ರೈತರ ಬೆಳೆಗಳ ರಕ್ಷಣೆಗೆ ಜಲಾಶಯಗಳ ನೀರು ಹರಿಸಿ : ಗೌತಮ್ ಪಾಟೀಲ್ ಆಗ್ರಹ
ರೈತರ ಬೆಳೆಗಳ ರಕ್ಷಣೆಗೆ ಜಲಾಶಯಗಳ ನೀರು ಹರಿಸಿ : ಗೌತಮ್ ಪಾಟೀಲ್ ಆಗ್ರಹ ಚಿಂಚೋಳಿ : ಮಳೆಯ ಕೊರತೆಯಿಂದಾಗಿ ತಾಲೂಕಿನ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೃಷಿ ರೈತರ ಬೆಳೆಗಳ ರಕ್ಷಣೆಗೆ ತಾಲೂಕಿನ ಎರಡು ಜಲಾಶಯದ ನೀರನ್ನು ರೈತರ ಕೃಷಿ ಬೆಳೆಗಳ ಜಮೀನುಗಳಿಗೆ ಜಿಲ್ಲಾಡಳಿತ ತಕ್ಷಣ ನೀರು ಹರಿಸುವಂತೆ ತಾಲೂಕಿನ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮಾಜಿ ಜಿ.ಪಂ. ಸದಸ್ಯರು ಹಾಗೂ ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಗೌತಮ್ ವೈಜಿನಾಥ ಪಾಟೀಲ ಅವರು ಆಗ್ರಹಿಸಿದ್ದಾರೆ. ಮಳೆಯ ಕೊರತೆಯ ಹಿನ್ನಲೆಯಲ್ಲಿ ಕೃಷಿ ಬೆಳೆಗಳು ನೆಲ ಕಚ್ಚಿ ಹೋಗಿದ್ದರಿಂದ ರೈತರು ಸಂಕಷ್ಟಕ್ಕೆ ಇಡಾಗಿದ್ದಾರೆ. ಅಲ್ಪ ಸ್ವಲ್ಪ ಇದ್ದ ಬೆಳೆಗಳು ರೈತರಿಗೆ ಉಳಿಯಬೇಕಾದರೆ ಚಂದ್ರಂಪಳ್ಳಿ ಮತ್ತು ನಾಗರಾಳ ಜಲಾಶಯ ಮತ್ತು ಸಣ್ಣ ನೀರಾವರಿ ಜಲಾಶಯದ ನೀರು ರೈತರ ಹೋಲಗಳಿಗೆ ಹರಿಸಿದರೆ ಮಾತ್ರ ವಾಣಿಜ್ಯ ಮತ್ತು ನೀರಾವರಿ ಬೆಳೆಗಳ ಫಸಲು ಕೈಗೆ ಸೇರುತ್ತವೆ. ತೊಗರಿ, ಕಬ್ಬು, ಅರಸಿಣ ಬಾಳೆ ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳಿಗೆ ನೀರು ಅವಶ್ಯಕ ಬೇಕಾಗಿದೆ. ಹೀಗಾಗಿ ಸರಕಾರ ರೈತರ ಬೆಳೆಗಳ ರಕ್ಷಣೆಗೆ ಜಲಾಶಯಗಳ ನೀರು ಬಿಡುಗಡೆಗೆ ಕ್ರಮವಹಿಸಬೇಕು. ರೈತರ ಪಂಪಸೆಟಗಳಿಗೆ ದಿನದ 8 ಗಂಟೆಗಳ ನೀರಂತರ ತ್ರಿಫೇಸ್ ವಿದ್ಯುತ್ ಪೂರೈಸಬೇಕು. ಪ್ರತಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಬೇಕು. ಜಾನುವಾರುಗಳಿಗೆ ಸಮರ್ಪಕ ಮೇವು ಪೂರೈಸಬೇಕು. ಬೆಳಗಳು ನಾಶವಾಗುವ ಮುನ್ನ ಸರಕಾರ ಎಚ್ಚೆತುಕೊಂಡು ರೈತರ ಬೆಳೆಗಳಿಗೆ ಅನುಕೂಲವಾಗುವಂತೆ ಜಲಾಶಯಗಳ ನೀರು ಹರಿಸಬೇಕು. ಸರಕಾರ ಕಡೆಗಣಿಸಿದೇಯಾದಲ್ಲಿ ಉಗ್ರ ಹೋರಾಟವನ್ನು ಸಮಿತಿ ರೂಪಿಸಲಿದೆ ಎಂದು ಗೌತಮ್ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

