ಶಾಸಕ-ಸಂಸದರ ಜೊತೆ ಸಂವಾದಕ್ಕೆ ನರೇಗಲ್ಲ ಗ್ರಾಮಸ್ಥರ ನಿರ್ಧಾರ
ಶಾಸಕ-ಸಂಸದರ ಜೊತೆ ಸಂವಾದಕ್ಕೆ ನರೇಗಲ್ಲ ಗ್ರಾಮಸ್ಥರ ನಿರ್ಧಾರ
ನರೇಗಲ್ಲ: ಪಟ್ಟಣದ ಸಂತೆ ಬಜಾರ್‌ನ ಗಣೇಶ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ನಡೆದ ಗ್ರಾಮಸ್ಥರ ಸಭೆಯಲ್ಲಿ ಪಟ್ಟಣಕ್ಕೆ ಮೂಲ ಸೌಲಭ್ಯ ಪಡೆಯಲು ಶಾಸಕ-ಸಂಸದರ ಸಂವಾದ ನಡೆಸಲು ನಿರ್ಧರಿಸಲಾಯಿತು.
ಗದಗ-ಕೃಷ್ಣಾವರ ರೈಲು ಜಾರಿಗೆ ಆಗ್ರಹಿಸಿ ಗದಗ-ವಾಡಿ ಹೋರಾಟ ಸಮಿತಿ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಮಾಡಲಾಯಿತು. ಅನ್ನದಾನ ಹಾಲಕೆರೆಯ ಮಹಾಸ್ವಾಮಿಗಳಿಂದ ಶೈಕ್ಷಣಿಕವಾಗಿ ಒಂದಿಷ್ಟು ಅಭಿವೃದ್ಧಿ ಕಂಡಿರುವ ನರೇಗಲ್ ಪಟ್ಟಣವು, ಮೊದಲು ರೋಣ ತಾಲೂಕಿನಲ್ಲಿದ್ದು, ಈಗ ಗಜೇಂದ್ರಗಡ ತಾಲೂಕಿನಲ್ಲಿರುವ ನರೇಗಲ್ಲ ಪಟ್ಟಣ ಅಭಿವೃದ್ಧಿ ದೃಷ್ಟಿಯಿಂದ ತೀರ ಹಿಂದುಳಿದಿದೆ. ಸಭೆಯಲ್ಲಿದ್ದ ಎಲ್ಲರೂ ಒಕ್ಕೊರಲಿನಿಂದ ಖಂಡಿಸಿದರು.ಹೋರಾಟ ಸಮಿತಿಯ ಸದಸ್ಯ ಡಾ. ಆರ್.ಕೆ ಗಚ್ಚಿನಮಠ ಮಾತನಾಡಿ, ನಾವು ನಮ್ಮ ಪಟ್ಟಣಕ್ಕೆ ಬರಬೇಕಿದ್ದ ಎಲ್ಲ ಸರಕಾರಿ ಸೌಲಭ್ಯ ಹೇಗೆಲ್ಲ ಕಳೆದುಕೊಂಡೆವು. ಅದಕ್ಕೆ ನಮ್ಮೆಲ್ಲರ ನಿರ್ಲಕ್ಷ್ಯ ಎಂಬುದರ ವಿವರಿಸಿದರು. ಹೋರಾಟ ಸಮಿತಿ ಸದಸ್ಯ ಅಶೋಕ ಬೇವಿನಕಟ್ಟಿ ಮಾತನಾಡಿ, ಗದಗ-ವಾಡಿ ರೈಲು ಹೋರಾಟ ಸಮಿತಿ ಕೈಗೊಂಡ ಕ್ರಮಗಳನ್ನು ವಿವರಿಸುತ್ತಾ, ನರೇಗಲ್ ಅಭಿವೃದ್ಧಿ ನಿರ್ಲಕ್ಷ್ಯ ಖಂಡಿಸಿ ಹೋರಾಟದ ಅಂಗವಾಗಿ ನಡೆಸಿದ ನರೇಗಲ್ಲ ಬಂದ್‌ಗೆ ಸಾರ್ವಜನಿಕರು ನೀಡಿದ ಸಹಕಾರ ಚೆನ್ನಾಗಿತ್ತು. ಆದರೆ, ಅದು ಸಾಕಾಗಲಿಲ್ಲ. ಹೋರಾಟದ ಜೋಶ್ ಮುಂದುವರೆದಿದ್ದರೆ ಖಂಡಿತ ರೈಲು ಸಾಧ್ಯವಾಗುತ್ತಿತ್ತೋ ಪಡೆಯಲು ಹೋರಾಟ ಪ್ರಾರಂಭಿಸಬೇಕು ಎಂದರು. ಈಗಲಾದರೂ ನಾವೇಲ್ಲರೂ ನಮ್ಮ ರಸ್ತೆ, ರೈಲು ತರಲು ಮತ್ತೆ ಹೋರಾಟ ಮಾಡಲು ಮುಂದಾಗಬೇಕು ಎಂದರು.
ಮುಖಂಡ ಬಸವರಾಜ ವಂಕಲಕುಂಟಿ ಮಾತನಾಡಿ, ನರೇಗಲ್ಲ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿವೆ. ಇದರಿಂದ ಹಳ್ಳಿಗಳಿಂದ ಬರುವ ಪಕ್ಕದ ಗ್ರಾಮಸ್ಥರು ನರೇಗಲ್ಲಿಗೆ ಬಾರದಂತಾಗಿದೆ. ಪಟ್ಟಣದ ಆರ್ಥಿಕತೆ ಕುಸಿದಿದೆ. ಇದನ್ನು ಸರಿಪಡಿಸುವ ಕಾರ್ಯವಾಗಬೇಕಿದೆ ಎಂದರು.
ಸಭೆಯಲ್ಲಿ ಪಾಲ್ಗೊಂಡ ಸಾರ್ವಜನಿಕರು ರಸ್ತೆಗಳ ಬಗ್ಗೆ, ಗದಗ-ಕೃಷ್ಣಾವರ ರೈಲು, ಸನಿಹದರಲ್ಲಿಯೆ ನೆಮ್ಮದಿ ಕೇಂದ್ರ ಸ್ಥಳಾಂತರ ಎಂಬುದರ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು. ಅಲ್ಲದೆ ನರೇಗಲ್ಲದೊಡ್ಡಹೋಬಳಿಯಾಗಿದ್ದು, ಇಲ್ಲಿ ಸಬ್‌ರಜಿಸ್ಟಾರ್ ಕಚೇರಿ ಕಾರ್ಯ ನಿರ್ವಹಿಸುವಂತಾಗಬೇಕು. ವಿನಾಕಾರಣ ನರೇಗಲ್ಲದ ಜನತೆ ತಾಲೂಕಾ ಕೇಂದ್ರಕ್ಕೆ ತಿರುಗಾಡದಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕೆಂಬ ಸಲಹೆ ಕೇಳಿಬಂದವು. ಕೊನೆಗೆ ಇದಕ್ಕೆಲ್ಲ ಒಂದು ನಿರ್ದಿಷ್ಟ ಪರಿಹಾರ ಸಿಗಬೇಕೆಂದರೆ ಶಾಸಕರು ಮತ್ತು ಸಂಸದರ ಸಂವಾದ ಏರ್ಪಡಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಿದರು.
ಶರಣಪ್ಪ ಧರ್ಮಾಯತ, ವೀರಯ್ಯ ಚೌಕಿಮಠ, ಮಹೇಶ ಜೋಳದ, ಶರಣಪ್ಪ ಕಲಾಲಬಂಡಿ ಸೇರಿದಂತೆ ವಿವಿಧ ಸಂಘಟನೆಗಳ ಈವೇಳೆ ಶಿವಪುತ್ರಪ್ಪ ಸಂಗನಾಳ, ದೊಡ್ಡಯ್ಯ ಅರವಟಗಿಮಠ, ನಿಂಗಪ್ಪ ಹೊನ್ನಾಪೂರ, ಉಮೇಶ ಸಂಗನಾಳ ಅಧ್ಯಕ್ಷರು ಸದಸ್ಯರು, ನಿವೃತ್ತ ಸೈನಿಕರ ಸಂಘದ ಸದಸ್ಯರು ಇದ್ದರು.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
