ರೋಣದಲ್ಲಿ 16 ವರ್ಷದ ಬುದ್ಧಿಮಾಂದ್ಯ ಹಾಗೂ ಮೂಕ ಬಾಲಕ ಕಾಣೆಯಾಗಿದ್ದಾನೆ – ಸುಳಿವು ನೀಡಲು ಮನವಿ
ರೋಣದಲ್ಲಿ 16 ವರ್ಷದ ಬುದ್ಧಿಮಾಂದ್ಯ ಹಾಗೂ ಮೂಕ ಬಾಲಕ ಕಾಣೆಯಾಗಿದ್ದಾನೆ – ಸುಳಿವು ನೀಡಲು ಮನವಿ
ರೋಣ: ರೋಣ ಪಟ್ಟಣದ ಕಲ್ಯಾಣ ನಗರದ ನಿವಾಸಿ ದೇವರಾಜ ಹನುಮಂತಪ್ಪ ಚನ್ನದಾಸರ ಎಂಬ 16 ವರ್ಷ 5 ತಿಂಗಳ ಅಪ್ರಾಪ್ತ ಬಾಲಕ ಕಾಣೆಯಾಗಿದ್ದು, ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನಾಂಕ 25.08.2026 ರಂದು ಮಧ್ಯಾಹ್ನ ಸುಮಾರು 3:30 ಗಂಟೆಗೆ ಮನೆಯಲ್ಲಿ ಊಟ ಮಾಡಿ ಬಸ್ ಸ್ಟ್ಯಾಂಡ್ ಕಡೆಗೆ ಹೋದ ಬಾಲಕ ಇದುವರೆಗೂ ಮನೆಗೆ ಮರಳಿ ಬಂದಿಲ್ಲ. ಆತನ ಕುಟುಂಬಸ್ಥರು ಭಾಸಲಾಪೂರ, ಜಕ್ಕಲಿ, ಮಾರನಬಸರಿ, ಹಾಳಕೇರಿ, ಕೊತಬಾಳ, ಹಿರೇಹಾಳ, ಜಾಲಿಹಾಳ, ಬೇಲೂರ, ಮಾಡಲಗೇರಿ, ನೈನಾಪೂರ, ಕುರಹಟ್ಟಿ, ಹುಲ್ಲೂರ, ಮುದೇನಗುಡಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಹುಡುಕಾಟ ನಡೆಸಿದರೂ ಬಾಲಕನ ಸುಳಿವು ಸಿಕ್ಕಿರುವುದಿಲ್ಲ.
ಕಾಣೆಯಾದ ಬಾಲಕನು 5 ಅಡಿ 5 ಇಂಚು ಎತ್ತರ, ಸಾಧಾರಣ ಮೈಕಟ್ಟು ಹಾಗೂ ಕಪ್ಪು ಮೈಬಣ್ಣ ಹೊಂದಿರುತ್ತಾನೆ. ಆತ ಬುದ್ಧಿಮಾಂದ್ಯ ಹಾಗೂ ಮೂಕನಾಗಿದ್ದು, ಆತನಿಗೆ ಕನ್ನಡ ಮತ್ತು ತೆಲುಗು ಭಾಷೆಗಳು ತಿಳಿಯುತ್ತವೆ. ಬಾಲಕನು ಕೊನೆಯದಾಗಿ ನೀಲಿ ಬಣ್ಣದ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದನು.
ಈ ಬಾಲಕನ ಕುರಿತು ಯಾವುದೇ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ತಕ್ಷಣವೇ ರೋಣ ಪೊಲೀಸ್ ಠಾಣೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ

