| ಶಿವಸೇನಾ ಪಕ್ಷದ ಉಧ್ಘಾಟನೆ : ತಾಲ್ಲೂಕ ಪದಾದಿಕಾರಿಗಳ ನೇಮಕ | ಕೈ ಕಮಲದ ಮಧ್ಯೆ ಶಿವಾಸೇನಾ ಪಕ್ಷ ಬೆಳೆಸಬೇಕು :..ಆಂದೋಲ ಶ್ರೀಗಳು.
| ಶಿವಸೇನಾ ಪಕ್ಷದ ಉಧ್ಘಾಟನೆ : ತಾಲ್ಲೂಕ ಪದಾದಿಕಾರಿಗಳ ನೇಮಕ |ಕೈ ಕಮಲದ ಮಧ್ಯೆ ಶಿವಾಸೇನಾ ಪಕ್ಷ ಬೆಳೆಸಬೇಕು :..ಆಂದೋಲ ಶ್ರೀಗಳು.
ಶಹಾಬಾದ : - ರಾಜ್ಯದಲ್ಲಿ ಮತ್ತು ಸ್ಥಳೀಯವಾಗಿ ಕಾಂಗ್ರೆಸ್ ಬಿಜೆಪಿ ಬಲಿಷ್ಠವಾದ ಪಕ್ಷಗಳ ಮಧ್ಯೆ ಶಿವಸೇನಾ ಪಕ್ಷವನ್ನು ಹೆಮ್ಮರವಾಗಿ ಬೆಳೆಸಿ ಭ್ರಷ್ಟಾಚಾರ ಇಲ್ಲದ ಆಡಳಿತ ನೀಡಿ ಜನರಿಗೆ ಮೂಲ ಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸಲು ಶಿವಾಸೇನಾ ಪಕ್ಷವನ್ನು ಪ್ರಾರಂಭಿಸಲಾಗಿದೆ ಎಂದು ಪಕ್ಷದ ರಾಜ್ಯ ಅಧ್ಯಕ್ಷರಾದ ಸಿದ್ದಲಿಂಗ ಶಿವಾಚಾರ್ಯ ಆಂದೋಲ ಅವರು ಹೇಳಿದರು.
ಅವರು ನಗರದ ಜಗದಂಬಾ ಮಂದಿರದಲ್ಲಿ ಶಿವಾಸೇನಾ ಪಕ್ಷ(ಏಕನಾಥ ಶಿಂಧೆ)ಬಣದ ಪದಾಧಿಕಾರಿಗಳ ಪದಗ್ರಹಣ ಹಾಗೂ ಶಾಸ್ತ್ರಿ ಚೌಕಿನಲ್ಲಿ ಪಕ್ಷದ ಕಚೇರಿ ಮತ್ತು ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಹಾಬಾದ್ ತಾಲ್ಲೂಕ ಸಿಮೆಂಟ್ ಉತ್ಪಾದನೆಗೆ ಹೆಸರುವಾಸಿಯಾಗಿದೆ, ಆದರೆ ಇಂದು ಕಾರ್ಖಾನೆಗಳು ಮುಚ್ಚಿ ಜನರು ಬೀದಿ ಪಾಲಾಗಿದ್ದಾರೆ, ಧೂಳಿನ ಕೊಂಪಿಯಾಗಿ ಪರಿವರ್ತನೆಯಾಗಿದೆ ಮೂಲ ಸೌಕರ್ಯಗಳಿಂದ ವಂಚಿತರಾಗಿದೆ ಹಾಗೂ ಭ್ರಷ್ಟಾಚಾರದ ಗೂಡಾಗಿದೆ, ಇದರ ವಿರುದ್ಧ ಪ್ರಶ್ನೆಸಬೇಕಾದ ವಿರೋಧ ಪಕ್ಷಕ್ಕೆ ಧ್ವನಿ ಇಲ್ಲದಂತಾಗಿದೆ ಹಾಗಾಗಿ ನಾವು ಶಿವಾಸೇನಾ ಪಕ್ಷವನ್ನು ಪ್ರಾರಂಭಿಸಿದ್ದೆವೆ, ನೋಂದವರ ಧ್ವನಿಯಾಗಿ ಅನ್ಯಾಯದ ವಿರುದ್ಧ ಸಿಡಿದೇಳುವ ಸೈನ್ಯವಾಗಿ ಬೆಳೆಸುತ್ತೇವೆ. ಮುಂಬರುವ ಎಲ್ಲಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಲ್ಲರೂ ಸಹಕಾರ ನೀಡಿ, ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಡಬೇಕೆಂದು ಹೇಳಿದರು.
ಮುಂದುವರೆದ ಮಾತನಾಡಿ ಕಲಬುರಗಿ ಜಿಲ್ಲೆಯಲ್ಲಿ ಗುಂಡಾ ವರ್ತನೆಗಳು ಹೆಚ್ಚಾಗಿ ನಡೆಯುತ್ತಿವೆ, ಅಭಿವೃದ್ಧಿಯಲ್ಲೂ ಶೂನ್ಯವಾಗಿದೆ, ಈ ಅವ್ಯವಸ್ಥೆಯನ್ನು ಶಿವಸೇನಾ ಪಕ್ಷ ಕಠೋರವಾಗಿ ವಿರೋಧಸುತ್ತದೆ ಮತ್ತು ನಮ್ಮ ಪಕ್ಷವನ್ನು ಮಹಾರಾಷ್ಟ್ರದಲ್ಲಿ ಬಾಳಾ ಸಾಹೇಬ ಠಾಕ್ರೆ ಮತ್ತು ಏಕನಾಥ ಸಿಂಧೆ ಅವರು ಬೆಳೆಸಿದ ಹಾಗೆ ಇಲ್ಲಿ ಕೂಡ ಬಲಿಷ್ಠವಾಗಿ ಕಟ್ಟುತ್ತೇವೆ ಯಾವುದಕ್ಕೂ ನಾವು ಹೆದರುವುದಿಲ್ಲ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ರಾಯಚೋಟಿ ವೀರಭದ್ರೇಶ್ವರ ಆಶ್ರಮದ ಶಂಕ್ರಯ್ಯ ಸ್ವಾಮಿ ವಹಿಸಿದ್ದರು, ಮಹಿಳಾ ಘಟಕದ ಅಧ್ಯಕ್ಷೆ ಉಷಾ ಭಗತ್ ಹಾಗೂ ಜಿಲ್ಲಾ ಅಧ್ಯಕ್ಷ ಗುರುಶಾಂತ ತಿಂಗಳಿ, ಸಿದ್ದು ಹಿರೇಮಠ ಮಾತನಾಡಿದರು,
ವೇದಿಕೆ ಮೇಲೆ ರಾಕೇಶ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಂಚಿತವಾಗಿ ಬಸವೇಶ್ವರ ವೃತ್ತದಿಂದ ಮುಖ್ಯ ರಸ್ತೆಯ ಮೂಲಕ ಜಗದಂಬಾ ಮಂದಿರದವರೆಗೆ ಬೈಕ್ ಜಾಥಾ ಮಾಡಲಾಯಿತು.
ಪಕ್ಷದ ತಾಲ್ಲೂಕ ಅಧ್ಯಕ್ಷರಾದ ದಸರಥ ದೇಸಾಯಿ ಮತ್ತು ಉಪಾಧ್ಯಕ್ಷರಾದ ಸುರೇಶ ಮಾನವಿಕರ್ ಹಾಗೂ ಎಲ್ಲಾ ಪದಾದಿಕಾರಿಗಳಿಗೆ ಮತ್ತು ಕಾರ್ಯಕರ್ತರಿಗೆ ಪಕ್ಷದ ಧ್ವಜವನ್ನು ನೀಡುವ ಮೂಲಕ ರಾಜ್ಯ ಅಧ್ಯಕ್ಷ ಆಂದೋಲ ಶ್ರೀಗಳು ಪಕ್ಷದ ಜವಾಬ್ದಾರಿಯನ್ನು ನೀಡಿದರು.
ವಿವಿದ ಪಕ್ಷದ ಮುಖಂಡರು ಮೂಲ ಪಕ್ಷವನ್ನು ತೆರೆದು ಶಿವಸೇನಾ ಪಕ್ಷಕ್ಕೆ ಸೇರ್ಪಡೆಗೊಂಡರು.

