ಹಿರಿಯರ ಆದರ್ಶ ಭವಿಷ್ಯದ ಬಾಳಿಗೆ ದಾರಿ ದೀಪ ವಿಶ್ವಹಿರಿಯ ನಾಗರಿಕರ ದಿನಾಚರಣೆ : ಡಾ ಸದಾನಂದ ಪೆರ್ಲ ಅಭಿಮತ

ಹಿರಿಯರ ಆದರ್ಶ ಭವಿಷ್ಯದ  ಬಾಳಿಗೆ ದಾರಿ ದೀಪ   ವಿಶ್ವಹಿರಿಯ ನಾಗರಿಕರ ದಿನಾಚರಣೆ : ಡಾ ಸದಾನಂದ ಪೆರ್ಲ ಅಭಿಮತ

ಹಿರಿಯರ ಆದರ್ಶ ಭವಿಷ್ಯದ ಬಾಳಿಗೆ ದಾರಿ ದೀಪ

 ವಿಶ್ವಹಿರಿಯ ನಾಗರಿಕರ ದಿನಾಚರಣೆ : ಡಾ ಸದಾನಂದ ಪೆರ್ಲ ಅಭಿಮತ

 ಕಲಬುರಗಿ : ಹಿರಿಯ ನಾಗರಿಕರ ಅನುಭವ ಮತ್ತು ಆದರ್ಶಗಳು ಭವಿಷ್ಯದ ಬಾಳಿಗೆ ದಾರಿ ದೀಪವಾಗುತ್ತದೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಹೇಳಿದರು.

    ಕಲಬುರಗಿಯ ದನಗರಗಲ್ಲಿ ಕೋರಿ ಮಠದ ಶ್ರೀ ರೇವಣಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಆಗಸ್ಟ್ 21ರಂದು ಶುಕ್ರವಾರ ಬಸವೇಶ್ವರ ಸೇವಾ ಸಮಾಜದ ಸಹಯೋಗದೊಂದಿಗೆ ನಡೆದ " ವಿಶ್ವ ಹಿರಿಯ ನಾಗರಿಕರ ದಿನಾಚರಣೆ" ಯನ್ನು ಉದ್ಘಾಟಿಸಿ ಮಾತನಾಡಿ 1988ರಲ್ಲಿ ಅಮೆರಿಕದ ಅಧ್ಯಕ್ಷರಾದ ರೊನಾಲ್ಡ್ ರೇಗನ್ ವಿಶ್ವಸಂಸ್ಥೆಯಲ್ಲಿ ಮಂಡಿಸಿದ ನಿರ್ಣಯದಂತೆ ಪ್ರತಿ ವರ್ಷ ಆಗಸ್ಟ್ 21 ದಿನವನ್ನು ವಿಶ್ವ ಹಿರಿಯ ನಾಗರಿಕರ ದಿನವನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಹಿರಿಯ ನಾಗರಿಕರ ವೃದ್ಧಾಪ್ಯವನ್ನು ಸಂತೋಷದಾಯಕವಾಗಿ ಆರೋಗ್ಯ ಪೂರ್ಣ ಹಾಗೂ ಆರ್ಥಿಕ ಸಬಲತೆಯಿಂದ ನೆಮ್ಮದಿಯಿಂದ ಕಳೆಯುವಂತಾಗಲು ಎಲ್ಲರೂ ಕೈಜೋಡಿಸಬೇಕು. ಹಿರಿಯರ ಆದರ್ಶ ಹಾಗೂ ಅನುಭವದಲ್ಲಿ ಬದುಕನ್ನು ರೂಪಿಸಲು ಎಲ್ಲರೂ ಮುಂದಾಗ ಬೇಕಾಗಿದೆ.ಪ್ರಸಕ್ತ ಕಾಲದಲ್ಲಿ ಹಿರಿಯರ ಆತ್ಮ ಗೌರವ ಕಾಪಾಡಿ ನೆಮ್ಮದಿಯ ಬದುಕು ನೀಡುವ ಬದಲು ಹೆತ್ತ ಮಕ್ಕಳೇ ವೃದ್ಧಾಶ್ರಮಕ್ಕೆ ತಳ್ಳುವ ಮತ್ತು ನಿಂದನೆಗಳಿಗೆ ಗುರಿ ಮಾಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಯುವ ಜನಾಂಗವು ಹಿರಿಯರ ಕೊಡುಗೆಯನ್ನು ಗೌರವಿಸಿ ಅವರಿಗೆ ಉತ್ತಮ ಜೀವನ ಕಲ್ಪಿಸಲು ಪ್ರತಿಜ್ಞೆ ಕೈಗೊಳ್ಳಬೇಕು ಎಂದು ಡಾ. ಪೆರ್ಲ ಹೇಳಿದರು.

   ಬಸವೇಶ್ವರ ಸೇವಾ ಸಮಾಜದ ಅಧ್ಯಕ್ಷರಾದ ಉಪನ್ಯಾಸಕ ಎಚ್ ಬಿ ಪಾಟೀಲ್ ಮಾತನಾಡಿ ಹಿರಿಯರು ನಮ್ಮ ಸಮಾಜದ ಆಸ್ತಿ. ಹಿರಿ ಜೀವಗಳು ಗೌರವಯುತವಾಗಿ ಜೀವನ ಮಾಡಲು ಕುಟುಂಬದಲ್ಲಿ ಸೌಲಭ್ಯ ಕಲ್ಪಿಸಿ ಅವರು ಬೋಧಿಸುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಲು ನಾವೆಲ್ಲಾ ಮುಂದಾಗಬೇಕು ಎಂದರು. ಹಿರಿಯರ ಜೀವನವು ಕಿರಿಯರಿಗೆ ಮಾದರಿಯಾಗಿ ಜೀವನದಲ್ಲಿ ಸಂಸ್ಕಾರ ರೂಪಿಸಿಕೊಳ್ಳುವಂತೆ ಸಾನಿಧ್ಯ ವಹಿಸಿದ ಪ್ರವಚನಕಾರರಾದ ಅಗತೀರ್ಥದ ಶ್ರೀ ಬೀರಲಿಂಗೇಶ್ವರ ಸಿದ್ದಾಶ್ರಮದ ಪೂಜ್ಯ ಶ್ರೀ ಮಾಳಿಂಗರಾಯ ದೇವರು ಆಶೀರ್ವಚನವಿತ್ತರು.

 ಕಾರ್ಯಕ್ರಮದಲ್ಲಿ ಕೋರಿ ಮಠದ ಪ್ರಧಾನ ಕಾರ್ಯದರ್ಶಿ , ರಜನಿಕಾಂತ ಮೇಳಕುಂದಿ, ಪತ್ರಕರ್ತ ಶಿವಾಜಿ ಖಂಡೋಜಿ ಉಮೇಶ್ ರಾಥೋಡ್ ಶಾಮರಾವ್ ಎಸ್ ಹೊದಲೂರು, ರಾಜಶೇಖರ ಬಿರಾದಾರ, ಗುರುಲಿಂಗಪ್ಪ ಪೂಜಾರಿ, ಶಿವಯೋಗಪ್ಪ ಬಿರಾದಾರ ಶಿವಶರಣಪ್ಪ ಕೋಲಿ, ಲಲಿತಾ ಕುಮಾರಿ ಕವಿತಾ,ಶೃತಿ ಕೆ, ಕುಲಕರ್ಣಿ ರಾಜೇಶ್ವರಿ ಬನಸೋಡೆ ಅಶ್ವಿನಿ, ವಿಮಲಾ ಭೀಮಳ್ಳಿ, ರೇಖಾರಾಣಿ ಬಾಬುರಾವ್ ಸುಜಾತ ಕುಲಕರ್ಣಿ ಮತ್ತಿತರರಿದ್ದರು.