ರಾಜ್ಯ ಹೋಟೆಲ್ ಸಂಘದ ಆತಿಥ್ಯ ರತ್ನ - ಉದ್ಯಮ ರತ್ನ ಪ್ರಶಸ್ತಿ ಪ್ರದಾನ ಡಿ. 18ರಂದು ಕಲಬುರಗಿಯಲ್ಲಿ

ರಾಜ್ಯ ಹೋಟೆಲ್ ಸಂಘದ ಆತಿಥ್ಯ ರತ್ನ - ಉದ್ಯಮ ರತ್ನ ಪ್ರಶಸ್ತಿ ಪ್ರದಾನ ಡಿ. 18ರಂದು ಕಲಬುರಗಿಯಲ್ಲಿ

ರಾಜ್ಯ ಹೋಟೆಲ್ ಸಂಘದ ಆತಿಥ್ಯ ರತ್ನ - ಉದ್ಯಮ ರತ್ನ ಪ್ರಶಸ್ತಿ ಪ್ರದಾನ ಡಿ. 18ರಂದು ಕಲಬುರಗಿಯಲ್ಲಿ

 ಕಲಬುರಗಿ : ರಾಜ್ಯ ಹೋಟೆಲ್ ಸಂಘವು ವಾರ್ಷಿಕವಾಗಿ ಹಮ್ಮಿಕೊಳ್ಳುವ ಆತಿಥ್ಯ ರತ್ನ ಮತ್ತು ಉದ್ಯಮ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಂಘದ ಮಹಾಸಭೆಯನ್ನು ಡಿ. 18ರಂದು ಕಲಬುರಗಿಯಲ್ಲಿ ಜಿಲ್ಲಾ ಹೋಟೆಲ್ ವಸತಿ ಮತ್ತು ಬೇಕರಿ ಮಾಲೀಕರ ಸಂಘದ ಸಹಯೋಗದೊಂದಿಗೆ ಇದೇ ಮೊಟ್ಟ ಮೊದಲ ಬಾರಿಗೆ ನಡೆಸಲು ಬೆಂಗಳೂರಿನಲ್ಲಿ ನವೆಂಬರ್ 26ರಂದು ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧಿಕೃತವಾಗಿ ಒಪ್ಪಿಗೆ ನೀಡಲಾಗಿದೆ ಎಂದು ರಾಜ್ಯ ಹೋಟೆಲ್ ಸಂಘದ ಉಪಾಧ್ಯಕ್ಷರಾದ ಸತ್ಯನಾಥ ಶೆಟ್ಟಿ ತಿಳಿಸಿದ್ದಾರೆ.

    ಬೆಂಗಳೂರಿನ ಮಲ್ಲೇಶ್ವರಂನ ಹೋಟೆಲ್ ಸಂಘದ ಕೇಂದ್ರ ಕಚೇರಿಯಲ್ಲಿ ನ. 26ರಂದು ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಲಬರಗಿ ಜಿಲ್ಲಾ ಸಮಿತಿ ಪದಾಧಿಕಾರಿಗಳನ್ನು ಆಹ್ವಾನಿಸಿ ಚರ್ಚೆ ನಡೆಸಿದ ನಂತರ ಕಲಬುರಗಿಯಲ್ಲಿ ಕಾರ್ಯಕ್ರಮ ನಡೆಸಲು ಸರ್ವಾನುಮತದಿಂದ ಆಹ್ವಾನ ನೀಡಿ ಪೂರ್ವಭಾವಿ ಸಿದ್ಧತೆಯ ಕುರಿತು ಚರ್ಚೆ ನಡೆಸಲಾಯಿತು.

    ರಾಜ್ಯದ ಸುಮಾರು 300ಕ್ಕೂ ಹೆಚ್ಚು ಹೋಟೆಲ್ ಉದ್ಯಮಿ ಪ್ರತಿನಿಧಿಗಳು ಪಾಲ್ಗೊಳ್ಳುವ ಈ ವಾರ್ಷಿಕ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮಿಗಳ ಕುಟುಂಬ ಹಾಗೂ ಹಿತೈಷಿಗಳು ಸೇರಿದಂತೆ 500ಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ.ರಾಜ್ಯದ ಸಚಿವರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂಜಾನೆ ಮಹಾಸಭೆ, ಸಾಯಂಕಾಲ 3 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸತ್ಯನಾಥ ಶೆಟ್ಟಿ ತಿಳಿಸಿದರು.

       ಬೆಂಗಳೂರಿನ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ನರಸಿಂಹ ಮೆಂಡನ್, ಖಜಾಂಚಿ ಸುನಿಲ್ ಶೆಟ್ಟಿ ರಾಜ್ಯ ಸಮಿತಿ ಸದಸ್ಯರಾದ ಡಾ. ಸದಾನಂದ ಪೆರ್ಲ ಕಾರ್ಯಕ್ರಮದಬಗ್ಗೆ ವಿವರವಾದ ರೂಪುರೆಷೆಗಳನ್ನು ನೀಡಿದರು. ಸದಸ್ಯರಾದ ಅಶೋಕ್ ಶಹಪುರಕರ್ ಜೊತೆಗಿದ್ದರು. ರಾಜ್ಯ ಸಂಘದ ಅಧ್ಯಕ್ಷ ಮಧುಕರ ಎಂ ಶೆಟ್ಟಿ ಗೌರವಾಧ್ಯಕ್ಷರಾದ ಜಿ.ಕೆ ಶೆಟ್ಟಿ, ಉಪಾಧ್ಯಕ್ಷರಾದ ರವಿ ಶಾಸ್ತ್ರಿ , ಜಿ.ಎ ದೀಪಾನಂದ, ಶೇಖರ ನಾಯ್ಡು ಎಚ್ ಎಂ ಉಮೇಶ್ ಶ್ರೀನಿವಾಸ ಶೆಟ್ಟಿ ಖಜಾಂಚಿ ರಾಮಮೂರ್ತಿ, ರವಿಶಾಸ್ತ್ರಿ ಮೈಸೂರು, ರಾಘವೇಂದ್ರ ಮತ್ತಿತra ಪದಾಧಿಕಾರಿಗಳು ಮಾತನಾಡಿ ಸಮಾರಂಭದ ಯಶಸ್ವಿಗೆ ಕೈಗೊಳ್ಳಬೇಕಾದ ತಯಾರಿ ಬಗ್ಗೆ ಪೂರ್ಣ ಮಾಹಿತಿ ನೀಡಿದರು. ನಂತರ ಕಲಬುರಗಿಯ ಪದಾಧಿಕಾರಿಗಳಿಗೆ ಸನ್ಮಾನ ನೆರವೇರಿಸಿ ಗೌರವಿಸಿದರು.