ಶ್ರಾವಣ ಮಾಸದಲ್ಲಿ ನಂದಿಕೂರಿನಲ್ಲಿ ತಿಂಗಳಿಡೀ ಭಜನೆ ಕಾರ್ಯಕ್ರಮ
ಶ್ರಾವಣ ಮಾಸದಲ್ಲಿ ನಂದಿಕೂರಿನಲ್ಲಿ ತಿಂಗಳಿಡೀ ಭಜನೆ ಕಾರ್ಯಕ್ರಮ
ಕಲಬುರಗಿ:ನಗರದ ಹೊರವಲಯದ ನಂದಿಕೂರು ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ನಿರಂತರವಾಗಿ ಪ್ರತಿನಿತ್ಯ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ವ್ಯವಸ್ಥಾಪಕರಾದ ಪ್ರಭಾವತಿ ಮಹಿಳಾ ಸ್ವಸಹಾಯ ಸಂಘ, ತೆಲ್ಕರ ನಗರ, ನಂದಿಕೂರು ಇವರಿಗೆ ಶ್ರೀ ಶಿವಲಿಂಗ ಶರಣರು ನಂದಿಕೂರು ಅವರ ವತಿಯಿಂದ ಡೋಲಕ ಸೇರಿದಂತೆ ಭಜನೆಗೆ ಅಗತ್ಯವಿರುವ ವಿವಿಧ ಸಾಮಗ್ರಿಗಳನ್ನು ನೀಡಲಾಯಿತು. ಅಲ್ಲದೆ, ಜಿಲ್ಲಾ ಪಂಚಾಯತ್ ಕಲಬುರಗಿಯ ಪ್ರಧಾನ ಕಾರ್ಯದರ್ಶಿ ಶ್ರೀ ಲಕ್ಷ್ಮಣ ಶೃಂಗೇರಿ ಅವರು ಜಮಖಾನೆಗಳನ್ನು ಒದಗಿಸಿದರು. ಉದ್ಯಮಿ ಶ್ರೀ ನಾರಾಯಣ ಸರ್ವಶೆಟ್ಟಿ ಅವರು ಸಹ ವಿವಿಧ ಸಾಮಗ್ರಿಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಸಹಕರಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಅನಿತಾ ಪವನಕುಮಾರ ವಳಕೇರಿ, ಚಂದ್ರಕಲಾ ಎಚ್. ಪ್ರಭುಗೋಳ, ರೋಷನ ಬಿ. ಉತ್ತನಾಳ, ಅಂಬಿಕಾ ಎಸ್. ಮಡಿವಾಳ, ಆಶಾ ಬಿ. ಮುಚ್ಚಖೇಡ, ಸಂಗಮೇಶ ಮಡಿವಾಳ, ಬೀರಪ್ಪ ಎಸ್. ಮುಚ್ಚಖೇಡ, ಪವನಕುಮಾರ ಬಿ. ವಳಕೇರಿ ಹಾಗೂ ಹೂವಣ್ಣ ಪ್ರಭುಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶ್ರಾವಣ ಮಾಸದ ಸಂದರ್ಭದಲ್ಲಿ ಪ್ರತಿದಿನ ನಡೆಯುತ್ತಿರುವ ಭಜನೆ ಕಾರ್ಯಕ್ರಮವು ಗ್ರಾಮದಲ್ಲಿ ಭಕ್ತಿಭಾವದ ವಾತಾವರಣ ಮೂಡಿಸಿದ್ದು, ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.

