ಮನೆಗೊಂದು ಗ್ರಂಥಾಲಯದಿಂದ ಜ್ಞಾನದ ಕಣ್ಣು ತೆರೆಯಲಿ

ಮನೆಗೊಂದು ಗ್ರಂಥಾಲಯದಿಂದ ಜ್ಞಾನದ ಕಣ್ಣು ತೆರೆಯಲಿ

ಹೊಳೆಆಲೂರು, ಅ. 7: “ಪ್ರತಿಯೊಬ್ಬರೂ ಸಾಹಿತಿಗಳಾಗಬೇಕಿಲ್ಲ; ಸಾಹಿತ್ಯ ಪ್ರೇಮಿಗಳಾಗಬೇಕು. ಓದುವ ಸಂಸ್ಕೃತಿ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ” ಎಂದು ಕಾರ್ಯಕ್ರಮ ಉದ್ಘಾಟಿಸಿದ ಎಚ್. ಕೆ. ಪಟೇಲ ಹೇಳಿದರು.

ಅಕ್ಟೋಬರ್ 7ರಂದು ಬೆಳಿಗ್ಗೆ 10.30ಕ್ಕೆ ಶ್ರೀ ಯಚ್ಚರೇಶ್ವರ ಮಠದ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ನಡೆದ ‘ಮನೆಗೊಂದು ಗ್ರಂಥಾಲಯ ಅನುಷ್ಠಾನ ಹಾಗೂ ಅಭಿನಂದನಾ ಸಮಾರಂಭ’ದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಎ. ಎಸ್. ಮಕನಾದಾರ ಓದು ಮತ್ತು ಜ್ಞಾನದ ಹಸಿವಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಪೂಜ್ಯ ಶ್ರೀ ಯಚ್ಚರೇಶ್ವರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಹಿರಿಯ ಜಾನಪದ ಕಲಾವಿದ ರಾಮಪ್ಪ ಫ. ಲೋಟಗೇರಿ ಮಾತನಾಡಿದರು.

ಎಸ್. ಕೆ. ಆಡಿನ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಎಸ್. ದೇವರಡ್ಡಿ ಕಾರ್ಯಕ್ರಮ ನಿರ್ವಹಿಸಿದರು. ಬಿ. ಆರ್. ಬಡಿಗೇರ, ಪ್ರಹ್ಲಾದ ಮುಂಡಾಸದ, ವಿ. ಎಂ. ವಸ್ತ್ರದ, ಶೋಭಾ ಆಡಿನ, ಪಿ. ಡಿ. ಸೇಬಣ್ಣವರ, ಬಿ. ಎಚ್. ಗಡಾದ ಹಾಗೂ ಶಿವಾನಂದ ಹೂಗಾರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನಗೊಳಿಸಿದವರಿಗೆ ಹಾಗೂ 51 ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಮಾಣಪತ್ರ ನೀಡಿ ಗೌರವಿಸಲಾಯಿ. 

ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ