ಶ್ರೀ ಚನ್ನಮಲ್ಲೇಶ್ವರ ಪತ್ತಿನ ಸಹಕಾರ ಸಂಘದ 30ನೇ ವಾರ್ಷಿಕ ಮಹಾಸಭೆ

ಶ್ರೀ ಚನ್ನಮಲ್ಲೇಶ್ವರ ಪತ್ತಿನ ಸಹಕಾರ ಸಂಘದ 30ನೇ ವಾರ್ಷಿಕ ಮಹಾಸಭೆ

ಶ್ರೀ ಚನ್ನಮಲ್ಲೇಶ್ವರ ಪತ್ತಿನ ಸಹಕಾರ ಸಂಘದ 30ನೇ ವಾರ್ಷಿಕ ಮಹಾಸಭೆ

ಕಲಬುರಗಿ: ಶ್ರೀ ಚನ್ನಮಲ್ಲೇಶ್ವರ ಪತ್ತಿನ ಸಹಕಾರ ಸಂಘ ನಿಯಮಿತದ 2025-26ನೇ ಸಾಲಿನ 30ನೇ ವಾರ್ಷಿಕ ವರದಿ ಮಹಾಸಭೆಯನ್ನು ನಗರದ ಅಣ್ಣಾರಾವ ಬೆಣ್ಣೂರ ಕಲ್ಯಾಣ ಮಂಟಪದಲ್ಲಿ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮಕ್ಕೆ ಗಣ್ಯರು ಉದ್ಘಾಟಿಸಿದರು.

 ಪಾಳಾ ಹಿರೇಮಠದ ಪರಮ ಪೂಜ್ಯ ಶ್ರೀ ಷ.ಬ್ರ. ಗುರುಮೂರ್ತಿ ಶಿವಾಚಾರ್ಯರ ದಿವ್ಯ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಒಕ್ಕೂಟ ನಿಯಮಿತದ ಪ್ರಾಂಶುಪಾಲ ಅರುಣಕುಮಾರ ಹರಸೂರ, ಅಪರ ಆಯುಕ್ತರ ಕಾರ್ಯಾಲಯದ ಉಪ ನಿರ್ದೇಶಕ ನಾಗರಾಜ ಎಸ್. ಡೋಣಿ ಹಾಗೂ ಭಾಲ್ಕಿ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಜಿ. ಹಳ್ಳದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

 ಸಂಘದ ಅಧ್ಯಕ್ಷ ಪರಮೇಶ್ವರ ಎಸ್. ಮುನ್ನಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಈ ಸಂದರ್ಭದಲ್ಲಿ ಸಂಘದ 30ನೇ ವಾರ್ಷಿಕ ವರದಿ, ಸಂಘದ ಪ್ರಗತಿ, ಸದಸ್ಯರ ಹಿತಾಸಕ್ತಿ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ವಿರೇಶ ಎಸ್. ಶೀಲವಂತ, ನಿರ್ದೇಶಕರಾದ ಸಿದ್ರಾಮಪ್ಪ ಎಚ್. ಹೊದಲೂರ, ಶಿವಶಂಕರ ಎಲ್. ಜಾಧವ, ಚನ್ನವೀರಪ್ಪ ವಿ. ಪಾಟೀಲ, ಪ್ರಭುಲಿಂಗ ಬಿ. ಗೊಬ್ಬುರ, ಶರಣಪ್ಪ ಸಿ. ದೇಗಾಂವ, ಹಣಮಂತ ಎಸ್. ಎಕ್‌ಮೈಕರ, ಲಲಿತಾಬಾಯಿ ಎಸ್. ಅಲ್ಲದ, ಶಕುಂತಲಾ ಬಿ. ಸೊಸಟ್ಟಿ, ಗುರುಲಿಂಗಪ್ಪಾಡಿ ಹಾದಿಮನಿ ಹಾಗೂ ಶಿವಶರಣಪ್ಪ ಬಿ. ಮಲಕೂಡ, ಸಂಘದ ಸಿಬ್ಬಂದಿ ವರ್ಗ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು, ಸಂಘದ ಇನ್ನಷ್ಟು ಪ್ರಗತಿಗೆ ಒಗ್ಗಟ್ಟಿನಿಂದ ಶ್ರಮಿಸುವ ಸಂಕಲ್ಪ ವ್ಯಕ್ತಪಡಿಸಿದರು.