ನರೇಗಲ್ಲನಲ್ಲಿ ಪದವೀಧರರ ಕ್ಷೇತ್ರ ಚುನಾವಣೆ: ಎಸ್.ವಿ. ಸಂಕನೂರ ಗೆಲುವಿಗೆ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ
ನರೇಗಲ್ಲನಲ್ಲಿ ಪದವೀಧರರ ಕ್ಷೇತ್ರ ಚುನಾವಣೆ: ಎಸ್.ವಿ. ಸಂಕನೂರ ಗೆಲುವಿಗೆ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ
ನರೇಗಲ್ಲ (ಗದಗ): ನರೇಗಲ್ಲ: ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರೊ. ಎಸ್.ವಿ. ಸಂಕನೂರ ಅವರು ಭರ್ಜರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ನರೇಗಲ್ಲ ಪಟ್ಟಣದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅದ್ಧೂರಿ ವಿಜಯೋತ್ಸವ ಆಚರಿಸಿದರು.
ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ನರೇಗಲ್ಲ ಪಟ್ಟಣದ ಪ್ರಮುಖ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಒಟ್ಟುಗೂಡಿ ಜಮಾಯಿಸಿದರು. ಬಿಜೆಪಿ ಪಕ್ಷದ ಬಾವುಟಗಳನ್ನು ಹಿಡಿದು, ಅಭ್ಯರ್ಥಿ ಎಸ್.ವಿ. ಸಂಕನೂರ ಹಾಗೂ ಪಕ್ಷದ ಪರವಾಗಿ ಮುಗಿಲು ಮುಟ್ಟುವಂತೆ ಜಯಘೋಷಗಳನ್ನು ಕೂಗಿದರು. ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಹಾಗೂ ಪಕ್ಷದ ಬಂಧುಗಳಿಗೆ ಸಿಹಿ ಹಂಚುವ ಮೂಲಕ ತಮ್ಮ ಅಪಾರ ಸಂತಸವನ್ನು ವ್ಯಕ್ತಪಡಿಸಿದರು.
. "ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಪ್ರೊ. ಎಸ್.ವಿ. ಸಂಕನೂರ ಅವರು ಸತತವಾಗಿ ಮೂರನೇ ಬಾರಿಗೆ ಗೆಲುವು ಸಾಧಿಸಿರುವುದು ಪಕ್ಷದ ಸಂಘಟನೆ ಹಾಗೂ ಅವರ ಜನಪರ ಸೇವೆಗೆ ಸಿಕ್ಕ ಜಯವಾಗಿದೆ. ಪದವೀಧರರು, ಶಿಕ್ಷಕರು ಮತ್ತು ನೌಕರರ ಪರವಾಗಿ ಅವರು ಸಂಸತ್ತಿನಲ್ಲಿ ಮತ್ತು ಮೇಲ್ಮನೆಯಲ್ಲಿ ಧ್ವನಿಯೆತ್ತಿ ಮಾಡಿರುವ ಕಾರ್ಯವನ್ನು ಗುರುತಿಸಿ ಮತದಾರರು ಮತ್ತೆ ಆಶೀರ್ವದಿಸಿದ್ದಾರೆ" ಎಂದು ರೋಣ ಮತಕ್ಷೇತ್ರದ ಮಾಜಿ ಶಾಸಕರಾದ ಕಳಕಪ್ಪ ಬಂಡಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪಟ್ಟಣ ಪಂಚಾಯಿತ ಸದಸ್ಯರಾದ ಉಮೇಶ ಸಂಗನಾಳಮಠ
ಸತತವಾಗಿ ಮೂರನೇ ಬಾರಿಗೆ ಎಸ್.ವಿ. ಸಂಕನೂರ ಅವರ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ ಕ್ಷೇತ್ರದ ಪದವೀಧರ ಮತದಾರರಿಗೆ ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಲಾಯಿತು. ಬಿಜೆಪಿ ಸರ್ಕಾರದ ಮತ್ತು ಅಭ್ಯರ್ಥಿಯ ಸಾಧನೆಗೆ ಸಂದ ಜಯ ಇದಾಗಿದೆ ಎಂದು ಹೇಳಿದರು
ಈ ವಿಜಯೋತ್ಸವದ ಶುಭ ಸಂದರ್ಭದಲ್ಲಿ ನರೇಗಲ್ಲ ಪಟ್ಟಣದ ಸ್ಥಳೀಯ ಬಿಜೆಪಿ ಘಟಕದ ಪ್ರಮುಖ ನಾಯಕರುಗಳಾದ , ಉಮೇಶ ಸಂಗನಾಳಮಠ, ಬಸನಗೌಡ ಪೋಲೀಸಪಾಟೀಲ, ಶಶಿಧರಗೌಡ ಸಂಕನಗೌಡ್ರ ,ನಿಂಗಪ್ಪ ಕಣವಿ, ಪುಟ್ಟಣ್ಣ ಹೊಸಮನಿ, ಯಲ್ಲಪ್ಪ ಮಣ್ಣೊಡ್ಡರ ಶ್ರೀಶೈಲಪ್ಪ ಬಂಡಿಹಾಳ, ಶಿವುಕುಮಾರ ಮಣ್ಣೊಡ್ಡರ, ಮುತ್ತಣ್ಣ ಕಡಗಾದ , ಜ್ಯೋತಿ ಪಾಯಪ್ಪಗೌಡ್ರ, ಅಕ್ಕಮ್ಮ ಮಣ್ಣೊಡ್ಡರ, ಲೋಕೇಶ ಮಣ್ಣೊಡ್ಡರ, ಮಹೇಶ ಶಿವಸಿಂಪರ, ಹಾಗೂ ಆಪಾರ ಕಾರ್ಯಕರ್ತರು ಭಾಗವಹಿಸಿದ್ದರು
ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ

