ಸರ್ದಾರ್ ಪಟೇಲರ 151ನೇ ಜಯಂತಿ ಮಾಲಾರ್ಪಣೆ ಮಾಡಿ ಎಂಎಲ್‌ಸಿ ಶಶಿಲ್ ನಮೋಶಿ ಹೇಳಿಕೆ

ಸರ್ದಾರ್ ಪಟೇಲರ 151ನೇ ಜಯಂತಿ ಮಾಲಾರ್ಪಣೆ ಮಾಡಿ ಎಂಎಲ್‌ಸಿ ಶಶಿಲ್ ನಮೋಶಿ ಹೇಳಿಕೆ

ಏಕತೆಯ ಮಹಾಪುರುಷ ಸರ್ದಾರ್ ಪಟೇಲರ ಜಯಂತಿ ಸರಕಾರಿ ಆಚರಣೆಗೆ ಆಗ್ರಹ

ಸರ್ದಾರ್ ಪಟೇಲರ 151ನೇ ಜಯಂತಿ ಮಾಲಾರ್ಪಣೆ ಮಾಡಿ ಎಂಎಲ್‌ಸಿ ಶಶಿಲ್ ನಮೋಶಿ ಹೇಳಿಕೆ

 ಕಲಬುರಗಿ : ರಾಷ್ಟ್ರದ ಸ್ವಾತಂತ್ರ್ಯ ಹೋರಾಟದ ಸರ್ದಾರರಾಗಿ ಗುರುತಿಸಿಕೊಂಡ ಏಕತೆಯ ಮಹಾಪುರುಷ ವಲ್ಲಭಭಾಯಿ ಪಟೇಲರ ಜನ್ಮ ಜಯಂತಿಯನ್ನು ರಾಜ್ಯ ಸರ್ಕಾರದ ಮಟ್ಟದಲ್ಲಿ ಆಚರಿಸಲು ಕೂಡಲೆ ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಶಶಿಲ್ ಜಿ ನಮೋಶಿ ಹೇಳಿದರು.

     ಕಲಬುರಗಿಯ ಪಟೇಲ್ ವೃತ್ತದಲ್ಲಿ ಶನಿವಾರ (ಅ 31ರಂದು ) 151ನೇ ಜಯಂತಿ ಪ್ರಯುಕ್ತ ಸರ್ದಾರ್ ಪಟೇಲರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯದ ಪಿತಾಮಹನಾದರೆ ಪಟೇಲರು ದೇಶದ ಸ್ವಾತಂತ್ರ್ಯದ ಇತಿಹಾಸದಲ್ಲಿ ಏಕತೆ ಮೂಡಿಸಿದ ಮಹಾಪುರುಷರಾಗ ಸರ್ದಾರ್ ಆಗಿ ಗುರುತಿಸಿಕೊಂಡವರು ಕಲ್ಯಾಣ ಕರ್ನಾಟಕ ಸೇರಿದಂತೆ ದೇಶದ 565 ಸಂಸ್ಥಾನಗಳನ್ನು ಒಕ್ಕೂಟದಲ್ಲಿ ವಿಲೀನ ಮಾಡಿ ಅಖಂಡ ಭಾರತವನ್ನು ಕಟ್ಟಲು ಶ್ರಮಿಸಿದ ಮಹಾನ್ ದೇಶಭಕ್ತರಾಗಿದ್ದರು ಇಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ರಾಜ್ಯ ಸರ್ಕಾರ ಮಟ್ಟದಲ್ಲಿ ಆಚರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಹಾಗೂ ಸರಕಾರದ ಗಮನ ಸೆಳೆಯುದಾಗಿ ನಮೋಶಿ ಹೇಳಿದರು.

    ಸರ್ದಾರ್ ಪಟೇಲರು ಕಲ್ಯಾಣ ಕರ್ನಾಟಕ ಭಾಗದ ಕಣ್ಮಣಿಯಾಗಿದ್ದು ನಮ್ಮ ಭಾಗವನ್ನು ನಿಜ ಆಡಳಿತದಿಂದ ಮುಕ್ತಿಗೊಳಿಸಿ ಭಾರತದ ಒಕ್ಕೂಟದಲ್ಲಿ ಸೇರ್ಪಡೆ ಮಾಡಿದ ಉಪ ಪ್ರಧಾನಿ ಹಾಗೂ ಗೃಹ ಸಚಿವರಾಗಿದ್ದ ಸರ್ದಾರ್ ಪಟೇಲರ ತ್ಯಾಗ ಮತ್ತು ಆದರ್ಶ ನಮ್ಮ ಮುಂದಿನ ಪೀಳಿಗೆಗೆ ತಿಳಿಸಲು ಅವರ ಜನ್ಮ ಜಯಂತಿಯನ್ನು ಸರಕಾರಿ ಮಟ್ಟದಲ್ಲಿ ಆಚರಣೆ ಮಾಡುವುದು ಅಗತ್ಯ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಬಸವರಾಜ ದೇಶಮುಖ್ ಹೇಳಿದರು.   

   ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ನೆಹರು ವಲ್ಲಭಾಯಿ ಪಟೇಲರು ಅಂಬೇಡ್ಕರ್ ಮುಂತಾದ ನಾಯಕರು ಮುಂಚೂಣಿಯಲ್ಲಿ ನಿಂತರು ಪಟೇಲರು ಮಾತ್ರ ದೇಶದಲ್ಲಿ ಹರಿದು ಹಂಚಿಹೋಗಿದ್ದ ಸಂಸ್ಥಾನಗಳ ರಾಜರ ಮನವೊಲಿಸಿ ಹಾಗೂ ಅಪರೇಷನ್ ಪೋಲೋದಂಥ ಮಿಲಿಟರಿ ಕಾರ್ಯಾಚರಣೆ ಮಾಡಿ ಸಮಗ್ರ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾಪುರುಷರಾಗಿದ್ದಾರೆ ಅವರ ಜಯಂತಿಯನ್ನು ರಾಜ್ಯ ಸರಕಾರಿ ಮಟ್ಟದಲ್ಲಿ ಆಚರಣೆ ಮಾಡುವಂತೆ ಮತ್ತು ಪಟೇಲ್ ವೃತ್ತದ ನವೀಕರಣಕ್ಕೆ ಸರಕಾರ ಕೂಡಲೇ ಮುಂದಾಗಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ, ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು.

  ಕಾರ್ಯಕ್ರಮದಲ್ಲಿ ಕೈಲಾಸನಾಥ್ ದೀಕ್ಷಿತ್ ಡಾ. ಸದಾನಂದ ಪೆರ್ಲ, ಮನೀಶ್ ಜಾಜು ಸಾಮುವೆಲ್ ಸಂಧ್ಯಾರಾಜ್, ಎಂ ಎಸ್ ಮುಕ್ಕ ಪ್ರೊ ಅಣ್ಣಾರಾವ್ ದುತ್ತರಗಾoವ, ಪ್ರೊ.ಬಿ. ಎಸ್ ಗುಳಶೆಟ್ಟಿ, ಉದಯಕುಮಾರ ಜೇವರ್ಗಿ, ಗೌತಮ್ ಕಾಂಬಳೆ, ಮಲ್ಲಿಕಾರ್ಜುನ ಭೂಸನೂರ, ಶಿವಶರಣಪ್ಪ ರಾಜೆ, ಡಾ.ಗಾಂಧೀಜಿ ಮೊಳಕೇರಾ, ನಿಂಗಪ್ಪ ದುಕಾನ್, ಕಾರ್ಯಕ್ರಮದಲ್ಲಿ ರವೂಫ್ ಖಾದ್ರಿ ಧನ್ಯವಾದವಿತ್ತರು.ಜಯಂತಿ ಪ್ರಯುಕ್ತ ಬಸವರಾಜ್ ದೇಶಮುಖ್ ಸರ್ದಾರ ಪಟೇಲರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ನೆರವೇರಿಸಿದರು.