ಇನ್ನರ್ ವೀಲ್ ಕ್ಲಬ್ ಆಫ್ ಗುಲ್ಬರ್ಗ ಸನ್ ಸಿಟಿ ವತಿಯಿಂದ ನವರಾತ್ರಿ ಹಬ್ಬದ ಅಂಗವಾಗಿ ದಾಂಡಿಯಾ ಕಾರ್ಯಕ್ರಮ ಯಶಸ್ವಿ
ಇನ್ನರ್ ವೀಲ್ ಕ್ಲಬ್ ಆಫ್ ಗುಲ್ಬರ್ಗ ಸನ್ ಸಿಟಿ ವತಿಯಿಂದ ನವರಾತ್ರಿ ಹಬ್ಬದ ಅಂಗವಾಗಿ ದಾಂಡಿಯಾ ಕಾರ್ಯಕ್ರಮ ಯಶಸ್ವಿ
ಕಲಬುರಗಿ: ಇನ್ನರ್ ವೀಲ್ ಕ್ಲಬ್ ಆಫ್ ಗುಲ್ಬರ್ಗ ಸನ್ ಸಿಟಿ ವತಿಯಿಂದ ನವರಾತ್ರಿ ಹಬ್ಬದ ಅಂಗವಾಗಿ ನಗರದ ಯಶ್ ಕೊಠಾರಿ ಭವನದಲ್ಲಿ ಬುಧವಾರ ಮಹಿಳೆಯರಿಗಾಗಿ ದಾಂಡಿಯಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಕ್ಕಳಿಂದ ಹಿಡಿದು ಹಿರಿಯ ಮಹಿಳೆಯರವರೆಗೆ ಉತ್ಸಾಹದಿಂದ ಪಾಲ್ಗೊಂಡು ದಾಂಡಿಯಾ ಹಾಡುಗಳಿಗೆ ಹೆಜ್ಜೆ ಹಾಕಿದರು. ನವರಾತ್ರಿಯ ನವವರ್ಣಗಳ ಉಡುಪು ಧರಿಸಿ ಆಗಮಿಸಿದ್ದ ಮಹಿಳೆಯರು ನೃತ್ಯದ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು. ಉತ್ತಮ ಉಡುಪು ಧರಿಸಿದವರು ಹಾಗೂ ನೃತ್ಯದಲ್ಲಿ ಗಮನ ಸೆಳೆದವರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಲಕ್ಷ್ಮಿ ಪಾಟೀಲ, ಜಯಶ್ರೀ ಮತ್ತಿಮಡು, ಲತಾ ಗುತ್ತೇದಾರ್, ಸವಿತಾ ಗುತ್ತೇದಾರ್, ಜ್ಯೋತಿ ತೆಗನೂರ, ಜ್ಯೋತಿ ಪಾಟೀಲ, ಕ್ಲಬ್ ಅಧ್ಯಕ್ಷೆ ಸಾರಿಕಾ ರಂಗದಾಳ ಹಾಗೂ ಕಾರ್ಯದರ್ಶಿ ಮನಿಷಾ ಜೈನ್ ಸೇರಿದಂತೆ ಕ್ಲಬ್ನ ಸದಸ್ಯರು ಉಪಸ್ಥಿತರಿದ್ದರು.
ದಾಂಡಿಯಾ ಕಾರ್ಯಕ್ರಮವು ಮಹಿಳೆಯರ ನಡುವೆ ಪ್ರೀತಿ, ಸ್ನೇಹ ಮತ್ತು ಸೌಹಾರ್ದದ ಬಾಂಧವ್ಯವನ್ನು ಬೆಸೆಯಿತು. ತೃಪ್ತಿ ಷಾ ಕಾರ್ಯಕ್ರಮ ನಿರೂಪಿಸಿದರು. ಅನಿಲ್ ಪವಾರ್ ಹಾಗೂ ಸಹನಾ ಮಂಗೀಕರ್ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಕ್ಲಬ್ ಅಧ್ಯಕ್ಷೆ ಸಾರಿಕಾ ರಂಗದಾಳ, ಕಾರ್ಯದರ್ಶಿ ಮನಿಷಾ ಜೈನ್ ಹಾಗೂ ಸದಸ್ಯರು ಸಂತಸ ವ್ಯಕ್ತಪಡಿಸಿದರು.

