ಪೆರ್ನಾಜೆಯಲ್ಲಿ ಮತ್ತೆ ಕಾಡಾನೆ ಹಾವಳಿ
ಪೆರ್ನಾಜೆಯಲ್ಲಿ ಮತ್ತೆ ಕಾಡಾನೆ ಹಾವಳಿ
ಪುತ್ತೂರು : ಪೆರ್ನಾಜೆ ಕೃಷಿ ಪ್ರದೇಶಕ್ಕೆ ಶನಿವಾರ ರಾತ್ರಿ ಕೃಷಿಕರಾದ ಕುಮಾರ್ ಪೆರ್ನಾಜೆ ಅವರ ತೋಟದಲ್ಲಿ ಹತ್ತಕ್ಕೂ ಮಿಕ್ಕಿ. ಬಾಳೆ ಚಿಗುಜ್ಜೆ ಅಡಿಕೆ ಸಸಿ , ರಾಘವೇಂದ್ರ ಭಟ್ , ಸುಳ್ಯ ತಾಲೂಕಿನ ಪೆರ್ನಾಜೆ ಕಲ್ಲರ್ಪೆ ಕನಕಮಜಲು ಗ್ರಾಮದ ಹೊನ್ನಪ್ಪ ನಾಯ್ಕರ ತೋಟಗಳಿಗೆ ನುಗ್ಗಿದ ಕಾಡಾನೆ ಬಾಳೆಗಿಡಗಳನ್ನು ನಾಶಪಡಿಸಿದೆ. ತೋಟದ ಕರೆಯಲ್ಲಿ ಈಜಾಡಿ ಮುಗೇರು ಕಡೆಗೆ ತೆರಳಿವೆ ಎಂದು ಪ್ರಗತಿಪರ ಕೃಷಿಕ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು. ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷಿಕರು ಒತ್ತಾಯಿಸಿದ್ದಾರೆ.

