ಗೌತಮ ಸಂಗೋಳಗಿ ಜನ್ಮದಿನ ಅರ್ಥಪೂರ್ಣ ಆಚರಣೆ
ಗೌತಮ ಸಂಗೋಳಗಿ ಜನ್ಮದಿನ ಅರ್ಥಪೂರ್ಣ ಆಚರಣೆ
ಕಲಬುರಗಿ: ಕರ್ನಾಟಕ ಮಹಾನಾಯಕ ಅಂಬೇಡ್ಕರ್ ವೇದಿಕೆಯ ಕಲಬುರಗಿ ಜಿಲ್ಲಾಧ್ಯಕ್ಷರಾದ ಶ್ರೀ ಗೌತಮ ಸಂಗೋಳಗಿ ಅವರ 35ನೇ ಜನ್ಮದಿನವನ್ನು ನಗರದ ಬಿದ್ದಾಪೂರ ಕಾಲೋನಿಯಲ್ಲಿರುವ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅವರ ಗೆಳೆಯರ ಬಳಗದ ವತಿಯಿಂದ ನಿರಾಶ್ರಿತರೊಂದಿಗೆ ಕೇಕ್ ಕತ್ತರಿಸಿ, ಅನ್ನದಾಸೋಹ ಏರ್ಪಡಿಸುವ ಮೂಲಕ ಮಾನವೀಯ ಸೇವೆಯ ಸಂದೇಶ ಸಾರಲಾಯಿತು. ಜನ್ಮದಿನವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ, ನಿರಾಶ್ರಿತರೊಂದಿಗೆ ಬೆರೆತು ಸೇವಾ ಕಾರ್ಯದ ಮೂಲಕ ಆಚರಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ವೇದಿಕೆಯ ರಾಜ್ಯಾಧ್ಯಕ್ಷರಾದ ಸಿದ್ರಾಮಪ್ಪ ದೊಡ್ಡಮನಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಅಶೋಕ ವೀರನಾಯಕ, ಭೀಮ್ ಶಕ್ತಿ ಸಂಘದ ರಾಜ್ಯಾಧ್ಯಕ್ಷರಾದ ಅಂಬಾಜಿ ಪಿ. ಮೇಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಎಂ. ಮುಡ್ಡಿ, ಶಂಕರ್ ನಾಟೇಕಾರ್ ಅಣ್ಣಾಜೀ, ಅಹಮದ್ ಶೇಕ್, ರೀಯಜ್ ಇಮ್ಮದರ್, ಶಿವಕುಮಾರ್ ಗಾಯಕವಾಡ, ಕೈಲಾಸ ಸಂಗೋಳಗಿ ಹಾಗೂ ಜೈ ಕರ್ನಾಟಕ ಜನಪರ ಸಮಿತಿ ರಾಜ್ಯಾಧ್ಯಕ್ಷರಾದ ಸಿದ್ಧು ಜಮಾದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶ್ರೀ ಗೌತಮ ಸಂಗೋಳಗಿ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮತ್ತಷ್ಟು ಯಶಸ್ಸು ದೊರೆಯಲಿ ಎಂದು ಗಣ್ಯರು ಹಾಗೂ ಸ್ನೇಹಿತರು ಶುಭ ಹಾರೈಸಿದರು.

