ಪ್ರವಾದಿ ಹಝರತ್ ಮಹ್ಮದ್ ಪೈಗಂಬರ್ ಜನ್ಮ ದಿನ : ಸಂಭ್ರಮದಿಂದ ಆಚರಿಸಿದ ಮುಸ್ಲಿಂ ಸಮುದಾಯ ಹಬ್ಬದ ಪ್ರಯುಕ್ತ ವಿಶೇಷ ಆರೋಗ್ಯ ಮತ್ತು ರಕ್ತದಾನ ಶಿಬಿರ ಆಯೋಜನೆ

ಪ್ರವಾದಿ ಹಝರತ್ ಮಹ್ಮದ್ ಪೈಗಂಬರ್ ಜನ್ಮ ದಿನ :  ಸಂಭ್ರಮದಿಂದ ಆಚರಿಸಿದ ಮುಸ್ಲಿಂ ಸಮುದಾಯ ಹಬ್ಬದ ಪ್ರಯುಕ್ತ ವಿಶೇಷ ಆರೋಗ್ಯ ಮತ್ತು ರಕ್ತದಾನ ಶಿಬಿರ ಆಯೋಜನೆ

ಪ್ರವಾದಿ ಹಝರತ್ ಮಹ್ಮದ್ ಪೈಗಂಬರ್ ಜನ್ಮ ದಿನ : ಸಂಭ್ರಮದಿಂದ ಆಚರಿಸಿದ ಮುಸ್ಲಿಂ ಸಮುದಾಯ

ಹಬ್ಬದ ಪ್ರಯುಕ್ತ ವಿಶೇಷ ಆರೋಗ್ಯ ಮತ್ತು ರಕ್ತದಾನ ಶಿಬಿರ ಆಯೋಜನೆ 

ಚಿಂಚೋಳಿ : ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಹಝರತ್ ಮಹ್ಮದ್ ಪೈಗಂಬರ್ ಅವರ ಜನ್ಮದಿನವನ್ನಾಗಿ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಮಾಜಿ ಪುರಸಭೆ ಅಧ್ಯಕ್ಷ ಅಬ್ದುಲ್ ಬಾಶೀದ್ ಹೇಳಿದರು.

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮ ಹಾಗೂ ರಕ್ತದಾನ ಮತ್ತು ಆರೋಗ್ಯ ಶಿಬಿರಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಪ್ರವಾದಿ ಮಹ್ಮದ್ ಪೈಗಂಬರ್ ಅವರ ಬೋಧನೆಗಳು ಶಾಂತಿ, ಪ್ರೀತಿ, ದಯೆ ಹಾಗೂ ಮಾನವೀಯತೆಯ ಸಂದೇಶಗಳನ್ನು ಸ್ಮರಿಸಲು ಮತ್ತು ಅವರ ಜೀವನದ ಆದರ್ಶಗಳನ್ನು ಅನುಸರಿಸಲು ಈ ದಿನ ವಿಶೇಷ ಸಮಯ ಮೀಸಲಿಟ್ಟು ಪೈಗಂಬರ್ ಜನ್ಮದಿನ ಹಬ್ಬದಂತೆ ಆಚರಣೆ ಮಾಡಲಾಗುತ್ತದೆ.

 ವಿಶೇಷ ಪ್ರಾರ್ಥನೆ (ನಮಾಜ್) ಸಲ್ಲಿಸಿ, ಬಡವರಿಗೆ ಅನ್ನ ಸಂತರ್ಪಣೆ ಮತ್ತು ದಾನ ಧರ್ಮ ಮಾಡುವುದು ಈ ಹಬ್ಬದ ಪ್ರಮುಖ ಉದ್ದೇಶ ಹೊಂದಿದೆ ಎಂದರು.

ಹಿರಿಯ ಮುಖಂಡ ಸಂಜೀವನ ಯಾಕಾಪೂರ, ಕೆ. ಎಂ. ಬಾರಿ, ಲಕ್ಷ್ಮಣ ಆವಂಟಿ ಅವರು ಮಾತನಾಡಿದರು.

•ವಿಶೇಷ ರಕ್ತದಾನ ಶಿಬಿರ ಆಯೋಜನೆ : ಪ್ರವಾದಿ ಹಝರತ್ ಮಹ್ಮದ್ ಪೈಗಂಬರ್ ಜನ್ಮ ದಿಕನದ ನಿಮಿತ್ಯವಾಗಿ ಚಂದಾಪೂರದ ಮದೀನಾ ಮಜೀದ್ ನಲ್ಲಿ ರಕ್ತದಾನ ಶಿಬಿರ ಹಾಗೂ ಕಣ್ಣುಗಳ ಮತ್ತು ಹಲ್ಲಿನ ತಪಾಸಣೆ ಆಯೋಜನೆ ಮಾಡಲಾಗಿತ್ತು. ಈ ಶಿಬಿರದಲ್ಲಿ 37 ಜನ ರಕ್ತದಾನ ಮಾಡಿದರೆ, 80 ಜನ ಕಣ್ಣಿನ ತಪಾಸಣೆ ಹಾಗೂ 60 ಹಲ್ಲಿನ ಓಸಡು ತಪಾಸಣೆ ಮಾಡಿಸಿಕೊಡು ವೈದ್ಯರ ಸಲಹೆ ಪಡೆದುಕೊಂಡರು.

ಈ ಸಂದರ್ಭದಲ್ಲಿ ಚಿಂಚೋಳಿ ಬಡಿ ದರ್ಗಾ ಸಾಹೇಬ್, ಡಾ. ಗಫಾರ್, ಸೈಯದ್ ಶಬ್ಬೀರ್, ಸೈಯದ್ ಹಾಜಿ ಸಾಬ್, ಭೀಮಶೆಟ್ಟಿ ಮುರುಡ, ವಕೀಲ ಚಂದ್ರಶೇಟ್ಟಿ ಜಾಧವ, ವಿಜಯಕುಮಾರ ರಾಠೋಡ್, ರಾಜು ಪವಾರ, ರಾಮಶೆಟ್ಟಿ ಪವಾರ, ಮಸೂದ್ ಸದಾಗರ, ಅಹ್ಮದ್ ಭಾಗವನ್ ಸೇರಿದಂತೆ ಮಜೀದ್ ಕಮಿಟಿಯ ಸದಸ್ಯರು ಹಾಗೂ ಸಮುದಾಯದ ಹಿರಿಯರು, ಮಕ್ಕಳು ಉಪಸ್ಥಿತರಿದ್ದರು.