ಹಿರಿಯ ಆರೋಗ್ಯ ಶಿಕ್ಷಕಿ ತಾರಾ ಸೇವಾ ನಿವೃತ್ತಿ ಬೀಳ್ಕೊಡುಗೆ
ಹಿರಿಯ ಆರೋಗ್ಯ ಶಿಕ್ಷಕಿ ತಾರಾ ಸೇವಾ ನಿವೃತ್ತಿ ಬೀಳ್ಕೊಡುಗೆ
ಕಲಬುರಗಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಆರೋಗ್ಯ ಶಿಕ್ಷಕಿಯಾಗಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ತಾರಾ ಡಿ. ಅವರು ಶನಿವಾರ (ಅ. 31ರಂದು ) ಸೇವಾ ನಿವೃತ್ತಿ ಹೊಂದಿದ್ದಾರೆ.
ಕಲಬುರಗಿ ನಗರದ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದ ತಾರಾ ಡಿ. ಅವರು 30 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸೇವಾವಧಿಯಲ್ಲಿ ಅಳಂದ ತಾಲೂಕಿನ ಅಂಬಲಗಾ, ಜಿಮ್ಸ್ ಆಸ್ಪತ್ರೆ, ದೇವಲಗಾಣಗಾಪುರ ಹಾಗೂ ಕಲಬುರಗಿ l ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ಶಿಕ್ಷಕಿಯಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಮೂಲತಃ ಬೀದರ್ ಜಿಲ್ಲೆಯ ಚಿದ್ರಿ ಗ್ರಾಮದವರು. ಇವರ ಪತಿ ಕಾಶಿನಾಥ್ ಗಂಗಾಣೆ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು.
ಸೇವಾ ನಿವೃತ್ತಿ ಹೊಂದಿದ ತಾರಾ ಡಿ. ಅವರನ್ನು
ಕಡೇಚೂರ್ ಗ್ರೂಪ್ ಆಫ್ ಹೋಟೆಲ್ಸ್ ವತಿಯಿಂದ ಉದ್ಯಮಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದರು. ಆರೋಗ್ಯ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಇವರ ಕರ್ತವ್ಯ ನಿರ್ವಹಣೆಯ ಕ್ರಮ ಇತರರಿಗೆ ಮಾದರಿಯಾಗಲಿ. ನಿವೃತ್ತ ಜೀವನ ಸುಖಮಯವಾಗಲಿ ಎಂದು ಹಿರಿಯ ಉದ್ಯಮಿ, ಮಹಾದೇವ ಗುತ್ತೇದಾರ್ ಹೇಳಿದರು. ನಿವೃತ್ತಿ ಸಂದರ್ಭದಲ್ಲಿ ಹಿರಿಯರ ಸಮ್ಮುಖದಲ್ಲಿ ಅಭಿನಂದಿಸಿ ಗೌರವಿಸಿದ್ದಕ್ಕಾಗಿ ಕೃತಜ್ಞಳಾಗಿದ್ದೇನೆ ಎಂದು ತಾರಾ ಡಿ. ಹೇಳಿದರು. ಉದ್ಯಮಿ ವೆಂಕಟೇಶ ಕಡೇಚೂರ್ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಡಾ. ಸದಾನಂದ ಪೆರ್ಲ, ಶರಣಯ್ಯ ಗುತ್ತೇದಾರ್, ಮಲ್ಲು ಜೀವಣಗಿ, ಸಂತೋಷ್ ಚೌಧರಿ, ರಮಣ ರೆಡ್ಡಿ, ಶಿವಪುತ್ರಪ್ಪ ಸುತಾರ್ , ಅನಿಲ್ ಯರಗೋಳ ಮತ್ತಿತರರು ಉಪಸ್ಥಿತರಿದ್ದರು.

