ವರದಕ್ಷಿಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ

ವರದಕ್ಷಿಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ

ವರದಕ್ಷಿಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ

ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಹುಚ್ಚಿರೇಶ್ವರ ದೇವಸ್ಥಾನದಲ್ಲಿ ವರದಕ್ಷಿಣೆ ನಿಷೇಧ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು.

ವರದಕ್ಷಿಣೆ ಪದ್ಧತಿಯಿಂದ ಸಮಾಜದಲ್ಲಿ ಉಂಟಾಗುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲಾಯಿತು. ವರದಕ್ಷಿಣೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಒಂದಾಗಿ ಹೆಜ್ಜೆ ಹಾಕಬೇಕು ಎಂದು ಕಾರ್ಯಕ್ರಮದಲ್ಲಿ ಕರೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪೂಜ್ಯ ಲೋಕೇಶ್ ಮಹಾರಾಜ್, ದೇವಿ ತಾಂಡಾ ಹಾಗೂ ತಾರಿ ತಾಂಡಾದ ಪೂಜ್ಯ ಅನಿಲ್ ಮಹಾರಾಜ್, ಮಾತಾ ಸವಿತಾ ಮಾತಾ ದೇವಿ ಅವರ ದಿವ್ಯ ಸಾನಿಧ್ಯ, ಮಾರ್ಗದರ್ಶನ ಮತ್ತು ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಈ ಸಂದರ್ಭದಲ್ಲಿ ಖ್ಯಾತ ಗಾಯಕ ಡಾ. ಸುಭಾಷ್ ರಾಠೋಡ್, ಸಮಾಜ ಮುಖಂಡರಾದ ಬಿ ಬಿ ನಾಯಕ್, ವಿಜಯ್ ಪವಾರ್, ಸುರೇಶ್ ರಾಠೋಡ್, ಬಾಬು ಪವಾರ್, ಆನಂದ ಚವಾಣ್ ತಾಂಡಾ, ರವಿ ರಾಠೋಡ್, ಶಿವರಾಮ್ ಚವಾಣ್, ವಿಠಲ್ ಮಾಸ್ಟರ, ಜೋತಿಲಾ ರಾಠೋಡ್, ಮಿಥಿನ್ ಪವಾರ್, ಗೋರಖನಾಥ್, ನವರಂಗ್, ಸಂಜು ರಾಠೋಡ್, ರಾಜು, ವಿಕಾಸ್, ಆನಂದ, ಕಲ್ಮುಡ್, ಧನಸಿಂಗ್ ಮಾಮಾ ಸೇರಿದಂತೆ ಸೇವಾಲಾಲ್ ಜಯಂತಿ ಉತ್ಸವ ಸಮಿತಿ, ಕಮಲಾಪುರದ ಪದಾಧಿಕಾರಿಗಳು ಸದಸ್ಯರು ಹಾಗೂ ೬೨ ತಾಂಡಗಳ ನಾಯಕರು ಹಾಗೂ ಕಾರಬಾರಿಗಳು ಭಾಗವಹಿಸಿದ್ದರು.