ಬೀಚಿ ಬಳಗದ ವತಿಯಿಂದ ಪಿ ಎಸ್ ಐ ಐಶ್ವರ್ಯ ನಾಗರಾಳ ರವರನ್ನು ಸನ್ಮಾನಿಸಲಾಯಿತು

ಬೀಚಿ ಬಳಗದ ವತಿಯಿಂದ ಪಿ ಎಸ್ ಐ ಐಶ್ವರ್ಯ ನಾಗರಾಳ ರವರನ್ನು ಸನ್ಮಾನಿಸಲಾಯಿತು

ಬೀಚಿ ಬಳಗದ ವತಿಯಿಂದ ಪಿ ಎಸ್ ಐ ಐಶ್ವರ್ಯ ನಾಗರಾಳ ರವರನ್ನು ಸನ್ಮಾನಿಸಲಾಯಿತು

ಕಲ್ಯಾಣ ಕಹಳೆ ನರೇಗಲ್: 

ಕರ್ನಾಟಕ ರಾಜ್ಯದಲ್ಲಿ ಜನಸ್ನೇಹಿ ಪೊಲೀಸ್ ಠಾಣೆಯಾಗಿ ನರೇಗಲ್ ಠಾಣೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಕೊಂಡುದ್ದಕ್ಕೆ.ಠಾಣೆ ಅಧಿಕಾರಿಗಳಾದ ಐಶ್ವರ್ಯ ನಾಗರಾಳ ಇವರನ್ನು ನರೇಗಲ್ ಬೀChi.ಬಳಗದಿಂದ ಅಭಿನಂದಿಸಿ. ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಪ್ರಕಟಿಸಲಾದ ರಾಜ್ಯದ ಅತ್ಯುತ್ತಮ ಕಾರ್ಯಕ್ಷಮತೆಯ ಪೊಲೀಸ್ ಠಾಣೆಗಳ ಪಟ್ಟಿಯಲ್ಲಿ ಗದಗ ಜಿಲ್ಲೆಯ ನರೇಗಲ್ ಪೊಲೀಸ್ ಠಾಣೆಯು ರಾಜ್ಯದಲ್ಲೇ 2ನೇ ರಾಂಕ್ ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿದೆ. ಪೊಲೀಸ್ ಠಾಣೆಗಳ ದೈನಂದಿನ ಕಾರ್ಯವೈಖರಿ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ, ಸಾರ್ವಜನಿಕರ ದೂರುಗಳಿಗೆ ತ್ವರಿತ ಸ್ಪಂದನೆ ಹಾಗೂ ಅಪರಾಧ ನಿಯಂತ್ರಣ ಮಾನದಂಡಗಳ ಆಧಾರದ ಮೇಲೆ ಸಿದ್ಧಪಡಿಸಲಾದ ರಾಜ್ಯದ 'ಟಾಪ್-10' ಪಟ್ಟಿಯಲ್ಲಿ ನರೇಗಲ್ ಠಾಣೆಯು 65.9 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಅಲಂಕ-ರಿಸಿದೆ. ನರೇಗಲ್ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯ ವಿಶ್ವನಾಥ್ ನಾಗರಾಳ ಅವರ ನೇತೃತ್ವ ಹಾಗೂ ಸಿಬ್ಬಂದಿಯ ಕರ್ತವ್ಯನಿಷ್ಠೆ ಗುರುತಿಸಿ ನರೇಗಲ್ಲ ಬೀಚಿ ಬಳಗದ ಸರ್ವ ಸದಸ್ಯರು ಸೇರಿ, ನರೇಗಲ್ಲ ಪಿ ಎಸ್ ಐ ಐಶ್ವರ್ಯ ನಾಗರಾಳ ರವರನ್ನು ಹಾಗೂ ರೋಣ ಸಿ ಪಿ ಆಯ್ ರವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ