ದತ್ತಿ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ

ದತ್ತಿ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ

ದತ್ತಿ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ

ಕಲಬುರಗಿ : ಮಾತೋಶ್ರೀ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಗ್ರಾಮೀಣಭಿವೃದ್ಧಿ ಸಂಸ್ಥೆ ಡೊಂಗರಗಾಂವ, ಜಿಲ್ಲೆ ಕಲಬುರಗಿ ವತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಲೇಖಕರ ಪುಸ್ತಕಗಳಿಗೆ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಸಕ್ತ ವರ್ಷದಿಂದ ಈ ದತ್ತಿ ಪ್ರಶಸ್ತಿಗಳನ್ನು 

 ನೀಡಲಾಗುತ್ತಿದೆ. ಪ್ರಥಮ ವರ್ಷವಾದ 2025ನೆಯ ಹಾಗೂ 2026ನೆಯ ಸಾಲಿನಲ್ಲಿ ಪ್ರಥಮ ಮುದ್ರಣವಾದ ಕವನ ಸಂಕಲನ, ಕಥಾ ಸಂಕಲನ, ಮಹಿಳಾ ಸಾಹಿತ್ಯ, ಶರಣ ಸಾಹಿತ್ಯ, ಯುವ ಸಾಹಿತ್ಯ(ಯುವಕ/ಯುವತಿಯರ ಯಾವುದೇ ಪ್ರಕಾರದ ಸಾಹಿತ್ಯ) ಹಾಗೂ ಸಂಶೋಧನಾ (ಪಿ. ಎಚ್. ಡಿ. ಮಹಾಪ್ರಬಂಧ ) ಸಾಹಿತ್ಯ ಕೃತಿಗಳನ್ನು ಅಹ್ವಾನಿಸಲಾಗಿದೆ.

ಲೇಖಕರು ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬೀದರ್‌ ಜಿಲ್ಲೆಗಳ ನಾಗರಿಕರಾಗಿರಬೇಕು. 

ಪ್ರಶಸ್ತಿಯು ನೆನಪಿನ ಕಾಣಿಕೆ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. 2025 ಮತ್ತು 2026ರಲ್ಲಿ ಪ್ರಕಟವಾದ ಮೇಲೆ ಸೂಚಿಸಿದ ಪ್ರಕಾರದ ಎರಡು ಪುಸ್ತಕಗಳನ್ನು 15 ನವೆಂಬರ್ 2026ರ ರೊಳಗಾಗಿ 

 ಡಾ. ಶರಣಬಸಪ್ಪ ವಡ್ಡನಕೇರಿ,ಪ್ಲಾಟ್ ಸಂಖ್ಯೆ 48 ಮಾತೋಶ್ರೀ ನಿಲಯ, ಲಂಗರ ಹನುಮಾನ ಕಾಲೋನಿ, ನಿಜಾಂಪುರ ಕಲಬುರಗಿ. 585104 ವಿಳಾಸಕ್ಕೆ ಖುದ್ದಾಗಿ ಇಲ್ಲವೆ ಅಂಚೆ ಮೂಲಕ ಕಳಿಸಿಕೊಡಲು ಸಂಚಾಲಕರಾದ ಡಾ. ನಾಗಪ್ಪ ಗೋಗಿ ಕೋರಿದ್ದಾರೆ.

ಈ ಪ್ರಶಸ್ತಿಯ ನೀಡಿಕೆಯಲ್ಲಿ ನಿರ್ಣಾಯಕರ ನಿರ್ಣಯವೇ ಅಂತಿಮ. ಈ ಕುರಿತು ಪತ್ರ ವ್ಯವಹಾರ ಇಲ್ಲವೇ ವಿಚಾರಣೆಗೆ ಅವಕಾಶವಿಲ್ಲ. ಪ್ರಶಸ್ತಿಗೆ ಬಂದ ಪುಸ್ತಕಗಳನ್ನು ಹಿಂದುರಿಗಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಡಾ.ಶರಣಬಸಪ್ಪ ವಡ್ಡನಕೇರಿ 9741169055 ಹಾಗೂ ಸಂಚಾಲಕರಾದ ಡಾ. ನಾಗಪ್ಪ ಗೋಗಿ 9686153485 ಅವರನ್ನು ಸಂಪರ್ಕಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.