ಬೀದರನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ "ಏಕೀಕರಣ ಚಳವಳಿ ಮತ್ತು ಕನ್ನಡದ ಅಸ್ಮಿತೆ ಕುರಿತು" ವಿಶೇಷ ಉಪನ್ಯಾಸ ಕಾರ್ಯಕ್ರಮ:

ಬೀದರನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ "ಏಕೀಕರಣ ಚಳವಳಿ ಮತ್ತು ಕನ್ನಡದ ಅಸ್ಮಿತೆ ಕುರಿತು" ವಿಶೇಷ ಉಪನ್ಯಾಸ ಕಾರ್ಯಕ್ರಮ:

ಬೀದರನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ "ಏಕೀಕರಣ ಚಳವಳಿ ಮತ್ತು ಕನ್ನಡದ ಅಸ್ಮಿತೆ ಕುರಿತು" ವಿಶೇಷ ಉಪನ್ಯಾಸ ಕಾರ್ಯಕ್ರಮ:

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೀದರ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಏಕೀಕರಣ ಚಳುವಳಿ ಮತ್ತು ಕನ್ನಡದ ಅಸ್ಮಿತೆ ಕುರಿತು" ವಿಶೇಷ ಉಪನ್ಯಾಸ ಕಾರ್ಯಕ್ರಮ ಅತ್ಯಂತ ವೈಭವ ಹಾಗೂ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮವನ್ನು ಹಿರಿಯ ಸಾಹಿತಿಗಳಾದ ಸಾಧನ ರಂಜೋಳಕರ್ ಅವರು ಉದ್ಘಾಟಿಸಿ ಮಾತನಾಡಿ, ಜಾಗತಿಕ ಮತ್ತು ಡಿಜಿಟಲ್ ಕಾಲದಲ್ಲಿ ಕನ್ನಡ ಬೆಳವಣಿಗೆಯನ್ನು ಕಂಡು ಖುಷಿಯಾಗುತ್ತಿದೆ. ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು, ವಾಟ್ಸಾಪ್‌ನಲ್ಲೂ ಕನ್ನಡದ ಬಳಕೆ ಮಾಡುತ್ತಿದ್ದಾರೆ. ತಂತ್ರಜ್ಞಾನದಲ್ಲಿ ಕನ್ನಡದ ಬಳಕೆ ವ್ಯಾಪಕವಾಗಿ ಹೆಚ್ಚುತ್ತಿದೆ. ಗೂಗಲ್, ಮೆಟಾ ಮತ್ತು ಮೈಕ್ರೋಸಾಫ್ಟ್‌ ಅಂತಹ ಜಾಗತಿಕ ಸಂಸ್ಥೆಗಳು ಕನ್ನಡ ಭಾಷೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿವೆ. ನೌಕರಿಯಲ್ಲಿ ಕನ್ನಡದವರಿಗೆ ಅಧ್ಯತೆ ಕೊಡಬೇಕು ಎಂದು ಹೇಳಿದರು.

ಆಶಯನುಡಿನ್ನು ನುಡಿದ ಹಿರಿಯ ಸಾಹಿತಿಗಳಾದ ರಮೇಶ ಬಿರಾದಾರ ಅವರು ಮಾತನಾಡುತ್ತಾ, ಆಲೂರು ವೆಂಕಟರಾಯರು ಅವರನ್ನು "ಕರ್ನಾಟಕ ಕುಲಪುರೋಹಿತ" ಎಂದು ಕರೆಯಲಾಗುತ್ತದೆ. ಅವರು ೧೯೧೭ರಲ್ಲಿ ಬರೆದ 'ಕರ್ನಾಟಕ ಗತವೈಭವ' ಎಂಬ ಗ್ರಂಥವು ವಿಭಜನೆಯಾಗಿದ್ದ ಕನ್ನಡಿಗರಲ್ಲಿ ತಮ್ಮ ಹಳೆಯ ಸಾಮ್ರಾಜ್ಯಗಳ ವಿಜಯನಗರ, ಚಾಲುಕ್ಯ ಹಿರಿಮೆಯನ್ನು ನೆನಪಿಸಿ, ಒಂದಾಗುವಂತೆ ಪ್ರೇರೇಪಿತ್ತವೆ. ಹುಯಿಲಗೋಳ ನಾರಾಯಣರಾಯರು ಅವರು ಬರೆದ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಎಂಬ ಗೀತೆ ಏಕೀಕರಣ ಚಳವಳಿಯ ಅಧಿಕೃತ ಗೀತೆಯಾಗಿ ಲಕ್ಷಾಂತರ ಹೋರಾಟಗಾರರಲ್ಲಿ ಸ್ಫೂರ್ತಿ ತುಂಬಿತು ಎಂದು ನುಡಿದರು.

ವಿಶೇಷ ಉಪನ್ಯಾಸಕರಾಗಿ ಬಿ ವಿ ಭೂಮರಡ್ಡಿ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಬೀದರನ ಇತಿಹಾಸ ವಿಭಾಗದ ಮುಖಸ್ಥರಾ ಡಾ ಶಿವಲೀಲಾ ವಿರಯ್ಯ ಅವರು ಮಾತನಾಡುತ್ತಾ,

ಡಾ. ಸಿದ್ದಲಿಂಗಯ್ಯ ಕನ್ನಡದ ಪ್ರಮುಖ ದಲಿತ ಕವಿ ಮತ್ತು ಹೋರಾಟಗಾರು ಅವರ 'ಹೊಲೆ ಮಾದಿಗರ ಹಾಡು' ಮತ್ತು 'ಸಾವಿರಾರು ನದಿಗಳು' ಕವನ ಸಂಕಲನಗಳ ಹಾಡುಗಳು ಇಂದಿಗೂ ಸಾಮಾಜಿಕ ಹೋರಾಟಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ.

ಚೆನ್ನಣ್ಣ ವಾಲೀಕಾರ ಅವರು ಬಡತನ, ಹಸಿವು ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಸಾಹಿತ್ಯಿಕ ಹೋರಾಟ ನಡೆಸಿದ ಪ್ರಮುಖ ಬಂಡಾಯ ಕವಿ. ಸತೀಶ ಕುಲಕರ್ಣಿ ಸಮಾಜವಾದಿ ಸೈದ್ಧಾಂತಿಕ ಹಿನ್ನೆಲೆಯುಳ್ಳ ಅವರು ಬರೆದ 'ಕಟ್ಟುತೇವ ಕಾವ್ಯ' ಎಂಬ ಹೋರಾಟದ ಗೀತೆ ಕನ್ನಡ ನಾಡಿನಲ್ಲಿ ಅತ್ಯಂತ ಜನಪ್ರಿಯವಾಗಿದೆ. ಚಂದ್ರಶೇಖರ ಪಾಟೀಲ ತುರ್ತು ಪರಿಸ್ಥಿತಿಯ ವಿರುದ್ಧ ಮತ್ತು ಕನ್ನಡ ನಾಡು-ನುಡಿಯ ಹಿತರಕ್ಷಣೆಗಾಗಿ ನಿರಂತರವಾಗಿ ಕಾವ್ಯದ ಮೂಲಕ ಹೋರಾಡಿದ ಪ್ರಮುಖರು. ಬರಗೂರು ರಾಮಚಂದ್ರಪ್ಪ ಅವರು ಬಂಡಾಯ ಸಾಹಿತ್ಯ ಚಳವಳಿಯ ಮುಂಚೂಣಿ ನಾಯಕರಾಗಿದ್ದು, ತಮ್ಮ ಪ್ರಖರ ವೈಚಾರಿಕ ಬರಹಗಳು ಮತ್ತು ಕವಿತೆಗಳ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸಿದವರು ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶ್ರೀ ವಿಜಯಕುಮಾರ ತೋರಣೆಕರ್ ಅವರು ಮಾತನಾಡಿ, "ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಇಂತಹ ಉಪನ್ಯಾಸಗಳು ಪ್ರೇರಣಾದಾಯಿಯಾಗಿವೆ" ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಗದೇವಿ ಸಿ ದುಬಲಗುಂಡಿ ಅವರು ಮಾತನಾಡಿ,

ಡಾ. ಜಯದೇವಿತಾಯಿ ಲಿಗಾಡೆ ಅವರು ಕನ್ನಡ ಸಾಹಿತ್ಯ ಲೋಕದ ಪ್ರಮುಖ ಕವಿ, ಸಾಮಾಜಿಕ ಕಾರ್ಯಕರ್ತೆ ಮತ್ತು ಕರ್ನಾಟಕ ಏಕೀಕರಣ ಹೋರಾಟದ ಪ್ರಮುಖ ನಾಯಕಿಯಾಗಿದ್ದಾರೆ. ಸೊಲ್ಲಾಪುರವನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಲು ಅವರು ನಡೆಸಿದ ಧೀರ ಹೋರಾಟಕ್ಕಾಗಿ ಅವರನ್ನು "ಗಡಿನಾಡಿನ ಸಿಂಹಿಣಿ" ಎಂದೇ ಕರೆಯಲಾಗುತ್ತದೆ ಎಂದು ನುಡಿದರು.

ಕನ್ನಡ ಉಪನ್ಯಾಸಕರಾದ ಮಯೂರ ಬಸವರಾಜ ಅವರು ಮಾತನಾಡುತ್ತಾ, ಪ್ರಭುರಾವ್ ಕಂಬಳಿವಾಲೆ ಅವರು ಕಲ್ಯಾಣ ಕರ್ನಾಟಕ ಭಾಗವನ್ನು ಭಾರತ ಒಕ್ಕೂಟಕ್ಕೆ ಮತ್ತು ಕರ್ನಾಟಕ ಏಕೀಕರಣಕ್ಕೆ ಸೇರಿಸಲು ಹೋರಾಡಿದ ಮುಂಚೂಣಿಯ ನಾಯಕರಾಗಿದ್ದಾರೆ ಎಂದು ನುಡಿದರು.

 ಉಪಸ್ಥಿತರಾಗಿ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕರಾದ ಡಾ. ಮಕ್ತುಂಬಿ ಎಂ. ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.