ಕಲಬುರಗಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಒಳಾಂಗಣ ಬ್ಯಾಡಮಿಂಟನ್ ಕ್ರೀಡಾಂಗಣದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಮನವಿ

ಕಲಬುರಗಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಒಳಾಂಗಣ ಬ್ಯಾಡಮಿಂಟನ್ ಕ್ರೀಡಾಂಗಣದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಮನವಿ

ಕಲಬುರಗಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಒಳಾಂಗಣ ಬ್ಯಾಡಮಿಂಟನ್ ಕ್ರೀಡಾಂಗಣದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ಮನವಿ 

ಕಲಬುರಗಿ: ಬೆಂಗಳೂರಿನಲ್ಲಿರುವ ಬ್ಯಾಡಮಿಂಟನ್ ಸುಸಜ್ಜಿತ ಒಳಾಂಗಣ ಬಿಟ್ಟರೆ ಕಲಬುರಗಿಯಲ್ಲಿ ಮಾತ್ರ 6 ಬ್ಯಾಡಮಿಂಟನ್ ಕೋರ್ಟಗಳಿರುವ ಒಳಾಂಗಣ ಇರುವುದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ

ಕ್ರೀಡಾಪಟುಗಳ ಕೊರತೆ ನಮ್ಮಲ್ಲಿ ಇಲ್ಲ. ಸಾಕಷ್ಟು ಯುವಕ,ಯುವತಿಯರು ಹಾಗೂ ವಿದ್ಯಾರ್ಥಿಗಳು ಎರಡು ಹೊತ್ತು ಆಟ ಆಡುತ್ತಾರೆ .ಯುವಕರು ರೂ.500/- ಕೊಟ್ಟು ದಿನಾಲೂ ಆಟ ಆಡುತ್ತಿದ್ದಾರೆ.

ಒಳಾಂಗಣದಲ್ಲಿ ಸಮಸ್ಯೆಗಳ ಸರಮಾಲೆ ಇದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿಲ್ಲ. ಈಗಲಾದರೂ ಸರಿಪಡಿಸಿ ಕ್ರೀಡಾಪಟುಗಳಿಗೆ ಸಹಾಯ ಮಾಡಬೇಕು ಎಂದು ಅರುಣ್ ಕುಮಾರ್ ಪಾಟೀಲ್ ಅವರು ಶಾಸಕ ಅಜಯ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು

ಸಮಸ್ಯೆಗಳ ಪಟ್ಟಿ 

1) 6 ಕೋರ್ಟಗಳ ಮೇಲೆ ಮ್ಯಾಟ್ ಹಾಳಾಗಿ ಹೋಗಿದೆ.

2) ಇಲ್ಲಿರುವ ಪುರುಷ/ಮಹಿಳೆಯರ ಶೌಚಾಲಯಗಳು ಹದಗೆಟ್ಟು ಹೋಗಿವೆ.

3) ಒಳಾಂಗಣದಲ್ಲಿ ಮೇಲಾವಣಿ ಸೋರಿ ಉಡನ್ ಫ್ಲೋರಿಂಗ್ ಹಾಳಾಗಿ ಹೋಗುತ್ತಿದೆ.

4) ಈ ಒಳಾಂಗಣಕ್ಕೆಂದೇ ತಂದಿರತಕ್ಕಂತಹ ಜನರೇಟರ್ ಬೇರೆ ಸರಕಾರಿ ಇಲಾಖೆಗೆ ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿ ವಿದ್ಯುತ್ ಇಲ್ಲದಿದ್ದರೆ ಜನರೇಟರ್ ಇಲ್ಲ. ವ್ಯವಸ್ಥೆ ಮಾಡಿ.

5) ಸುಮಾರು ವರ್ಷಗಳಿಂದ ಒಳಾಂಗಣದಲ್ಲಿರುವ ರೂಮ್ ಗಳ ರಿನಿವೇಶನ್ ಮಾಡೇ ಇಲ್ಲ.

6) ಒಳಾಂಗಣದಲ್ಲಿ ವೆಂಟಲೇಟರ್‌ಗಳು ಹಾಳಾಗಿವೆ. ಇದನ್ನು ಕೂಡ ಸರಿಪಡಿಸಿ.

7) ಸುಮಾರು ವರ್ಷಗಳಿಂದ ಒಳಾಂಗಣಕ್ಕೆ ಬಣ್ಣ ಹಚ್ಚಿರುವುದಿಲ್ಲ.

8) ಕ್ರೀಡಾಪಟುಗಳಿಗೆ ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆ ಮಾಡಿ.

9) ಬೆಳಗಾವಿಯಲ್ಲಿ ಕ್ರೀಡಾ ಸಚಿವರ ಇಚ್ಛೆಯಂತೆ ಹವಾನಿಯಂತ್ರಿತ (ಎ.ಸಿ.) ಕ್ರೀಡಾಂಗಣ ಮಾಡಿದ್ದಾರೆ. ಈ ಭಾಗದ ಕ್ರೀಡಾಪಟುಗಳಿಗೆ ಮಾಡಿ ಕೊಟ್ಟರೆ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಟೂರ್ನಾಮೆಂಟ್ ಆಯೋಜನೆ ಮಾಡಲು ಸಹಾಯವಾಗುತ್ತದೆ.

10) ಸುಮಾರು ತಿಂಗಳಿಗೆ ರೂ.60,000/- ರಿಂದ 70,000/- ರವರೆಗೆ ಒಳಾಂಗಣ ಕ್ರೀಡಾಪಟುಗಳಿಂದ ಹಣ ಕಲೆಕ್ಟ್ ಮಾಡಿ ರಿಜಿನಲ್ ಕಮಿಷನರ್ ಅಕೌಂಟಿಗೆ ಹಾಕಿಯೂ ಸೌಲಭ್ಯ ವಂಚಿತವಾಗಿರುವ ಚಂದ್ರಶೇಖರ ಪಾಟೀಲ ಒಳಾಂಗಣ ಸಮಸ್ಯೆಗಳನ್ನು ಪರಿಹಾರ ಮಾಡಬೇಕೆಂದು ಕಲಬುರಗಿ , ಬ್ಯಾಡಮಿಂಟನ್ ಅಸೋಶಿಯೇಷನ್, ಜಿಲ್ಲಾ ಅಧ್ಯಕ್ಷರಾದ ಅರುಣಕುಮಾರ ಪಾಟೀಲ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ದುಂಡೇಶ್ ಸುಬೇದಾರ್, ಸತೀಶ್ ಗೋಳ, ಜಗನ್ನಾಥ್ ಪಟ್ಟಣಶೆಟ್ಟಿ, ಶರಣು ಬೂಸನೂರ್, ಉದಯ್ ಪಾಟೀಲ ಇದ್ದರು