ಕರವೇಗೆ ಶೈಲಾಜಕುಮಾರ ಪೂಜಾರಿ ನೇಮಕ

ಕರವೇಗೆ ಶೈಲಾಜಕುಮಾರ ಪೂಜಾರಿ ನೇಮಕ

ಕರವೇಗೆ ಶೈಲಾಜಕುಮಾರ ಪೂಜಾರಿ ನೇಮಕ

ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆಯ(ಕಾವಲುಪಡೆ) ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶೈಲಾಜಕುಮಾರ ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ.

                ಬೀದರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಹೆಚ್.ಸುರೇಶ ಅವರ ಆದೇಶದ ಮೇರೆಗೆ ಬೀದರ ಜಿಲ್ಲಾಧ್ಯಕ್ಷ ಅವಿನಾಶ ಬುದರಕರ್ ಅವರು ನೇಮಕಾತಿ ಪತ್ರ ವಿತರಿಸಿದರು. ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸೂಚಿಸಿದರು.ಈ ಸಂದರ್ಭದಲ್ಲಿ ಶ್ರೀಶೈಲ ನಡಗಟ್ಟಿ, ಸಂತೋಷ ಪೂಜಾರಿ,ಸ್ಟೀಪನ್,ಅವಿನಾಶ ಜಮಾದಾರ ಸೇರಿದಂತೆ ಇತರರು ಇದ್ದರು.