ಎಚ್.ಕೆ.ಇ. ಸಂಸ್ಥೆಯ ಸದಸ್ಯತ್ವ ಪ್ರಕ್ರಿಯೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ

ಎಚ್.ಕೆ.ಇ. ಸಂಸ್ಥೆಯ ಸದಸ್ಯತ್ವ ಪ್ರಕ್ರಿಯೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ

ಎಚ್.ಕೆ.ಇ. ಸಂಸ್ಥೆಯ ಸದಸ್ಯತ್ವ ಪ್ರಕ್ರಿಯೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ

ಸರದಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಅರ್ಜಿ ಸಲ್ಲಿಸುತ್ತಿರುವ ನಾಗರಿಕರು – ಗೊಂದಲ ಸೃಷ್ಟಿಸುವವರ ಮಾತಿಗೆ ಕಿವಿಗೊಡದಿರಲು ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಹೊಸ ಸದಸ್ಯತ್ವ ಪ್ರಕ್ರಿಯೆಯು ನವೆಂಬರ್ 23ರಿಂದ ಆರಂಭವಾಗಿದ್ದು, ಡಿಸೆಂಬರ್ 7 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಸದಸ್ಯತ್ವ ಪ್ರಕ್ರಿಯೆ ಆರಂಭವಾದ ದಿನದಿಂದಲೂ ಪ್ರತಿದಿನ ಸಾವಿರಾರು ನಾಗರಿಕರು ಸಂಸ್ಥೆಯ ಮುಖ್ಯ ಕಚೇರಿಗೆ ಆಗಮಿಸಿ, ಉತ್ಸಾಹದಿಂದ ಸರದಿ ಸಾಲಿನಲ್ಲಿ ನಿಂತು ಯಾವುದೇ ಗೊಂದಲಗಳಿಲ್ಲದೆ ಸದಸ್ಯತ್ವದ ಅರ್ಜಿಗಳನ್ನು ಪಡೆದು ಸಲ್ಲಿಸುತ್ತಿದ್ದಾರೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಂಸ್ಥೆಯು ಅಗತ್ಯ ಮಾಹಿತಿ ಫಲಕಗಳು ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಿದೆ. ಅರ್ಜಿಗಳನ್ನು ವಿತರಿಸುತ್ತಿರುವ ಸಿಬ್ಬಂದಿಯೂ ನಾಗರಿಕರಿಗೆ ಅಗತ್ಯ ಮಾಹಿತಿ ನೀಡುತ್ತಾ ಸೌಜನ್ಯಯುತವಾಗಿ ಸಹಕರಿಸುತ್ತಿದ್ದಾರೆ. ಸಂಸ್ಥೆಯ ವ್ಯವಸ್ಥೆ, ಸೌಲಭ್ಯಗಳು ಹಾಗೂ ಸದಸ್ಯತ್ವ ಪ್ರಕ್ರಿಯೆಯ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಆದರೆ, ಕೆಲವರು ಸದಸ್ಯತ್ವದ ಅರ್ಜಿಗಳನ್ನು ಪಡೆದುಕೊಂಡ ನಂತರವೂ ಕಿಡಿಗೇಡಿತನದ ವರ್ತನೆ ತೋರುತ್ತಾ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ, ಸರದಿ ಸಾಲಿನಲ್ಲಿ ನಿಂತು ಸದಸ್ಯತ್ವ ಪಡೆಯಲು ಆಗಮಿಸಿರುವ ನಾಗರಿಕರ ಮುಂದೆ ಸಂಸ್ಥೆಯ ಆಡಳಿತ ಮಂಡಳಿಯ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ

ಪ್ರತಿಯೊಬ್ಬ ನಾಗರಿಕರಿಗೂ ಅರ್ಜಿ ದೊರೆಯಬೇಕು ಹಾಗೂ ಸದಸ್ಯತ್ವ ಪ್ರಕ್ರಿಯೆ ಸುಗಮವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಸಂಸ್ಥೆಯ ಸಿಬ್ಬಂದಿ ಅಗತ್ಯ ಮಾಹಿತಿ ನೀಡುತ್ತಾ ಅತ್ಯಂತ ಸೌಜನ್ಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸಿಬ್ಬಂದಿಯೊಂದಿಗೆ ಸಾರ್ವಜನಿಕರನ್ನು ಎತ್ತಿಕಟ್ಟುವುದು, ಅವರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಮತ್ತು ವಿನಾಕಾರಣ ತೊಂದರೆ ನೀಡುವುದು ಸರಿಯಾದ ಕ್ರಮವಲ್ಲ.

ಆದ್ದರಿಂದ ಸಾರ್ವಜನಿಕರು ಇಂತಹ ಕಿಡಿಗೇಡಿಗಳ ಗೊಂದಲದ ಹಾಗೂ ಪ್ರಚೋದನಕಾರಿ ಹೇಳಿಕೆಗಳಿಗೆ ಯಾವುದೇ ಮಹತ್ವ ನೀಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮಾಹಿತಿಗಳನ್ನು ಪರಿಶೀಲಿಸದೆ ನಂಬಬಾರದು.ಈಗಾಗಲೇ ಸದಸ್ಯತ್ವ ಅರ್ಜಿ ಪಡೆದ ನಾಗರಿಕರು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು ಎಂದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಧ್ಯಮ ವಿಭಾಗವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.