ಪುರಾಣ ವೇದಿಕೆಯಲ್ಲಿ ಬಬಲಾದ ಚನ್ನವೀರ ಶ್ರೀಗಳ ತೊಟ್ಟಿಲು ಕಾರ್ಯಕ್ರಮ

ಪುರಾಣ ವೇದಿಕೆಯಲ್ಲಿ  ಬಬಲಾದ ಚನ್ನವೀರ ಶ್ರೀಗಳ ತೊಟ್ಟಿಲು ಕಾರ್ಯಕ್ರಮ

ಪುರಾಣ ವೇದಿಕೆಯಲ್ಲಿ ಬಬಲಾದ ಚನ್ನವೀರ ಶ್ರೀಗಳ ತೊಟ್ಟಿಲು ಕಾರ್ಯಕ್ರಮ 

 ಅಕ್ಕಲಕೋಟ ತಾಲೂಕಿನ ದುಧನಿ ಗ್ರಾಮದ ಸಾಲಿಮಠ ಮನೆತನದ ಸಿದ್ರಾಮಯ್ಯ ಶ್ರೀಮತಿ ಚನ್ನಮ ಸಿದ್ರಾಮಯ್ಯ ಸಾಲಿಮಠ ಕುಟುಂಬದಲ್ಲಿ ಜನ್ಮತಾಳಿದ ಮಗುವಿಗೆ ಚನ್ನವೀರಯ್ಯ ಎಂಬ ನಾಮಕರಣ ಸಮಾರಂಭ ಹಮ್ಮಿಕೊಳ್ಳಲಾಯಿತು. ವಿಜಯಲಕ್ಷ್ಮಿ ರಟಕಲ್, ಮಂಗಲಾ ಮಂಠಾಳೆ, ಶಶಿಕಲಾ ಮಠಪತಿ, ಸುನಂದಾ ಪಡಶೆಟ್ಟಿ, ಅಂಜಲಿ ದಸಮಾ, ಕಮಲಾಬಾಯಿ ಬೀದಿಮನಿ, ಶಾಂತಾ ಸಿಕೇದ, ಪಂಚಮಿ ದಿವಟಗಿ, ಸುರೇಖಾ ಯಾದಗಿರಿ, ಶರಣಮ್ಮ ಬೀದಿಮನಿ, ತೊಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟರು. 

ಇತ್ತೀಚಿಗೆ ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಆಶ್ರಯದಲ್ಲಿ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಜರುಗುತ್ತಿರುವ ಮುತ್ಯಾನ ಬಬಲಾದ ಪುರಾಣ ಪ್ರವಚನದಲ್ಲಿ ತೊಟ್ಟಿಲು ಕಾರ್ಯಕ್ರಮ ಜರುಗಿತು. 

 ತೊಟ್ಟಿಲು ಕಾರ್ಯಕ್ರಮಕ್ಕೆ ಅನ್ನಪೂರ್ಣೆಶ್ವರಿ ದೇವಿ ಹಾಗೂ ಕಲಾವಿದೆಯಾದ ಪ್ರೀತಿ ಶಹಾಬಾದ ಆಗಮಿಸಿ ವಿಶೇಷ ತೊಟ್ಟಿಲು ಕಾರ್ಯಕ್ರಮ ನಡೆಸಿಕೊಟ್ಟರು. ಕಾಶಿಬಾಯಿ ಹಿರೇಮಠ, ಶಶಿಕಲಾ ನಾಗಯ್ಯ ಇತರರು ತೊಟ್ಟಿಲ ಹಾಡಿಗೆ ಧ್ವನಿಗೂಡಿಸಿದರು. 

 ಕಾವ್ಯ ಬಸವರಾಜ ಬಸವರಾಜ ಬೀದಿಮನಿ ತೊಟ್ಟಿಲ ಕೆಳಗಡೆ ಕೂತು ಸೇವೆ ಸಲ್ಲಿಸಿದರು, ವಿನೋದ ಗೋರೆ ಪ್ರಸಾದ ವ್ಯವಸ್ಥೆ ಮಾಡಿದರು. ರೇಖಾ ಅಂಡಗಿ ಸ್ವಾಗತಿಸಿದರು. ಮಧು ಹಿಂದೊಡ್ಡಿ, ತಾರಾ ಪಾಟೀಲ, ಮಹಿಳೆಯರ ಆಯೇರಿ ಪಟ್ಟಿ, ರೇವಣಸಿದ್ದಪ್ಪ ಜೀವಣಗಿ ಪುರುಷರ ಆಯೇರಿ ಪಟ್ಟಿ ಬರೆದು ಸೇವೆ ಸಲ್ಲಿಸಿದರು. ಪುರಾಣಿಕರಾದ ವೇ,ಮೂ. ವೀರಯ್ಯ ಶಾಸ್ತ್ರೀ ಹಿರೇಮಠ ಗದಗ, ಶಿವಕುಮಾರ ಹಿರೇಮಠ ಜಾಲಹಳ್ಳಿ, ಅಡಿವೇಶ ಕುಮಾರ ಗೋಕಾಕ, ಮಲ್ಲಿನಾಥ ದೇಶಮುಖ, ಶಿವರಾಜ ಅಂಡಗಿ, ಗುರುಲಿಂಗಯ್ಯ ಮಠಪತಿ ನೂರಾರು ಭಕ್ತರು ಉಪಸ್ಥಿತರಿದ್ದು ತೊಟ್ಟಿಲು ಕಾರ್ಯಕ್ರಮಕ್ಕೆ ತನು-ಮನ-ಧನದಿಂದ ಸೇವೆ ಸಲ್ಲಿಸಿದರು. 

ಫೋಟೋ: ಬಬಲಾದ ಶ್ರೀಗಳ ಪುರಾಣ ವೇದಿಕೆಯಲ್ಲಿ ಚನ್ನವೀರ ಶ್ರೀಗಳ ತೊಟ್ಟಿಲು ಕಾರ್ಯಕ್ರಮ ವಿದ್ಯಾನಗರದ ಮಹಿಳೆಯರು ನಡೆಸಿಕೊಟ್ಟರು.