ಪಟ್ಟಣ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಎಸ್ಸಿ ಮೀಸಲಾತಿಗೆ ಒಳಪಡಿಸಲು ನಾಗರಾಜ ಗುಂಡಗುರ್ತಿ ಆಗ್ರಹ
ಪಟ್ಟಣ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಎಸ್ಸಿ ಮೀಸಲಾತಿಗೆ ಒಳಪಡಿಸಲು ನಾಗರಾಜ ಗುಂಡಗುರ್ತಿ ಆಗ್ರಹ
ಕಲಬುರಗಿ: ದಕ್ಷಿಣ ಮತಕ್ಷೇತ್ರದ ಪಟ್ಟಣ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಪರಿಶಿಷ್ಟ ಜಾತಿ (ಎಸ್ಸಿ) ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ, ಮೀಸಲಾತಿ ರೋಸ್ಟರ್ನಲ್ಲಿನ ಪಾರದರ್ಶಕತೆ ಹಾಗೂ ನ್ಯಾಯಸಮ್ಮತ ಹಂಚಿಕೆಯನ್ನು ಖಚಿತಪಡಿಸಬೇಕೆಂದು ಕಾಂಗ್ರೆಸ್ ಮುಖಂಡ ನಾಗರಾಜ ಗುಂಡಗುರ್ತಿ ಆಗ್ರಹಿಸಿದ್ದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಪಟ್ಟಣ ಗ್ರಾಮವು ಜಿಪಂ, ತಾಪಂ ಕ್ಷೇತ್ರವನ್ನು 35 ವರ್ಷಗಳಿಂದ ಇಲ್ಲಿಯವರೆಗೆ ಎಸ್ಸಿ ಕ್ಷೇತ್ರ ಮೀಸಲಾತಿ ಪ್ರಕಟಿಸಿಲ್ಲ. ಪಟ್ಟಣ ಪಂಚಾಯತಿ ಮೀಸಲು ಕ್ಷೇತ್ರದ ಅನುಸೂಚಿತ ಜಾತಿ ಎಂದು ಪ್ರಕಟವಾಗಿದ್ದು, ಆದರೆ ಎರಡನೇ ದಿನಗಳಲ್ಲಿ ಆ ಕ್ಷೇತ್ರವು ಸಾಮಾನ್ಯ ಕ್ಷೇತ್ರವೆಂದು ಪ್ರಕಟಿಸಲಾಗಿದೆ.ಈ ಬಗ್ಗೆ ಅನುಸೂಚಿತ ಜಾತಿ ಮೀಸಲು ಕ್ಷೇತ್ರವಾಗಿ ಮಾಡಬೇಕು.ಇದನ್ನು ಗಂಭೀರವಾಗಿ ಪರಿಗಣಿಸಿ ನಿಯಮನುಸಾರವಾಗಿ ಪಟ್ಟಣ ಜಿಪಂ ಎಸ್ಸಿ ಮೀಸಲಾತಿ ಘೋಷಣೆ ಮಾಡಿ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಜಿಪಂ ಮೀಸಲಾತಿ ಬಗ್ಗೆ ಆಕ್ಷೇಪಿಸಲು ಇನ್ನು ಹತ್ತು ದಿನ ಕಾಲಾವಕಾಶವಿದೆ. ಹೀಗಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಬೇಕಿದೆ ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹೀಗಾಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ನಿಗದಿಪಡಿಸುವಾಗ ಸಂಬಂಧಿತ ಕಾನೂನು ಸರಕಾರದ ನಿಯಮಗಳು, ಮೀಸಲಾತಿ ರೋಸ್ಟರ್ ಪದ್ದತಿ ಹಾಗೂ ಅಧಿಕೃತ ಜನಸಂಖ್ಯೆಯ ಅಂಕಿ ಅಂಶಗಳನ್ನು ಪಾರದರ್ಶವಾಕವಾಗಿ ಪರಿಗಣಿಸಬೇಕು ಎಂದರು.ಈ ತಿಂಗಳಲ್ಲಿ ಪಟ್ಟಣ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಮೊದಲು ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವೆಂದು ಪ್ರಕಟಿಸಿ, ಕೇವಲ ಎರಡು ದಿನಗಳಲ್ಲೇ ಸಾಮಾನ್ಯ ಕ್ಷೇತ್ರವೆಂದು ಬದಲಾಯಿಸಲಾಗಿದೆ ಎಂದು ಅವರು ಆರೋಪಿಸಿದರು. ಈ ಹಿಂದೆಯೂ ಎರಡು ಬಾರಿ ಮಹಿಳಾ ಮೀಸಲಾತಿ ಎಂದು ಪ್ರಕಟಿಸಿ, ಬಳಿಕ ಬದಲಾವಣೆ ಮಾಡಲಾಗಿದೆ ಎಂದು ದೂರಿದರು. ಕೂಡಲೇ ಪಟ್ಟಣ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ ಮೀಸಲಿಡುವ ಮೂಲಕ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದರು.

