ನೆಹರುಗಂಜ್ ಹನುಮಾನ್ ದೇವಸ್ಥಾನದಲ್ಲಿ ಬೆಳ್ಳಿ ಕವಚ ಧಾರಣೆ
ನೆಹರುಗಂಜ್ ಹನುಮಾನ್ ದೇವಸ್ಥಾನದಲ್ಲಿ ಬೆಳ್ಳಿ ಕವಚ ಧಾರಣೆ
ಕಲಬುರಗಿ: ನಗರದ ನೆಹರುಗಂಜ್ನ ಶ್ರೀ ಹನುಮಾನ್ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಹನುಮಾನ್ ದೇವರಿಗೆ ಬೆಳ್ಳಿ ಕವಚ ಧಾರಣೆ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.
ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರ ದಿವ್ಯ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೊಡ್ಡಪ್ಪ ಅಪ್ಪ ಅವರ ಅಮೃತಹಸ್ತದಿಂದ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಭಕ್ತರು ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು.
ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ಗುಲಬರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಷನ್, ಕೃಷಿ ಪರಿಕರ ಮಾರಾಟಗಾರರ ಸಂಘ, ಅಕ್ಕಿ ವ್ಯಾಪಾರಿಗಳ ಸಂಘ, ಮುನೀಮರ ಸಂಘ ಹಾಗೂ ಹಮಾಲರ ಸಂಘಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶರಣಬಸವೇಶ್ವರ ವಿಶ್ವವಿದ್ಯಾಲಯದ ಕಾರ್ಯದರ್ಶಿ ಬಸವರಾಜ ದೇಶಮುಖ್, ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಂತೋಷ್ ಜಿ. ಲಂಗರ್, ದಾಲ್ ಮಿಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಕಬಾಳ, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಬಸವರಾಜ ಮಂಗಲಗಿ, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶರಣು ಪಪ್ಪಾ, ನೀಲಕಂಠರಾವ್ ಮೂಲಗೆ,
ಶಿವರಾಜ್ ನಿಗುಡಗಿ, ರೇವಣಸಿದ್ದಪ್ಪ ಹೊಸಗೌಡ, ಶ್ರೀಮಂತರಾವ ಉದನೂರ, ಸಾತಪ್ಪ ಪಟ್ಟಣಕರ್, ಶಿವಕುಮಾರ ಗಂಟಿ, ಭೀಮಶ ಜೀವಣಗಿ, ಸಿದ್ದಣ್ಣ, ರಾಜು ಭೀಮಳ್ಳಿ, ಯುವರಾಜ್ ಚಿಂಚೋಳಿ, ಡಾ. ಮಂಜುನಾಥ್ ಅಣಕಲ್, ರಾಜಶೇಖರ್ ಇಟ್ಗಂಪಳಿ, ಮಲ್ಲಿಕಾರ್ಜುನ ಮೋದಿ, ಸುನಿಲ್ ಸರಡಗಿ, ವಿಶ್ವನಾಥ್ ಗೋದಿ ಮತ್ತು ವಿಷ್ಣುದಾದಾ ಸ್ಥಾಪಡೆ, ಶರಣಬಸಪ್ಪ ಬಾಳಿ ತಾವರಗೇರಾ, ಬಸವರಾಜ ಎಚ್. ತಡಕಲ್, ವಿನೋದ ಕುಮಾರ ಬಸವರಾಜ ನಿಂಗದೆ, ಚಂದ್ರಕಾಂತ ಕಲ್ಯಾಣಪ್ಪಾ ನಂದಿಕೂರ, ಅಶೋಕ ಶಿವಶರಣಪ್ಪಾ ಪಾಟೀಲ, ಸಿದ್ದಲಿಂಗ ಬೀರಪ್ಪಾ ಕುಪ್ಪಿ, ರವೀಂದ್ರ ಕೆ. ಸುಲೇಪೇಟ ಹೆಬ್ಬಾಳ, ಮಲ್ಲಿಕಾರ್ಜುನ ಎಸ್. ಹೊಸಗೌಡ, ವಿಜಯಕುಮಾರ ಬಸವರಾಜ ಬಿರಾದಾರ, ಸಂಗನಬಸಪ್ಪಾ ಎಚ್. ಹಿರೇಗೌಡ, ಸಂಜೀವಕುಮಾರ ಎಮ್. ಮುಗಳಿ, ಮಹೇಶ್ ಗೌಡ ಸುಭಾಷ್ ಚಂದ್ರ ಗೌಡ ಪಾಟೀಲ್ ಕೂಡಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವ್ಯಾಪಾರಿಗಳು, ಕಾರ್ಮಿಕರು ಹಾಗೂ ಹನುಮಾನ್ ಭಕ್ತರು ಭಾಗವಹಿಸಿದ್ದರು.

