ಕಲಬುರ್ಗಿಯಲ್ಲಿ ಮತ್ತೆ ಮಾರಕಾಸ್ತ್ರಗಳ ಸದ್ದು ರೌಡಿ ಶೀಟರ್ ಕೊಚ್ಚಿ ಕೊಲೆ.
ಕಲಬುರ್ಗಿಯಲ್ಲಿ ಮತ್ತೆ ಮಾರಕಾಸ್ತ್ರಗಳ ಸದ್ದು ರೌಡಿ ಶೀಟರ್ ಕೊಚ್ಚಿ ಕೊಲೆ.
ಕಲಬುರಗಿ : ಇಲ್ಲಿಯ ರೌಡಿ ಶೀಟರ್ ಒಬ್ಬನನ್ನು ಅಮಾನುಷವಾಗಿ ಕೊಲೆ ಮಾಡಿ ಬಿಸಾಕಿದ ಘಟನೆ ನಗರದ ಹೊರವಲಯದ ಅಳಂದ ಚೆಕ್ ಪೋಸ್ಟ್ ಹತ್ತಿರದ ರಸ್ತೆಯಲ್ಲಿ ನಡೆದಿದೆ. ಸೋಮು ತಾಳಿಕೋಟೆ (40) ಎಂಬ ರೌಡಿ ಶೀಟರ್ ನನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ.
ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದಲ್ಲಿ ಕೊಲೆ ಮಾಡಿ ಅಳಂದ ಚೆಕ್ ಪೋಸ್ಟ್ ರಸ್ತೆಯ ರೈಲ್ವೆ ಹಳಿ ಹತ್ತಿರ ಮೃತ ದೇಹವನ್ನು ಎಸೆಯಲಾಗಿದೆ.
ಸೋಮು ತಾಳಿಕೋಟೆ ಪಟ್ಟಣ ಗ್ರಾಮದ ನಿವಾಸಿಯಾಗಿದ್ದು, ಕೆಲ ದಿನಗಳ ಹಿಂದೆ ಪಟ್ಟಣ ಗ್ರಾಮದ ಧಾಬಾ ಮಾಲೀಕರೊಬ್ಬರ ಜೊತೆ ಸೋಮು ಗಲಾಟೆ ಮಾಡಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಧಾಬಾ ಮಾಲೀಕನ ಮೇಲೆ ಸೋಮು ಮತ್ತು ಆತನ ಗ್ಯಾಂಗ್ ಹಲ್ಲೆ ಮಾಡಿತ್ತು ಎನ್ನಲಾಗಿದೆ.
ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ವ್ಯಾಪಕ ಶೋಧ ನಡೆಸಿದ್ದಾರೆ.