ಅರ್ಪಿತಾ ಪಾಟೀಲರ ಸಮಾಜ ಸುಧಾರಕರು

ಅರ್ಪಿತಾ ಪಾಟೀಲರ ಸಮಾಜ ಸುಧಾರಕರು

ಅರ್ಪಿತಾ ಪಾಟೀಲರ ಸಮಾಜ ಸುಧಾರಕರು

ಇಂದಿನ ಆಧುನಿಕ ಸಮಾಜದಲ್ಲಿ ಪ್ರತಿಯೊಬ್ಬರು ಹೆಸರು, ಗೌರವ, ಪ್ರಶಸ್ತಿ, ಪುರಸ್ಕಾರಗಳ ಬೆನ್ನುಹತ್ತಿ ಬರವಣಿಗೆ ಹಾಗೂ ಸಮಾಜ ಸೇವೆಗೈಯುವವರನ್ನು ನೋಡಿದ್ದೇವೆ. ಯಾವುದೇ ಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಭಾವನೆಯಿಂದ ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡ ಬೆರಳೆಣಿಕೆಯಷ್ಟು ಜನರು ನಮ್ಮ ಮಧ್ಯ ಇದ್ದಾರೆ. ಅಂಥವರ ಸಾಲಿನಲ್ಲಿ ಸಹೋದರಿ ಅರ್ಪಿತಾ ಪಾಟೀಲ ಒಬ್ಬರು. ಬದುಕಿನುದ್ದಕ್ಕೂ ನೋವು-ನಲಿವುಗಳನ್ನು ಸಮಚಿತ್ತದಿಂದ ಸ್ವೀಕರಿಸುವುದರೊಂದಿಗೆ ಆಶೆ ಆಮಿಷಗಳಿಗೆ ಪ್ರಾಶಸ್ತ್ರ ನೀಡದೆ ಹಾಗೂ ಉದಾಸೀನತೆ, ಅರ್ಥವಾಗದ ಕಸಿವಿಸಿ, ಮಾನಸಿಕ ವೇದನೆ, ಖಿನ್ನತೆ, ಉದ್ವಿಗ್ನತೆ, ಆಕ್ರೋಶ, ಅತೃಪ್ತಿ ಮತ್ತು ಆಂತರಿಕ ವಿಷಮತೆಗಳಿಲ್ಲದ, ಋಣಾತ್ಮಕ, ನಕಾರಾತ್ಮಕ ಚಿಂತನೆಗಳಿಗೆ ಅವಕಾಶ ನೀಡದೆ ಗುಣಾತ್ಮಕ ಮತ್ತು ಸಕಾರಾತ್ಮಕ ಚಿಂತನೆಗಳೊಂದಿಗೆ ಪ್ರಾಮಾಣಿಕ, ಪ್ರಾಂಜಲ, ಪರಿಶುದ್ಧ ಮನಸ್ಸಿನೊಂದಿಗೆ, ಮಾನವೀಯ ಮೌಲ್ಯಗಳೊಂದಿಗೆ, ಸಮತ್ವ ಮತ್ತು ಸ್ಥಿತಪ್ರಜ್ಞೆಯ ವ್ಯಕ್ತಿತ್ವದೊಂದಿಗೆ ಜೀವನದ ಪಯಣ ಸಾಗಿಸುತ್ತಿರುವ ಸಹೋದರಿ ಅರ್ಪಿತಾ ಕೆ. ಪಾಟೀಲರವರು ಕಲಬುರಗಿಯ ಜಿಲ್ಲೆಯ ಭೀಮಳ್ಳಿಯಲ್ಲಿ ಜನಿಸಿದ್ದು ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಸದ್ಯ ಆರಾಧನಾ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಇವರು ರಚಿಸಿದ ಸಮಾಜ ಸುಧಾರಕರು ಇವರ ಚೋಚ್ಚಲ ಕೃತಿಯಾಗಿದ್ದು ಈ ಕೃತಿಯಲ್ಲಿ ವಿಶ್ವಗುರು ಬಸವಣ್ಣ, ರಾಜಾರಾಮ ಮೋಹನರಾಯ, ಸ್ವಾಮಿ ದಯಾನಂದ ಸರಸ್ವತಿ, ಮದ‌ರ್ ತೆರೇಸ್ಸಾ, ಬಾಲಗಂಗಾಧರ ತಿಲಕ, ಗೋಪಾಲಕೃಷ್ಣ ಗೋಖಲೆ, ರಾಜಗೋಪಾಲಚಾರಿ, ಡಾ. ಎಂ. ಸಿ. ಮೋದಿ ಸೇರಿದಂತೆ ಹಲವು ಸಮಾಜ ಸುಧಾರಕರ ಸಮಾಜಪರ ಕಾಳಜಿ,ಸಾಮಾಜಿಕ ಕಳಕಳಿ ಮತ್ತು ಸಮಾಜಕ್ಕೆ ಅವರ ಕೊಡುಗೆ ಜೊತೆಗೆ ಅವರ ಸಂಕ್ಷಿಪ್ತ ಜೀವನದ ಮೇಲೆ ಬೆಳಕು ಚೆಲ್ಲಿದ್ದು ಅಲ್ಲದೆ ಅತ್ಯಂತ ಮಹತ್ವದ ಸಂಗತಿಗಳನ್ನು ಸಂಕ್ಷಿಪ್ತವಾಗಿ ಸರಳ ಭಾಷೆಯಲ್ಲಿ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದು ವಿದ್ಯಾರ್ಥಿಗಳಿಗೆ ಉಪಯುಕ್ತ ಸಂಗತಿಯಾಗಿದೆ ಅವರಿಂದ ಇಂತಹ ಹಲವು ಕೃತಿಗಳು ಹೊರಬರಲಿ ಎಂದು ಹಾರೈಸುತ್ತೇನೆ.

 ಸಿದ್ದಲಿಂಗೇಶ್ವರ ಪ್ರಕಾಶನ ಜನಪ್ರಿಯ ಮಾಲಿಕೆ ಅಡಿಯಲ್ಲಿ 2025 ರಲ್ಲಿ ಹೊರಬಂದಿರುವ ಈ ಪುಸ್ತಕದಲ್ಲಿ 80 ಪುಟಗಳಿದ್ದು 45 ಬೆಲೆ ನಿಗದಿಪಡಿಸಲಾಗಿದೆ.

ಡಾ. ಶರಣಬಸಪ್ಪ ವಡ್ಡನಕೇರಿ ಕಲಬುರಗಿ