ಥಾನದವರೆಗೆ ಮೂರ್ತಿಯನ್ನು ಭವ್ಯ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಗುವುದು. ಮೆರವಣಿಗೆಯಲ್ಲಿ ಡೊಳ್ಳು ಸೇರಿದಂತೆ ವಿವಿಧ ಸಕಲ ವಾದ್ಯಗಳೊಂದಿಗೆ ಭಕ್ತರು ಪಾಲ್ಗೊಳ್ಳಲಿದ್ದು, ಆರತಿ ಹಾಗೂ 108 ಕುಂಭೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀ ಶಿವಶರಣಾನಂದ ಅವಧೂತ ಆಶ್ರಮ ಟ್ರಸ್ಟ್‌ನ ಸದಸ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.

